ಸುದ್ದಿಮೂಲ ವಾರ್ತೆ ಸಿಂಧನೂರು, ಡಿ.11:
ಪೊಲೀಸ್ ಇಲಾಖೆಯಿಂದ ರಚಿಸಿರುವ ರೋಡ್ ರೋಮಿಯೋ ಪಡೆ ಸಿಂಧನೂರು ನಗರದಲ್ಲಿ ಸಂಚಾರ ನಡೆಸಿ, ಶಾಲಾ-ಕಾಲೇಜುಗಳಿಗೆ ಗೈರಾಗಿ ಬಸ್ ನಿಲ್ದಾಾಣ, ದೇವಸ್ಥಾಾನ, ಹೋಟೆಲ್ ಸೇರಿದಂತೆ ಮತ್ತಿಿತರ ಕಡೆಗಳಲ್ಲಿ ತಿರುಗಾಡುತ್ತಿಿದ್ದ ವಿದ್ಯಾಾರ್ಥಿಗಳನ್ನು ಹಿಡಿದು, ಪುನಃ ತರಗತಿಗಳಿಗೆ ಕಳುಹಿಸುವ ಹೊಸ ಪ್ರಯೋಗ ನಡೆಸಿದರು.
ಪೊಲೀಸ್ ಇಲಾಖೆಯಿಂದ ರಚಿಸಿದ ಈ ತಂಡವು ಪ್ರತಿನಿತ್ಯ ಶಾಲಾ-ಕಾಲೇಜುಗಳಿಗೆ ಚಕ್ಕರ್ ಹಾಕಿ ನಗರದ ಪ್ರವಾಸಿ ಮಂದಿರ, ಕ್ರೀೆಡಾಂಗಣ, ಬಸ್ ನಿಲ್ದಾಾಣ ಮತ್ತು ಹೊರವಲಯಗಳಲ್ಲಿ ಸುಖಾ-ಸುಮ್ಮನೆ ಕುಳಿತು ಹರಟೆ ಹೊಡೆಯುತ್ತಾಾ ಸಮಯ ವ್ಯರ್ಥ ಮಾಡುತ್ತಿಿದ್ದ ವಿದ್ಯಾಾರ್ಥಿಗಳನ್ನು ಬೆನ್ನು ಹತ್ತಿಿ ಹಿಡಿದು, ಅವರವರ ಶಾಲಾ-ಕಾಲೇಜುಗಳಿಗೆ ಕರೆದುಕೊಂಡು ಹೋಗಿ ತರಗತಿಗಳಿಗೆ ಹಾಜರುಪಡಿಸಿ ಶಿಕ್ಷಕರಿಗೆ, ಉಪನ್ಯಾಾಸಕರಿಗೆ ಮತ್ತು ಪಾಲಕರಿಗೆ ಮಾಹಿತಿ ನೀಡುವ ಮೂಲಕ ವಿದ್ಯಾಾರ್ಥಿಗಳಿಗೆ ಶಾಕ್ ನೀಡಿದ್ದಾಾರೆ.
ರಾಯಚೂರು ಜಿಲ್ಲಾಾ ಪೊಲೀಸ್ ವರಿಷ್ಠಾಾಧಿಕಾರಿ ಎಂ.ಪುಟ್ಟಮಾದಯ್ಯ, ಹೆಚ್ಚುವರಿ ಜಿಲ್ಲಾಾ ಪೊಲೀಸ್ ವರಿಷ್ಠಾಾಧಿಕಾರಿಗಳಾದ ಕುಮಾರ ಸ್ವಾಾಮಿ ಹಾಗೂ ಜಿ.ಹರೀಶ್ ಅವರ ಮಾರ್ಗದರ್ಶನದಲ್ಲಿ ಸಿಂಧನೂರಿನ ಪೊಲೀಸ್ ಉಪ ಅಧೀಕ್ಷಕ ಚಂದ್ರಶೇಖರ ಜಿ, ಶಹರ ಪೊಲೀಸ್ ಠಾಣೆಯ ಪಿಐ ವೀರಾರೆಡ್ಡಿಿ, ಎಎಸ್ಐ ಮಲ್ಲಿಕಾರ್ಜುನ ಹಾಗೂ ಇತರೆ ಸಿಬ್ಬಂದಿ ಒಳಗೊಂಡು ರೋಡ್ ರೋಮಿಯೋ ಪಡೆ ರಚಿಸಲಾಗಿದೆ. ಇದು ತಿಂಗಳಿಂದ ಪ್ರತಿನಿತ್ಯ ಕಾರ್ಯ ನಿರ್ವಹಿಸುತ್ತಿಿದೆ ಎಂದು ಪಿಐ ವೀರಾರೆಡ್ಡಿಿ ತಿಳಿಸಿದರು.

