ಸುದ್ದಿಮೂಲ ವಾರ್ತೆ ಬೆಂಗಳೂರು, ನ.06:
ಕಬ್ಬು ಖರೀದಿ ದರ ಹೆಚ್ಚಳ ಮಾಡುವಂತೆ ಆಗ್ರಹಿಸಿ ರೈತರು ಬೆಳಗಾವಿ ಸೇರಿ ವಿವಿಧೆಡೆ ಕಳೆದೊಂದು ವಾರದಿಂದ ಹೋರಾಟ ನಡೆಸುತ್ತಿಿರುವ ಬಗ್ಗೆೆ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಿ ಈಗ ನಿಗದಿಪಡಿಸಿರುವ ದರಕ್ಕಿಿಂತ ಹೆಚ್ಚಿಿನ ದರ ನೀಡುವಂತೆ ಮನವೊಲಿಸಲು ಶುಕ್ರವಾರ ರಾಜ್ಯದ ಎಲ್ಲಾ ಸಕ್ಕರೆ ಕಾರ್ಖಾನೆಗಳ ಮಾಲೀಕರ ಸಭೆ ಕರೆಯಲು ಮತ್ತು ಪ್ರಧಾನಿ ಭೇಟಿಗೆ ಸಮಯ ಕೇಳಲು ನಿರ್ಧರಿಸಲಾಗಿದೆ.
ಮುಖ್ಯಮಂತ್ರಿಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕಬ್ಬು ಬೆಳೆಗಾರರ ಹೋರಾಟದ ಬಗ್ಗೆೆ ಸುದೀರ್ಘವಾಗಿ ಚರ್ಚೆ ನಡೆಸಲಾಗಿದೆ.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರು, ನಮ್ಮ ಸರ್ಕಾರ ರೈತರ ಪರ ಇದ್ದು, ಕಬ್ಬು ಬೆಳೆಗಾರರು ನಡೆಸುತ್ತಿಿರುವ ಹೋರಾಟದ ಬಗ್ಗೆೆ ಸಹಾನುಭೂತಿ ಹೊಂದಿದೆ. ಕಬ್ಬಿಿಗೆ ಎ್ಆರ್ಪಿ ದರ ನಿಗದಿ ಮಾಡುವುದು ಕೇಂದ್ರ ಸರ್ಕಾರ. 2025-26ನೇ ಸಾಲಿಗೆ ಎ್ಆರ್ಪಿ ದರ ನಿಗದಿ ಮಾಡಿ ಆದೇಶ ಹೊರಡಿಸಿದೆ. ಅದನ್ನು ಜಾರಿ ಮಾಡುವುದು, ರೈತರಿಗೆ ತೂಕದಲ್ಲಿ ಅನ್ಯಾಾಯ ಆಗದಂತೆ ನೋಡಿಕೊಳ್ಳುವುದು, ಬಾಕಿ ಪಾವತಿ ಮಾಡುವಂತೆ ನಿಗಾ ವಹಿಸುವುದು ರಾಜ್ಯ ಸರ್ಕಾರದ ಕೆಲಸ ಎಂದು ಹೇಳಿದರು.
ಕಳೆದ ಕೆಲವು ದಿನಗಳಿಂದ ಬೆಳಗಾವಿ, ಬಾಗಲಕೋಟೆ ಮುಂತಾದ ಜಿಲ್ಲೆಗಳಲ್ಲಿ ನಡೆಯುತ್ತಿಿರುವ ಪ್ರತಿಭಟನೆಗಳ ಕುರಿತು ನನಗೆ ಸ್ಪಷ್ಟ ಮಾಹಿತಿ ಇದೆ. ಹಾಗಾಗಿ ನಮ್ಮ ಸಚಿವ ಸಂಪುಟದ ಸಹೋದ್ಯೋೋಗಿಗಳಿಗೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಮತ್ತು ಕಬ್ಬು ಅಭಿವೃದ್ಧಿಿ ಹಾಗೂ ಸಕ್ಕರೆ ಇಲಾಖೆಯ ಆಯುಕ್ತರಿಗೆ ಸೂಚನೆಗಳನ್ನು ನೀಡಿ ರೈತರು ಹಾಗೂ ಕಾರ್ಖಾನೆಗಳ ಮಾಲೀಕರ ಜೊತೆ ಚರ್ಚೆ ನಡೆಸುವಂತೆ ಸೂಚಿಸಲಾಗಿತ್ತು.
