ಸುದ್ದಿಮೂಲ ವಾರ್ತೆ
ಬೆಂಗಳೂರು,ಮೇ29:ಹಿತ ಮಿತ ಆಹಾರ ಸೇವನೆ, ನಿತ್ಯನಡಿಗೆ, ವ್ಯಾಯಾಮ ಹಾಗೂ ವೈದ್ಯರ ಸಲಹೆ ಮುಂತಾದ ಮುಂಜಾಗ್ರತ ಕ್ರಮಗಳಿಂದ ಸಕ್ಕರೆ ಕಾಯಿಲೆ ಹರಡದಂತೆ ತಡೆಯಲು ಸಾಧ್ಯ ಎಂದು ಖ್ಯಾತ ವೈದ್ಯ ಪದ್ಮಶ್ರೀ ಪ್ರೊಫೆಸರ್ ಅನೂಪ್ ಮಿಶ್ರ ಹೇಳಿದರು.
ಬೆಂಗಳೂರಿನ ಬಸವೇಶ್ವರ ನಗರದ ಡಾ ಅರವಿಂದ್ ಡಯಾಬಿಟಿಕ್ ಸೆಂಟರ್, ಹೋಟೆಲ್ ಕ್ಯಾಪಿಟಲ್ನಲ್ಲಿ ಆಯೋಜಿಸಿದ್ದ ಮೇ 27-28 ರಂದು 2 ದಿನಗಳ ಕಾಲ ರಾಷ್ಟಿçÃಯ ಡಯಾಬಿಟಿಕ್ ಸಮ್ಮೇಳನ ಉಧ್ಘಾಟಿಸಿದ ಪ್ರೊ||ಮಿಶ್ರಾ ಮಾತನಾಡಿದರು.
ಸಕ್ಕರೆ ಕಾಯಿಲೆ ತಡೆಗಾಗಿ ದೇಶ ವಿದೇಶಗಳಲ್ಲಿ ಔಷಧ ವಿಚಾರದಲ್ಲಿ ಹೊಸ ಹೊಸ ಅವಿಷ್ಕಾರಗಳು ನಡೆಯುತ್ತಿವೆ. ಮುಂಜಾಗ್ರತೆ ಕ್ರಮಗಳಿಂದ ಜನರು ಸುರಕ್ಷಿತವಾಗಿಬಹುದು ಹಾಗೂ ಯಾವುದೇ ಗಾಭರಿಯಾಗುವಂತಿಲ್ಲ ಎಂದು ಪ್ರೊ ಮಿಶ್ರ ಸಲಹೆ ನೀಡಿದರು.
ದೇಶದ ಪ್ರತಿಷ್ಟಿತ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುಮಾರು 80 ಮಂದಿ ಡಯಾಬಿಟಿಸ್ ತಜ್ಞ ವೈದ್ಯರ ಪೈಕಿ ಅವದೇಶ್ ಕುಮಾರ್ ಸಿಂಗ್ (ಕೊಲ್ಕತ್ತ), ಡಾ.ಜ್ಯೋತಿದೇವ್ (ತ್ರಿವೆಂಡ್ರಮ್), ಡಾ.ವಸಂತಕುಮಾರ್ (ಹೈದರಾಬಾದ್), ಡಾ ಅರವಿಂದ ಗುಪ್ತ (ಜೈಪುರ), ಪ್ರೊ.ಬಸವನಗೌಡ (ಮೈಸೂರು), ಪದ್ಮಶ್ರೀ ಡಾ.ಬಿ.ಮೋಹನ್ ಡಾ.ಅನಿಲ್ ಕುಮಾರ್ (ಬೆಂಗಳೂರು) ಭಾಗವಹಿಸಿದವರಲ್ಲಿ ಪ್ರಮುಖರು.
ಕರೋನಾ ಕಾರಣದಿಂದ ಕಳೆದ ಮೂರು ವರ್ಷಗಳಿಂದ ಡಯಾಬಿಟಿಸ್ ತಡೆಯ ಸಮ್ಮೇಳನ ನಡೆಸಲಾಗಿರಲಿಲ್ಲ. ಡಾ. ಅರವಿಂದ್ ಡಯಾಬಿಟಿಸ್ ಸೆಂಟರ್ ಇನ್ನುಮುಂದೆ ಪ್ರತಿವರ್ಷ ಸಮ್ಮಿಟ್ ನಡೆಸಲಾಗುವುದು ಎಂದು ಆಸ್ಪತ್ರೆಯ ಮ್ಯಾನೇಜಿಂಗ್ ಡೈರೆಕ್ಟರ್ ಡಾ.ಅರವಿಂದ್ ಸ್ಪಷ್ಟ ಪಡಿಸಿದರು.
ಸಿಲಿಕಾನ್ ಸಿಟಿ ಎಂದೇ ಪ್ರಸಿದ್ದವಾಗಿದ್ದ ಬೆಂಗಳೂರು ಈಗ ಆರೋಗ್ಯಕ್ಕೆ ಕಾಮಧೇನು (ಹೆಲ್ತ್ ಸಿಟಿ) ಆಗಿ ದೇಶ ವಿದೇಶಗಳ ರೋಗಿಗಳನ್ನು ಆಕರ್ಷಿಸುತ್ತಿದೆ. ಇದು ಬೆಂಗಳೂರು ಹಾಗೂ ಭಾರತ ದೇಶದ ಹೆಮ್ಮೆ ಎಂದು ಡಾ||ಅರವಿಂದ್ ಹೇಳಿದರು. ಈ ಎರಡು ದಿನಗಳ ಸಮ್ಮೆಳನದಲ್ಲಿ ಸುಮಾರು 500 ಮಂದಿ ಡಾ.ಪ್ರತಿನಿಧಿಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ನವದೆಹಲಿಯ ಪ್ರಾಧ್ಯಾಪಕ ಪದ್ಮಶ್ರೀ ಡಾ.ಅನೂಪ್ ಮಿಶ್ರಾ ಅವರಿಗೆ ಡಾ.ಅರವಿಂದ ಜೆ ಅವರಿಂದ “ಭಗವಾನ್ ಬಸವೇಶ್ವರ” ವಚನವನ್ನು ನೀಡಿ ಗೌರವಿಸಲಾಯಿತು.