ಕಲಬುರಗಿ, ಫೆ.18: ತಮಿಳುನಾಡಿನ ಅಸೋಸಿಯೇಶನ್ ಆಫ್ ಗ್ಲೋಬಲ್ ಅಕಾಡೆಮಿಷಿಯನ್ ಅಂಡ್ ರಿಸರ್ಚರ್ಸ್ (ಎಜಿಎಆರ್) ಆಯೋಜಿಸಿದ್ದ ಕವಿಗಳ ಪ್ರತಿಷ್ಠಿತ ಕವನ ಸ್ಪರ್ಧೆಯಲ್ಲಿ ಶರಣಬಸವ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿನಿ ಉಮೇಮಾ ಅಲ್ಮಾಸ್ ಜಯಗಳಿಸುವ ಮೂಲಕ ಶರಣಬಸವ ವಿಶ್ವವಿದ್ಯಾಲಯಕ್ಕೆ ಪ್ರಶಸ್ತಿ ತಂದುಕೊಟ್ಟಿದ್ದಾರೆ.
“ಆನ್ ಆಂಥಾಲಜಿ ಆಫ್ ಮಾಡರ್ನ್ ಇಂಗ್ಲಿಷ್ ಪೊಯೆಟ್ರಿ- 2023” ವಿಷಯದ ಸ್ಪರ್ಧೆಯಲ್ಲಿ ಕುಮಾರಿ ಅಲ್ಮಾಸ್ ಅವರು ತಮ್ಮ “ಸೋಲ್ ವಿಥಿನ್ ಮಿ” ಕವನಕ್ಕಾಗಿ “ಅತ್ಯಂತ ಪ್ರತಿಷ್ಠಿತ ಕವನ ಪ್ರಶಸ್ತಿ-2023” ಅನ್ನು ಪಡೆದಿದ್ದಾರೆ. ಉಮೇಮಾ ಅಲ್ಮಾಸ್ ಅವರ ಸಾಧನೆಗೆ ಶರಣಬಸವೇಶ್ವರ ಸಂಸ್ಥಾನದ ಮಹಾದಾಸೋಹ ಪೀಠಾಧಿಪತಿ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಮಾತೋಶ್ರೀ ಡಾ.ದಾಕ್ಷಾಯಿಣಿ ಅವ್ವಾಜಿ, ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ವಿವಿಯ ಉಪಕುಲಪತಿ ಡಾ. ನಿರಂಜನ್ ವಿ ನಿಷ್ಠಿ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.