ಅಂತಿಮವಾಗಿ ಶೇ. 11.25 ರಿಕವರಿ ಬಂದರೆ 3,200 ರೂ. ಹಾಗೂ ಶೇ.10.25 ರಿಕವರಿ ಬಂದರೆ 3100 ರೂ. ಗಳನ್ನು (ಕಟಾವು ಮತ್ತು ಸಾಗಣೆ ವೆಚ್ಚ ಹೊರತುಪಡಿಸಿ) ಪಾವತಿಸುವಂತೆ ಕಾರ್ಖಾನೆಗಳ ಮಾಲೀಕರಿಗೆ ಮನವೊಲಿಸಿದ್ದಾರೆ. ಹಾಗೆಯೇ, ರೈತರಿಗೂ ಮನವೊಲಿಸುವ ಕೆಲಸ ಮಾಡಿದ್ದಾರೆ. ಆದರೆ, ರೈತರು ಪ್ರತಿ ಟನ್ಗೆೆ 3500 ರೂ. ನೀಡುವಂತೆ ಪಟ್ಟು ಹಿಡಿದಿದ್ದಾರೆ. ಎ್ಆರ್ಪಿ ದರ ಹೆಚ್ಚಳ ಮಾಡುವುದು ಕೇಂದ್ರ ಸರ್ಕಾರದ ಜವಾಬ್ದಾಾರಿ ಎಂದು ಹೇಳಿದರು.
ಅದಾಗ್ಯೂ ರಾಜ್ಯದಲ್ಲಿನ ಎಲ್ಲಾ ಸಕ್ಕರೆ ಕಾರ್ಖಾನೆಗಳ ಮಾಲೀಕರ ಸಭೆಯನ್ನು ಶುಕ್ರವಾರ ಬೆಳಗ್ಗೆೆ 11 ಗಂಟೆಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿಯೇ ಕರೆಯಲಾಗಿದೆ. ದರ ಹೆಚ್ಚಳ ಸೇರಿ ರೈತರ ವಿವಿಧ ಬೇಡಿಕೆಗಳನ್ನು ಅವರ ಮುಂದೆ ಇಟ್ಟು ಇನ್ನೂ ಹೆಚ್ಚಿಿನ ದರ ನೀಡುವಂತೆ ಅವರ ಮನವೊಲಿಸಲಾಗುವುದು. ಅಲ್ಲದೆ, ಮಧ್ಯಾಾಹ್ನ ಪ್ರತಿಭಟನೆ ನಡೆಯುತ್ತಿಿರುವ ಜಾಗಗಳಲ್ಲಿನ ಮುಖಂಡರನ್ನೂ ಆಹ್ವಾಾನಿಸಿ ಮತ್ತೊೊಂದು ಸಭೆ ನಿಗದಿಪಡಿಸಲಾಗಿದೆ. ರೈತ ಮುಖಂಡರು ಮಾತುಕತೆಯ ಮೂಲಕ ಪರಿಹಾರ ಕಂಡುಕೊಳ್ಳಲು ಸಭೆಗೆ ಆಗಮಿಸಬೇಕು ಎಂದು ಮನವಿ ಮಾಡಿದರು.
ಪ್ರಧಾನಿಗೆ ಪತ್ರ:
ರೈತರ ಬೇಡಿಕೆಯಂತೆ ಎ್ಆರ್ಪಿ ದರವನ್ನು ಹೆಚ್ಚಳ ಮಾಡುವಂತೆ ನಾಳೆ ಶುಕ್ರವಾರವೇ ಪ್ರಧಾನನಂತ್ರಿಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆಯಲಾಗುವುದು. ಅಲ್ಲದೆ, ನೇರವಾಗಿ ಭೇಟಿ ಮಾಡುವುದಕ್ಕೆೆ ಸಮಯಾವಕಾಶ ನೀಡುವಂತೆಯೂ ಕೋರಲಾಗುವುದು. ಪ್ರಧಾನಿಯವರು ಎಷ್ಟು ಬೇಗ ಸಮಯಾಕಾಶ ನೀಡುತ್ತಾಾರೋ ಆ ಕೂಡಲೇ ದೆಹಲಿಗೆ ತೆರಳಿ ರೈತರ ಪರವಾಗಿ ಮನವಿ ಸಲ್ಲಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಸಕ್ಕರೆಗೆ 2019 ರಲ್ಲಿ ಎಂ.ಎಸ್.ಪಿ ಯನ್ನು ಕಡೆಯದಾಗಿ ನಿಗದಿಪಡಿಸಲಾಯಿತು. ಆಗ, ಪ್ರತಿ ಕೆ.ಜಿ. ಗೆ 31 ರೂ. ನಿಗದಿ ಮಾಡಲಾಗಿತ್ತು. ಆನಂತರ ಎಂ.ಎಸ್.ಪಿ ಯನ್ನು ಪರಿಷ್ಕರಿಸಲಿಲ್ಲ. ಜೊತೆಗೆ, ಕಳೆದ ಕೆಲವು ವರ್ಷಗಳಿಂದಲೂ ಕೇಂದ್ರ ಸರ್ಕಾರವು ಸಕ್ಕರೆ ರ್ತನ್ನು ನಿಲ್ಲಿಸಿದೆ. ಕಳೆದ ವರ್ಷ ಇಡೀ ದೇಶಕ್ಕೆೆ ಕೇವಲ 10 ಲಕ್ಷ ಮೆಟ್ರಿಿಕ್ ಟನ್ ರ್ತು ಮಾಡಲು ಮಾತ್ರ ಅವಕಾಶ ನೀಡಿತ್ತು. ಕರ್ನಾಟಕವೊಂದರಲ್ಲೆ 41 ಲಕ್ಷ ಮೆಟ್ರಿಿಕ್ ಟನ್ ಉತ್ಪಾಾದನೆಯಾಗಿತ್ತು. ಈ ಕಾರಣದಿಂದಲೂ ರೈತರಿಗೆ ಸಮಸ್ಯೆೆಯಾಗುತ್ತಿಿದೆ ಎಂದರು.
