ಸುದ್ದಿಮೂಲ ವಾರ್ತೆ
ತಿಪಟೂರು, ಸೆ. 14 : ಕೌಟುಂಬಿಕ ಕಲಹಕ್ಕೆ ಮನನೊಂದು ಮೆಟ್ರೋ ಇಂಜಿನಿಯರ್ ಆತ್ಮಹತ್ಯೆಗೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಕೆ.ಬಿ ಕ್ರಾಸ್ ಬಳಿಯ ಕುಂದೂರು ಪಾಳ್ಯದಲ್ಲಿ ನಡೆದಿದೆ.
ಮಂಜುನಾಥ್(38) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಬೆಂಗಳೂರಿನ ಮೆಟ್ರೋದಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು, 10 ವರ್ಷದ ಹಿಂದೆ ತುರುವೇಕೆರೆ ಮೂಲದ ಪ್ರಿಯಾಂಕ ಅವರ ಜತೆ ಮದುವೆಯಾಗಿತ್ತು. ಮಂಜುನಾಥ್ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಎಂಜಿನಿಯರ್ ಆಗಿದ್ದಾರೆ.
ಮದುವೆಯಾದ ಬಳಿಕ ಪತ್ನಿ ಪ್ರಿಯಾಂಕಾ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಆರೋಪ ಕೇಳಿಬಂದಿದೆ. ಇಬ್ಬರ ನಡುವೆ ಪದೇಪದೆ ಗಲಾಟೆ ಆಗುತ್ತಿತ್ತು ಎಂಬ ಅಂಶದ ಮೇಲೆ ಹಾಗೂ ಮೊಬೈಲ್ ಆಡಿಯೋ ಫೋನ್ ಕಾಲ್ ಆಧಾರದ ಮೇಲೆ ಪತ್ನಿ ಪ್ರಿಯಾಂಕ ವಿರುದ್ಧ ಕಿಬ್ಬನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಆತ್ಮಹತ್ಯೆ ತಡೆಗಟ್ಟಲು ಮತ್ತು ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ಸಹಯೋಗದೊಂದಿಗೆ SAHAI ಸಹಾಯವಾಣಿ ಕಾರ್ಯನಿರ್ವಹಿಸುತ್ತಿದೆ. ಸಂಪರ್ಕಸಂಖ್ಯೆ: 080 – 25497777