? ಸುದ್ದಿಮೂಲ ವಾರ್ತೆ ರಾಯಚೂರು, ನ.02:
ರಾಯಚೂರು ಜಿಲ್ಲೆೆಯ ಎಲ್ಲ ನಗರ ಸ್ಥಳೀಯ ಸಂಸ್ಥೆೆಗಳ ಆಡಳಿತ ಮಂಡಳಿ ಅಧಿಕಾರ ಪೂರ್ಣಗೊಂಡಿರುವುದಾಗಿ ರಾಜ್ಯ ಚುನಾವಣಾ ಆಯೋಗದ ಸೆಪ್ಟಂಬರ್ನಲ್ಲಿನ ಆದೇಶದ ಪ್ರತಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚೆೆಚ್ಚು ವೈರಲ್ ಆಗಿ ಚರ್ಚೆಗೆ ಗ್ರಾಾಸವಾಗಿದೆ.
ರಾಯಚೂರು ಜಿಲ್ಲೆೆಯ ರಾಯಚೂರು ನಗರಸಭೆ(ಪಾಲಿಕೆ), ಸಿಂಧನೂರು ನಗರಸಭೆ, ದೇವದುರ್ಗ, ಲಿಂಗಸೂಗೂರು, ಮಾನ್ವಿಿಘಿ, ಮುದಗಲ್ ಪುರಸಭೆ, ಹಟ್ಟಿಿಯ ಪಟ್ಟಣ ಪಂಚಾಯಿತಿ ಸೇರಿ ರಾಜ್ಯದ 193 ನಗರ ಸ್ಥಳೀಯ ಸಂಸ್ಥೆೆಗಳ ಚುನಾಯಿತ ಆಡಳಿತ ಮಂಡಳಿಯ ಅಧಿಕಾರ ಅವಧಿ ನವೆಂಬರ್ 2ರಂದು ಪೂರ್ಣಗೊಂಡಿದೆ ಎಂದು ಉಲ್ಲೇಖಿಸಲಾಗಿದೆ.
ಈ ಬಗ್ಗೆೆ ಸಾರ್ವತ್ರಿಿಕ ಚುನಾವಣೆ ನಡೆಸಬೇಕು ಎಂಬ ಆಯೋಗದ ಸೂಚನೆಗೆ ರಾಯಚೂರು ನಗರಸಭೆ ಸೇರಿ ಬಹುತೇಕ ಕಡೆ ಆಕ್ಷೇಪಣೆಗಳು ಕೇಳಿ ಬಂದಿವೆ.
ಚುನಾಯಿತರ ಆಕ್ಷೇಪವೇನು :
ನಗರ ಸ್ಥಳೀಯ ಸಂಸ್ಥೆೆಗಳ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆೆಯಾದ ಅವಧಿ ಪೂರ್ಣಗೊಂಡಿಲ್ಲ ಹೀಗಾಗಿ ಆಕ್ಷೇಪಣೆಗಳು ಕೇಳಿ ಬಂದಿವೆ.ಅಲ್ಲದೆ, ತಾವು ಆಯಾ ವಾರ್ಡಿನ ಚುನಾಯಿತ ಸದಸ್ಯರಾದರೂ ಪೂರ್ಣ ಪ್ರಮಾಣದಲ್ಲಿ ಅಧಿಕಾರ ಮಾಡಿಲ್ಲ ಅಲ್ಲದೆ, ಸಾರ್ವಜನಿಕರಿಗೆ ಅಗತ್ಯವಾದ ಮೂಲಸೌಕರ್ಯ, ಅನುದಾನದ ಲಭ್ಯತೆ ಬಗ್ಗೆೆ ಚುನಾಯಿತ ಸದಸ್ಯರ ಸಭೆ, ಸಾಮಾನ್ಯ ಸಭೆ ಹಾಗೂ ಬಜೆಟ್ ಸಭೆಗಳನ್ನೂ ಮಾಡಿಲ್ಲಘಿ. ಸುಮಾರು 16 ತಿಂಗಳ ಕಾಲ ಅಧಿಕಾರದಲ್ಲಿಲ್ಲ ಯಾವುದೆ ಸಭೆ ಮಾಡದ ಕಾರಣ ಸದ್ಯ ಆಡಳಿತ ನಡೆಸುತ್ತಿಿರುವ ಚುನಾಯಿತ ಮಂಡಳಿಯ 2ನೇ ಅವಧಿ 15 ತಿಂಗಳಾಗಿಲ್ಲಘಿ. ಹೀಗಾಗಿ ನವೆಂಬರ್ 2 ರನಂತರ ಆಡಳಿತಾಧಿಕಾರಿ ನೇಮಿಸಲೂಬಾರದು, ಡಿಸೆಂಬರ್ ಅಂತ್ಯದೊಳಗೆ ಸಾರ್ವತ್ರಿಿಕ ಚುನಾವಣೆ ವಾರ್ಡುಗಳಿಗೂ ನಡೆಸಬಾರದು ಎಂದು ಆಯೋಗಕ್ಕೆೆ ಹಾಗೂ ನ್ಯಾಾಯಾಲಯಗಳಲ್ಲೂ ಚುನಾಯಿತ ರಾಜಕೀಯ ಪಕ್ಷಗಳ ಆಡಳಿತ ಮಂಡಳಿಗಳು ಪ್ರಶ್ನಿಿಸಿ ನ್ಯಾಾಯಕ್ಕಾಾಗಿ ಮೊರೆ ಹೋಗಿವೆ.
