ಸುದ್ದಿಮೂಲ ವಾರ್ತೆ
ಕೆಜಿಎಫ್, ಮೇ 2: ಬೇತಮಂಗಲ ಗ್ರಾಮದಲ್ಲಿ ಆರ್ಯವೈಶ್ಯ ಸಮುದಾಯದವರು ಪ್ರತಿವರ್ಷದಂತೆ ಈ ಬಾರಿಯೂ ಸಹ ತಮ್ಮ ಎಲ್ಲಾ ಅಂಗಡಿಗಳನ್ನು ಬಂದ್ ಮಾಡಿ ಅದ್ದೂರಿಯಾಗಿ ವಾಸವಿ ಜಯಂತಿ ಆಚರಣೆ ಮಾಡಿದರು.
ತಮ್ಮ ಕುಲದೇವತೆ ಆದಂತಹ ಕನಕ ಪರಮೇಶ್ವರಿ ದೇವಾಲಯದಲ್ಲಿ ಪೂರ್ತಿ ದಿನ ವಿಶೇಷ ಹೂವಿನ ಅಲಂಕಾರ, ಪೂಜೆ, ಅಭಿಷೇಕ, ಹೋಮ ಹವನ ಕಾರ್ಯಕ್ರಮಗಳಲ್ಲಿ ಎಲ್ಲರೂ ಕುಟುಂಬ ಸಮೇತ ಪಾಲ್ಗೊಂಡಿದ್ದರು.
ಆರ್ಯವೈಶ್ಯ ಸಮುದಾಯದ ಯುವಕರೆಲ್ಲಾ ಸೇರಿ ವಾಸವಿ ಜಯಂತಿ ಅಂಗವಾಗಿ ಬೇತಮಂಗಲ ಬಸ್ ನಿಲ್ದಾಣದ ಆವರಣದಲ್ಲಿ ಪಲಾವ್, ಮೊಸರನ್ನ, ಕಾರ ಪೊಂಗಲ್ ಮತ್ತು ನೀರಿನ ಪಾಕೆಟ್ಗಳನ್ನು ಯುವಕರು ವಿತರಿಸಿದರು.
ಮಲ್ಲಿಗೆ ಹೂವಿನ ಪಲ್ಲಕ್ಕಿ:
ಪುಷ್ಪ ರಥೋತ್ಸವವನ್ನು ಪಕ್ಷಿ ಮತ್ತು ಮಿನಿನಂತೆ ಮಲ್ಲಿಗೆ ಹೂವುಗಳಿಂದ ಸಿಂಗಾರ ಮಾಡಿದ್ದು ಅದರಲ್ಲಿ
ಕನಕ ಪರಮೇಶ್ವರಿ ದೇವತೆಯನ್ನು ಮೆರವಣಿಗೆ ಮಾಡಿದರು ಆದ್ದರಿಂದ ಭಕ್ತಾದಿಗಳ ಕಣ್ಣಿಗೆ ಅನಂದದಾಯಕವಾಗಿತ್ತು.
ಈ ಸಂದರ್ಭದಲ್ಲಿ ಸಮುದಾಯದ ಮುಖಂಡರಾದ ಶ್ರೀಹರಿ, ವಾಸವಿ ಮೂರ್ತಿ, ಪ್ರಭಾಕರ್ ಗುಪ್ತ, ವಿನು ಕಾರ್ತಿಕ್, ನಾಗಣ್ಣ, ಜನಪ್ಪ,ಚಂ ದ್ರಪ್ಪ, ರಂಗಣ್ಣ, ಬದ್ರಿ ಸುರೇಶ್, ಸಂತೋಷ್, ಕಾರ್ತಿಕ್ ಸೇರಿದಂತೆ ಯುವಕರು ಇದ್ದರು.