ಸುದ್ದಿಮೂಲ ವಾರ್ತೆ
ಆನೇಕಲ್, ಏ. 3: ಪಟ್ಟಣದ ಐತಿಹಾಸಿಕ ಶ್ರೀ ತಿಮ್ಮರಾಯಸ್ವಾಮಿ ದೇವಾಲಯದಲ್ಲಿ ಎರಡನೇ ಬಾರಿಗೆ ಅದ್ದೂರಿಯಾಗಿ ರಾಜಮುಡಿ ಉತ್ಸವವನ್ನು ಸಾವಿರಾರು ಜನರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿಸಲಾಯಿತು.
ಮೇಲುಕೋಟೆ ಮಾದರಿಯಲ್ಲೇ ಆನೇಕಲ್ನಲ್ಲಿ ಮಂಗಳವಾದ್ಯ ಹಾಗೂ ಪಂಚವಾದ್ಯಗಳ ನಡುವೆ ರಾಜಮುಡಿ ಉತ್ಸವವನ್ನು ಸಾವಿರಾರು ಜನರು ಕಣ್ತುಂಬಿಕೊಂಡು ದೇವರಿಗೆ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದರು.
ವೆಂಕಟರಾಜು ಕುಟುಂಬ, ಸೊಸೈಟಿ ಚನ್ನರಾಜು ಕುಟುಂಬ ಹಾಗೂ ಬೈರರಾಜು ಕುಟುಂಬದವರಿಂದ ರಾಜಮುಡಿ ಉತ್ಸವವನ್ನು ಈ ಬಾರಿ ವಿಶೇಷವಾಗಿ ಆಯೋಜನೆ ಮಾಡಲಾಗಿದೆ. ರಾಜಮುಡಿ ಉತ್ಸವ ಹಿನ್ನೆಲೆಯಲ್ಲಿ ಮಹಿಳೆಯರಿಂದ ವಿಷ್ಣು ಸಹಸ್ರನಾಮ ಪಾರಾಯಣ, ಪಂಜಿನ ಸೇವೆ ಹಾಗೂ ಆಕರ್ಷಕ ಬಾಣಬಿರಸು ಪ್ರದರ್ಶನವನ್ನು ನಡೆಸಲಾಯಿತು.
ಎಲ್ಲರೂ ಮೇಲು ಕೋಟೆಗೆ ಹೋಗಿ ರಾಜಮುಡಿ ಉತ್ಸವವನ್ನು ನೋಡಲು ಸಾಧ್ಯವಾಗುವುದಿಲ್ಲ, ಹೀಗಾಗಿ ಆನೇಕಲ್ ಪಟ್ಟಣದ ಸಾರ್ವಜನಿಕರಿಗೆ ರಾಜಮುಡಿ ಉತ್ಸವವನ್ನು ಕಣ್ತುಂಬಿಕೊಳ್ಳಲು ಎರಡನೇ ಬಾರಿಗೆ ಉತ್ಸವ ನಡೆಸಲಾಗಿದೆ ಎಂದು ರಾಜಮುಡಿ ಉತ್ಸವದ ಆಯೋಜಕರು ಮಾಧ್ಯಮಗಳಿಗೆ ಹೇಳಿಕೆ ನೀಡಿದರು.
ರಾಜಮುಡಿ ಉತ್ಸವದ ಸೇವಾ ಕರ್ತರುಗಳು ವೆಂಕಟರಾಜು ಪಂಡರಿ ಮಾಸ್ಟರ್ ಕುಟುಂಬದ ದಿಂದ ಮೋಹನ್ ರಾಜ್, ಚರಣ್ ರಾಜ್,ಸಂತೋಷ್ ಕುಮಾರ್ ಹರ್ಷಿತಾಚರಣ್ ರಾಜು, ಸೊಸೈಟಿ ಚನ್ನರಾಜು ಕುಟುಂಬದಿಂದ ನಾಗರಾಜು, ಬೈರರಾಜು ಕುಟುಂಬದಿಂದ ರೇಣುಕಾ ರಾಜು ದೇವಸ್ಥಾನದ ಪ್ರಧಾನ ಅರ್ಚಕರು ರಾಮಚಂದ್ರ ಭಟ್ಟರು ,ಏಕಾಂಗಿ (ದೇವಾಲಯದ ಪೂಜಾ ಕೈಕರ್ಯ ನಿರ್ವಾಹಕ) ಪ್ರತಾಪ್ ಸಿಂಗ್ ಬಾಲೀ ಸಹಾಯಕ ಅರ್ಜಕರು ಗೋವಿಂದ್ ಭಟ್ಟರು ಆಲಂಕಾರ ವಿಧ್ವಾನ್ ಅಭಿರಾಮ್ ಭಟ್ಟರು, ದೇವಸ್ಥಾನದ ನಿರ್ವಾಹಕ ಮಂಡಳಿಯ ವೆಂಕಟಸ್ವಾಮಿರೆಡ್ಡಿ, ದೇವಾಲಯದ ಸೇವಾ ತಂಡದಿಂದ ದೀಪು ಶ್ರೀನಿವಾಸ ಗೆಳೆಯರು ಸ್ನೇಹಿತರುಗಳಾದ ಶಶಿಧರ್ ವಿನೋದ್ ಕುಮಾರ್ ಮಂಜುನಾಥ್ ರಾಜು, ರಾಜೇಶ್ ರಾಜು, ಯಶೋವರ್ಧನ್ ವಿಜಯ ಕುಮಾರ್ ಹಾಗೂ ಶಶಿ ಕಿರಣ್ ಮತ್ತಿತರರು ಹಾಜರಿದ್ದರು.