ಸುದ್ದಿಮೂಲ ವಾರ್ತೆ ರಾಯಚೂರು, ಡಿ.14
ಜಿಲ್ಲೆೆಯ ವಿವಿಧ ಗ್ರಾಾಮಗಳ ಸರ್ಕಾರಿ ಶಾಲೆಗಳ ಆವರಣದಲ್ಲಿ ಎಐಡಿಎಸ್ಓ ನೇತೃತ್ವದಲ್ಲಿ ಸರ್ಕಾರಿ ಶಾಲೆ ಉಳಿಸಿ ಪ್ರತಿಭಟನೆ ಹಮ್ಮಿಿಕೊಳ್ಳಲಾಗಿತ್ತು.
ಇಂದು ಜಿಲ್ಲೆೆಯ ಅಡಕಲಗುಡ್ಡ, ಸಿಂಗೇರಿ ದೊಡ್ಡಿಿ, ಶಾವಂತಗಲ್ಗ್ರಾಾಮಗಳಲ್ಲಿ ಸಂಘಟನೆ ಪದಾಧಿಕಾರಿಗಳು ಅಲ್ಲಿನ ಮಕ್ಕಳ ಪಾಲಕರ, ವಿದ್ಯಾಾರ್ಥಿಗಳ ಜೊತೆ ಸಭೆ ನಡೆಸಿ ಶಾಲೆ ಮುಚ್ಚುವ ನಿರ್ಧಾರ ಖಂಡಿಸಿ ಘೋಷಣೆ ಹಾಕಿ ಆಕ್ರೋೋಶ ವ್ಯಕ್ತಪಡಿಸಿದರು.
ಗ್ರಾಾಮಗಳಲ್ಲಿನ ಪಾಲಕರು ತಮ್ಮ ಮಕ್ಕಳ ಶಿಕ್ಷಣಕ್ಕೆೆ ಈ ಸರ್ಕಾರಿ ಶಾಲೆಯನ್ನೇ ಅವಲಂಬಿಸಿದ್ದಾಾರೆ. ಆದರೆ, ಸರ್ಕಾರ ಮ್ಯಾಾಗ್ನೆೆಟ್ ಕೆಪಿಎಸ್ ಶಾಲೆ ಹೆಸರಲ್ಲಿ ಮುಚ್ಚುವ ಹುನ್ನಾಾರ ಮಾಡಿದ್ದು 3ರಿಂದ 4 ಕಿಮೀ ದೂರದ ಶಾಲೆಗಳಿಗೆ ವಿಲೀನ ಮಾಡುವ ಮೂಲಕ ಬಡವರ ಶಿಕ್ಷಣ ಕಸಿಯುವ ಹುನ್ನಾಾರ ನಡೆಸಲಾಗಿದೆ ಎಂದು ದೂರಿದರು.
ಅಡಕಲಗುಡ್ಡದಲ್ಲಿ 50, ಸಿಂಗೇರಿ ದೊಡ್ಡಿಿಯಲ್ಲಿ 80 ಹಾಗೂ ಶಾವಂತಗಲ್ ನಲ್ಲಿ 120 ರಂತೆ ಈ ಶಾಲೆ ವಿದ್ಯಾಾರ್ಥಿಗಳಿದ್ದು ಈ ಶಾಲೆಗ ವಿಲೀನಗೊಳಿಸುವ ಕೆಲಸಕ್ಕೆೆ ಸರ್ಕಾರ, ಅಧಿಕಾರಿಗಳು ಮುಂದಾಗಬಾರದು. ಇದನ್ನು ಪಾಲಕರು, ವಿದ್ಯಾಾವಂತರು ವಿರೋಧಿಸಬೇಕು ಎಂದು ಕೋರಲಾಯಿತು.
ರೈತ ಮುಖಂಡ ಮಲ್ಲನಗೌಡ, ಸಂಘದ ಜಿಲ್ಲಾಾ ಕಾರ್ಯದರ್ಶಿ ಬಸವರಾಜ್, ಗ್ರಾಾಮಸ್ಥರಾದ ಶರಣಪ್ಪ, ರಾಘವೇಂದ್ರ, ಹುಲಿಗೆಪ್ಪ, ಶಿವರಾಜ್, ಅಂಬರೀಶ, ಮುಕ್ಕಣ್ಣ, ಅಯ್ಯಪ್ಪ ಹಾಗೂ ಹಲವಾರು ಯುವಕರು, ವಿದ್ಯಾಾರ್ಥಿಗಳು, ಪಾಲಕರಿದ್ದರು.
ವಿವಿಧ ಸರ್ಕಾರಿ ಶಾಲೆಗಳ ಮಕ್ಕಳ, ಪಾಲಕರ ಸಭೆ ಸರ್ಕಾರಿ ಶಾಲೆ ಉಳಿಸಲು ಆಗ್ರಹ

