ಸುದ್ದಿಮೂಲ ವಾರ್ತೆ
ಆನೇಕಲ್, ನ. 05 : ಇತ್ತೀಚಿಗೆ ಬೆಂಗಳೂರಿನ ಕೂಡ್ಲುಗೇಟ್ ಸಮೀಪ ಚಿರತೆ ಕಾಣಿಸಿಕೊಂಡು ಅರಣ್ಯ ಅಧಿಕಾರಿಗಳ ಎಡವಟ್ಟಿನಿಂದ ಚಿರತೆ ಸಾವನನ್ಪ್ಪಿದ ಘಟನೆ ಮಾಸುವ ಮುನ್ನವೇ ಬೆಂಗಳೂರಿನ ಚಿಕ್ಕ ತೋಗರು ಸಮೀಪ ಚಿರತೆಯೊಂದು ಕಾಣಿಸಿಕೊಂಡಿದೆ.
ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬನ್ನೇರುಘಟ್ಟ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಜಾಗದಲ್ಲಿ ಇತ್ತೀಚಿಗೆ ಚಿರತೆ ಅಲಲ್ಲಿ ಕಾಣಿಸಿಕೊಳ್ಳುತ್ತಿದೆ. ಶನಿವಾರ ಸಂಜೆ 7:40ರ ಸಮಯದಲ್ಲಿ ಏಕಾಏಕಿ ಮನೆಯ ಬಾಗಿಲ ಬಳಿ ಕಾಣಿಸಿಕೊಂಡಿದೆ. ಮನೆ ಬಾಗಿಲ ಬಳಿ ಇದ್ಧ ಬಾಲಕ ಚಿರತೆಯನ್ನು ಕಂಡು ಬೆಚ್ಚಿಬಿದ್ದಿದ್ದಾನೆ. ಅಲ್ಲದೆ ಆ ಸಂದರ್ಭದಲ್ಲಿ ಜೋರಾಗಿ ಕೂಗಾಡಿಕ್ಕೆ ಚಿರತೆ ಅಲ್ಲಿಂದ ಓಡಿ ಹೋಗಿದೆ ಎಂದು ಪ್ರತ್ಯಕ್ಷ ದರ್ಶಿ ಅಭಿಷೇಕ್ ಗೌಡ ತಿಳಿಸಿದ್ದಾರೆ.
ಚಿರತೆ ಕಾಣಿಸಿಕೊಂಡ ಪರಿಣಾಮ ಸ್ಥಳೀಯರು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಇನ್ನು ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಿನ್ನೆ ಸುರಿದ ಧಾರಾಕಾರ ಮಳೆಯಿಂದಾಗಿ ಹೆಜ್ಜೆ ಗುರುತು ಸಹ ಪತ್ತೆಯಾಗಿಲ್ಲ. ಅಲ್ಲದೆ, ಸಿಸಿ ಕ್ಯಾಮೆರಾಗಳಲ್ಲಿ ಚಿರತೆ ಹೋರಾಟದ ಸುಳಿವು ಸಿಕ್ಕಿಲ್ಲ. ಇನ್ನು ಚಿಕ್ಕ ತೋಗೂರು ಅರಣ್ಯ ಪ್ರದೇಶ, ಕೆ ಆರ್ ಪುರಂ ಅರಣ್ಯ ವಲಯ ವ್ಯಾಪ್ತಿ ಆಗಿದ್ದು ರಾತ್ರಿಪೂರ್ತಿ ಚಿರತೆ ಹುಡುಕಾಟವನ್ನು ನಡೆಸಿದ್ದಾರೆ. ಬನ್ನೇರುಘಟ್ಟ ಮತ್ತು ಕೆ. ಆರ್. ಪುರಂ ಅರಣ್ಯ ವಲಯ ಅಧಿಕಾರಿಗಳು ಜಂಟಿ ಕಾರ್ಯಾಚರಣೆಯನ್ನು ಕೈಗೊಂಡಿದ್ದಾರೆ.