ಸುದ್ದಿಮೂಲ ವಾರ್ತೆ
ಕೆ.ಆರ್.ಪುರ ಜು.16: ಭಾರತೀಯ ಆಹಾರ ನಿಗಮದ ಕಾರ್ಯ ವೈಖರಿ ಹಾಗೂ ಆಹಾರ ಭದ್ರತಾ ಕಾಯಿದೆ ದಾಸ್ತಾನು ಸುರಕ್ಷತೆಯ ಬಗ್ಗೆ ಸರ್ಕಾರಿ ಶಾಲಾ ಮಕ್ಕಳಿಗೆ ಭಾರತೀಯ ಆಹಾರ ನಿಗಮದ ಅಧಿಕಾರಿಗಳು ತಿಳಿಸಿದರು.
ವೈಟ್ ಫೀಲ್ಡ್ ನ ಡಿಪೋದಲ್ಲಿ ನಡೆಯುತ್ತಿರುವ ಕಾರ್ಯಾಗಾರದಲ್ಲಿ ನಿಗಮದ ವೈವಾಟಿನ ಬಗ್ಗೆ ಜಿಎಚ್ ಪಿಎಸ್ ಸರ್ಕಾರಿ ಶಾಲಾ ಮಕ್ಕಳಿಗೆ ಯಾವ ಯಾವ ರಾಜ್ಯ ಗಳಿಂದ ಅಕ್ಕಿ ಗೋಧಿ ಯನ್ನು ಅಮದು ಮಾಡಿಕೊಂಡು ಅದನ್ನು ಯಾವ ರೀತಿ ಸುರಕ್ಷಿತವಾಗಿ ಇಡಬೇಕು ಮತ್ತು ತುರ್ತುಪರಿಸ್ಥಿತಿಯಲ್ಲಿ ಯಾವ ರೀತಿ ಸರಬರಾಜು ಮಾಡಲಾಗುತ್ತದೆ ತಿಳಿಸಿದರು.
ಹಾಗೇ ರೈತರಿಂದ ಖರೀದಿಸುವ ಅಕ್ಕಿಯನ್ನು ಗೋದಾಮಿನಲ್ಲಿ ಸಂಗ್ರಹಿಸಿ ಬಡವರಿಗೆ ಅಕ್ಕಿ, ಗೋಧಿ ದಾಸ್ತಾನುಗಳನ್ನು ತಲುಪಿಸುವ ಯೋಜನೆಗಳ ಬಗ್ಗೆ ವಿವರಿಸಿದರು.
ಭಾರತೀಯ ಆಹಾರ ನಿಗಮದ ವೈಟ್ ಫೀಲ್ಡ್ ಡಿಪೋ ಅಧಿಕಾರಿಗಳಾದ ಕೆ.ನಾಗೇಶ್ವರ ರಾವ್ ಮಾತನಾಡಿ, ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ, ಅಂತ್ಯೋದಯ ಅನ್ನ ಯೋಜನೆ (NFSA-AAY), ಮಧ್ಯಾಹ್ನದ ಬಿಸಿ ಊಟ (MDM), ಕಲ್ಯಾಣ ಸಂಸ್ಥೆಗಳು ಮತ್ತು ವಸತಿ ನಿಲಯಗಳ ಯೋಜನೆ, ರಾಜ್ಯ ನಾಗರಿಕ ಸರಬರಾಜು (WIF) ಸೇರಿದಂತೆ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗಿದೆ ಎಂದರು.
ಕಾರ್ಯಗಾರದಲ್ಲಿ ಟಿಸಿ ಸಜಾನಿಮೋಲ್, ಬಿ ಸಿದ್ದಯ್ಯ ನಾಯಕ್, ರಾಜಶೇಖರ್, ಎಚ್.ಎನ್. ಮೋಹನ್ ಮತ್ತು ಜಿಎಚ್ಪಿಎಸ್ ಶಾಲೆಯ ಪ್ರಾಂಶುಪಾಲರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.