ಸುದ್ದಿಮೂಲ ವಾರ್ತೆ ಕೊಪ್ಪಳ, ೆ.04:
ಗ್ರಾಾಮಗಳಿಗೆ ಕುಡಿವ ನೀರು ಒದಗಿಸುವ ವಿದ್ಯುತ್ ಪಂಪುಸೆಟ್ ಪದೇ ಪದೆ ಕೆಟ್ಟು ನೀರಿನ ಅಭಾವ ಉಂಟಾಗಿದೆ. ಇದರಿಂದಾಗಿ ಕಳೆದ ಐದಾರು ದಿನಗಳಿಂದ ನೀರು ಬಾರದೆ ಜನರು ಪರದಾಡುವಂತಹ ಸ್ಥಿಿತಿ ಬಂದಿದೆ.
ಕುಕನೂರು ತಾಲೂಕಿನ ಬನ್ನಿಿಕೊಪ್ಪ ಗ್ರಾಾಮ ಕಳೆದ ಐದಾರು ದಿನಗಳಿಂದ ನೀರು ಅಭಾವದಿಂದಾಗಿ ಜನರು ತತ್ತರಿಸಿದ್ದಾಾರೆ. ನೀರಿಗಾಗಿ ಮಕ್ಕಳು, ವಯೋವೃದ್ಧರು ಪರದಾಡುವಂತಾಗಿದೆ. ಕೊಡ ಹಿಡಿದು ನೀರು ನೀರು ಎಂದು ಮಹಿಳೆಯರು ಅಲೆದಾಡುತ್ತಿಿದ್ದಾಾರೆ. ಗ್ರಾಾಮದ ಕೆರೆಗಳಿಗೆ ಹೋಗಿ ನೀರು ತರುತ್ತಿಿದ್ದಾಾರೆ. ನಿತ್ಯ ಬಳಕೆಗೆ ನೀರು ಇಲ್ಲದೆ ಜನರು ಹೈರಾಣಾಗಿದ್ದಾಾರೆ.
ಬನ್ನಿಿಕೊಪ್ಪ ಗ್ರಾಾಮದಲ್ಲಿ 38 ಗ್ರಾಾಮಗಳ ಕುಡಿವ ನೀರಿನ ಪಂಪ್ಹೌಸಿಗೆ ನಿಲೋಗಿಪೂರದಿಂದ ನೀರು ಸರಬರಾಜು ಆಗುತ್ತಿಿದೆ. ನಿಲೋಗಿಪೂರದಿಂದ ಕವಲೂರು ಗ್ರಾಾಮದ ಪಂಪ್ಹೌಸಿಗೆ ನೀರು ಬರುತ್ತದೆ. ಕವಲೂರು ಗ್ರಾಾಮದಿಂದ ಬನ್ನಿಿಕೊಪ್ಪಕ್ಕೆೆ ನೀರು ಸರಬರಾಜು ಆಗುತ್ತದೆ. ಕವಲೂರು ಗ್ರಾಾಮದಲ್ಲಿರುವ ಪಂಪ್ಹೌಸಿನ ಮೋಟಾರ್ ಕೆಟ್ಟು ಹೋಗಿವೆ. ಇದರಿಂದ ಐದಾರು ದಿನಗಳಿಂದ ಬನ್ನಿಿಕೊಪ್ಪ ಗ್ರಾಾಮಕ್ಕೆೆ ನೀರು ಬಂದಿಲ್ಲ.
ಮೋಟಾರ್ ರಿಪೇರಿ: ನೀರಿನ ಮೊಟಾರ್ ಕೆಟ್ಟಿಿರುವುದರಿಂದ ಬನ್ನಿಿಕೊಪ್ಪ ಗ್ರಾಾಮಕ್ಕೆೆ ನೀರು ಸರಬರಾಜು ಆಗಿಲ್ಲ. ಮೋಟಾರ್ ತೊಂದರೆ ಆದ ತಕ್ಷಣ ರಿಪೇರಿ ಕಾರ್ಯ ಆದರೆ ನೀರಿನ ಅಭಾವ ಬನ್ನಿಿಕೊಪ್ಪ ಗ್ರಾಾಮಕ್ಕೆೆ ಆಗುವುದಿಲ್ಲ. ಆದರೆ ಮೊಟಾರ್ ರಿಪೇರಿಗೆ ದಿನಗಳೇ ಕಳೆಯುತ್ತಿಿರುವುದು ನೀರು ಸಮಸ್ಯೆೆ ಗ್ರಾಾಮದಲ್ಲಿ ಬೀಗಡಾಯಿಸುವಂತೆ ಮಾಡಿದೆ.
ಕೆಟ್ಟು ನಿಲ್ಲುವ ಪಂಪ್ಸೆಟ್, ಕುಡಿವ ನೀರಿಗೆ ತತ್ವಾರ