ಎಥನಾಲ್ ವಿಚಾರದಲ್ಲೂ ಸಹ ಕೇಂದ್ರ ಸರ್ಕಾರ ತಾರತಮ್ಯ ಧೋರಣೆ ಅನುಸರಿಸುತ್ತಿಿದೆ. ಕರ್ನಾಟಕದಲ್ಲಿ 270 ಕೋಟಿ ಲೀಟರ್ ಉತ್ಪಾಾದನಾ ಸಾಮರ್ಥ್ಯ ಇದ್ದರೂ ಸಹ 2024-25 ರಲ್ಲಿ 47 ಕೋಟಿ ಲೀಟರ್ಗಳನ್ನು ತೈಲ ಕಂಪನಿಗಳಿಗೆ ಖರೀದಿ ಮಾಡಲು ಹಂಚಿಕೆ ಮಾಡಲಾಗಿದೆ. ಇದು ಕೇಂದ್ರ ಸರ್ಕಾರವು ರಾಜ್ಯದ ರೈತರ ಬದುಕಿನೊಂದಿಗೆ ಆಡುತ್ತಿಿರುವ ಚೆಲ್ಲಾಟಕ್ಕೆೆ ಸ್ಪಷ್ಟ ನಿದರ್ಶನವಾಗಿದೆ ಎಂದು ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡರು.
ಕೆಲವು ರೈತ ಮುಖಂಡರುಗಳು ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳ ಕುರಿತು ಪ್ರಸ್ತಾಾಪಿಸಿರುವುದು ಗಮನಕ್ಕೆೆ ಬಂದಿದೆ. ನನಗೆ ಮಾಹಿತಿ ಇರುವ ಹಾಗೆ ಮಹಾರಾಷ್ಟ್ರದಲ್ಲಿ ಸುಮಾರು 40 ಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆಗಳು ಅಲ್ಲಿ 2515 ರೂ. ರಿಂದ 3635 ರೂ. ಗಳವರೆಗೆ ಕಬ್ಬಿಿಗೆ ಬೆಲೆಗಳನ್ನು ನೀಡುತ್ತಿಿವೆ. ನಾಳೆಯ ಸಭೆಯಲ್ಲಿ ಈ ವಿಚಾರವನ್ನು ಸಹ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಹೇಳಿದರು.
ಬಿಜೆಪಿ ಅನಗತ್ಯ ರಾಜಕೀಯ:
ಕಬ್ಬಿಿಗೆ ಎ್ಆರ್ಪಿ ದರ ನಿಗದಿ ಮಾಡುವುದು ಕೇಂದ್ರ ಸರ್ಕಾರದ ಜವಾಬ್ದಾಾರಿ ಎಂದು ಗೊತ್ತಿಿದ್ದರೂ ಸಹ ಬಿಜೆಪಿ ಅನಗತ್ಯವಾಗಿ ರಾಜಕೀಯ ಮಾಡುತ್ತಿಿದೆ. ಕೆಲವು ಮುಖಂಡರು ರೈತರ ಜೊತೆಗೇ ಮೊಕ್ಕಾಾಂ ಹೂಡಿದ್ದಾರೆ. ದರ ನಿಗದಿ ಮಾಡುವ ಜವಾಬ್ದಾಾರಿ ಕೇಂದ್ರ ಸಚಿವ ಪ್ರಲ್ಹಾಾದ್ ಜೋಶಿ ಅವರ ಖಾತೆಯಾಗಿದೆ. ಆದರೆ, ಅವರೇಕೆ ಇನ್ನೂ ಬೆಳಗಾವಿಗೆ ಹೋಗಿ ರೈತರ ಜೊತೆ ಸಭೆ ನಡೆಸುತ್ತಿಿಲ್ಲ? ರೈತರು ಬಿಜೆಪಿಯವರ ಇಂತಹ ರಾಜಕೀಯ ಹುನ್ನಾಾರಕ್ಕೆೆ ಬಲಿಯಾಗಬಾರದು ಎಂದು ಸಿದ್ದರಾಮಯ್ಯ ಮನವಿ ಮಾಡಿದರು.

