ಸುದ್ದಿಮೂಲ ವಾರ್ತೆ ರಾಯಚೂರು, ೆ.03:
ಕೇಂದ್ರ ಬಜೆಟ್ನಲ್ಲಿ ಅಂಗನವಾಡಿ ನೌಕರರಿಗೆ ವೇತನ ಹೆಚ್ಚಳ ಮಾಡದೆ ಮತ್ತು ಖಾಯಂ ಮಾಡುವ ವಿಚಾರಕ್ಕೆೆ ಮಾತು ತಪ್ಪಿಿದ್ದನ್ನು ಖಂಡಿಸಿ ಸಿಐಟಿಯು ನಿಂದ ಬಜೆಟ್ ಪ್ರತಿ ಸುಟ್ಟು ಪ್ರತಿಭಟನೆ ನಡೆಸಲಾಯಿತು.
ನಗರದ ಟಿಪ್ಪುು ಸುಲ್ತಾಾನ ಉದ್ಯಾಾನವನದ ಮುಂದಿನ ರಸ್ತೆೆಯಲ್ಲಿ ಸಿಐಟಿಯು ನೇತೃತ್ವದಲ್ಲಿ ಸ್ಕೀಮ್ ನೌಕರರಾದ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರು, ಮಧ್ಯಾಾಹ್ನ ಬಿಸಿಯೂಟ ಕಾರ್ಮಿಕರು ಮತ್ತು ಆಶಾ ಕಾರ್ಯಕರ್ತೆಯರು ಜಂಟಿಯಾಗಿ ಬಜೆಟ್ ಪ್ರತಿ ದಹಿಸಿ ಆಕ್ರೋೋಶ ವ್ಯಕ್ತಪಡಿಸಿದರು.
ರಾಜ್ಯದ ಕೇಂದ್ರ ಸರ್ಕಾರದ ಸಚಿವರುಗಳ ಮನೆ ಮುಂದೆ ಪ್ರತಿಭಟನೆ ಮಾಡಿದಾಗ ಕೇಂದ್ರ ಸಚಿವರು ದೆಹಲಿಗೆ ಆಹ್ವಾಾನಿಸಿ ಮಹಿಳಾ ಮತ್ತು ಅಭಿವೃದ್ಧಿಿ ಇಲಾಖೆ ಸಚಿವೆ ಅನ್ನಪೂರ್ಣದೇವಿ ಮತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರ ಜೊತೆ ಮಾತುಕತೆ ನಡೆಸಿ ನಿರ್ಣಯದಂತೆ ನೌಕರರು ಎಂದು ಪರಿಗಣಿಸಬೇಕು ಮತ್ತು ಕನಿಷ್ಠ ವೇತನ ಇವತ್ತಿಿನ ಬೆಲೆ ಏರಿಕೆ ಅನುಗುಣವಾಗಿ 31 ಸಾವಿರ ನಿಗದಿ ಮಾಡಬೇಕು, ಸ್ಕೀಮ್ ಗಳಲ್ಲಿ ಕೆಲಸ ಮಾಡುವ ಅಂಗನವಾಡಿ ಬಿಸಿಊಟ ಕಾರ್ಮಿಕರಿಗೆ ಒಂದೇ ಒಂದು ರೂಪಾಯಿ ಹೆಚ್ಚಳ ಮಾಡಿಲ್ಲವೆಂದು ಕೋರಿದಾಗ ಬಜೆಟ್ನಲ್ಲಿ ಖಾಯಂ ಮತ್ತು ವೇತನ ಹೆಚ್ಚಳಕ್ಕೆೆ ಕ್ರಮವಹಿಸುವ ಮಾತು ನೀಡಿ ಈಗ ಹುಸಿಗೊಳಿಸಿದ್ದಾಾಗಿ ಆಪಾದಿಸಿದರು.ಇನ್ನಾಾದರೂ ಕ್ರಮ ವಹಿಸಲು ಆಗ್ರಹಿಸಿದರು.
ಈ ಪ್ರತಿಭಟನೆಯಲ್ಲಿ ಹೆಚ್.ಪದ್ಮಾಾ, ಗೋಕಾರಮ್ಮ, ರಹಿಮತ್ ಬೇಗಂ, ಶಾಂತಮ್ಮ, ವರಲಕ್ಷ್ಮಿಿ, ಇಂದಿರಾ, ಕೆ.ಜಿ ಮಲ್ಲಿಕಾ, ಶರಣಮ್ಮ, ಆಸ್ಮಾಾಬೇಗಂ, ಚಂದ್ರಕಲಾ, ಶಾಮಲಾ, ಡಿಎಸ್ ಶರಣಬಸವ ಸೇರಿದಂತೆ ನೌಕರರು ಭಾಗವಹಿಸಿದ್ದರು.
ಬಜೆಟ್ ಪ್ರತಿ ದಹಿಸಿ ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ ಸೇವೆ ಖಾಯಂ, ವೇತನ ಹೆಚ್ಚಳ ಮಾಡದ ಕೇಂದ್ರದ ವಿರುದ್ಧ ಆಕ್ರೋಶ

