ಸುದ್ದಿಮೂಲ ವಾರ್ತೆ,
ಮೈಸೂರು, ಮೇ 1: ಜಿಲ್ಲೆಯಲ್ಲಿ ಐವೋಲ್ಟೆಜ್ ಕ್ಷೇತ್ರವಾದ ವರುಣ ಕ್ಷೇತ್ರದಲ್ಲಿ ಹಲ್ಲೆ, ಗಲಾಟೆ ಪ್ರಕರಣಗಳು ಮುಂದುವರಿದಿವೆ.
ಸೋಮವಾರ ಪಕ್ಷವೊಂದರ ಬೂತ್ ಅಧ್ಯಕ್ಷರ ಮೇಲೆ ಹಲ್ಲೆ ನಡೆದಿದ್ದು. ಈ ಪ್ರಕರಣ ಪೊಲೀಸ್ ಠಾಣೆಯಲ್ಲಿ
ದಾಖಲಾಗಿದೆ. ವರುಣ ಕ್ಷೇತ್ರ ವ್ಯಾಪ್ತಿಯ ಟಿ. ನರಸೀಪುರ ಕಸಬಾ ಹೋಬಳಿ ಬೈರಾಪುರ ಬಡಾವಣೆ ಬೂತ್ ನಂಬರ್ 109ರಲ್ಲಿ ಬಿಜೆಪಿ ಬೂತ್ ಅಧ್ಯಕ್ಷ ದಿಲೀಪ್ ಕುಮಾರ್ ಮೇಲೆ ಕಾಂಗ್ರೆಸ್ಸಿಗರು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ.
ದೊಣ್ಣೆಯಿಂದ ದೀಲಿಪ್ ಅವರ ಬುರುಡೆಗೆ ಹೊಡೆಯಲಾಗಿದೆ. ಕ್ಷುಲ್ಲಕ ಕಾರಣವನ್ನೇ ನೆಪ ಮಾಡಿಕೊಂಡು ಕಾಂಗ್ರೆಸಿಗರು ಗಲಾಟೆ ಮಾಡಿ ಹಲ್ಲೆ ಮಾಡಿದ್ದಾರೆ ಎಂದು ದೂರಲಾಗಿದೆ.
ಟಿ. ನರಸೀಪುರ ಪೊಲೀಸರಿಗೆ ದೂರು ನೀಡಲಾಗಿದೆ. ದಿಲೀಪ್ ಕುಮಾರ್ ಅವರನ್ನು ಟಿ. ನರಸೀಪುರ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.