ಆಯೋಗದ ವಾದವೇನು :
ಚುನಾವಣೆ 2018ರಲ್ಲಿ ನಡೆದಿದೆ. ಹೀಗಾಗಿ ಸಂವಿಧಾನದ ಅನುಚ್ಛೇದ 243(1)ರಲ್ಲಿ ತಿಳಿಸಿದಂತೆ ಕರ್ನಾಟಕ ಪೌರಸಭೆಗಳ ಅಧಿನಿಯಮ 1964ರ ಪ್ರಕರಣ 18-1(ಎ)ರಂತೆ ಸಾರ್ವತ್ರಿಿಕ ಚುನಾವಣೆಯಲ್ಲಿ ಚುನಾಯಿತನಾದ ಅಥವಾ ನಾಮನಿರ್ದೇಶಿತನಾದ ಸದಸ್ಯರ ಪದಾವಧಿಯು ಆಯಾ ನಗರಸಭೆಯ ಆಡಳಿತ ಮಂಡಳಿತ ಮೊದಲ ಸಭೆಗಾಗಿ ನೇಮಕ ಮಾಡಲಾದ ದಿನಾಂಕದಿಂದ ಆರಂಭವಾಗತಕ್ಕದ್ದು ಎಂದು ತಿಳಿಸಲಾಗಿದೆ. ಹೀಗಾಗಿ, 2018-20ರ ಅವಧಿಯ ಚುನಾವಣೆಯ ನಂತರ ನಡೆದ ಪ್ರಥಮ ಸಭೆಯ ದಿನಾಂಕವನ್ನೆೆ ಸಂಸ್ಥೆೆಯ ಆಡಳಿತ ಮಂಡಳಿಯ 5 ವರ್ಷಗಳ ಆರಂಭ ಎಂದು ಪರಿಗಣಿಸಲಾಗುತ್ತದೆ ಎಂದು ಆಯೋಗ ಪ್ರತಿಪಾದಿಸಿದೆ.
ಅಲ್ಲದೆ,2ನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾಾನಗಳಿಗೆ ಚುನಾವಣೆ ನಡೆದ ದಿನಾಂಕವನ್ನು ಸದಸ್ಯರ ಪದಾವಧಿಗಾಗಿ ಪರಿಗಣಿಸಲಾಗುವುದು ಎಂಬ ಮಾಹಿತಿಯನ್ನು ಆಕ್ಷೇಪಣೆ ಸಲ್ಲಿಸಿದವರಿಗೆ ಗಮನಕ್ಕೆೆ ತಂದು ಕ್ರಮ ವಹಿಸಲು ಆಯೋಗದ ಅಧೀನ ಕಾರ್ಯದರ್ಶಿ ಸೂಚಿಸಿದ್ದಾಾರೆ.
ಈ ಆದೇಶದ ಪ್ರತಿ ಕಳೆದ ಎರಡು ದಿನಗಳಿಂದಲೂ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚೆೆಚ್ಚು ಹಂಚಿಕೆಯಾಗುವ ಮೂಲಕ ಈಗಿರುವ ಚುನಾಯಿತ ಮಂಡಳಿಯ ಅಧಿಕಾರದ ಅವಧಿ ಪೂರ್ಣಗೊಂಡಿದೆ ಎಂದು ಚರ್ಚೆಯಾಗುತ್ತಿಿದೆ.
ಆದರೆ, ರಾಯಚೂರು ಮಹಾನಗರ ಪಾಲಿಕೆ ಸೇರಿ ಸುಮಾರು 90ಕ್ಕೂ ಅಧಿಕ ನಗರಸ್ಥಳೀಯ ಸಂಸ್ಥೆೆಯ ಚುನಾಯಿತ ಮಂಡಳಿಗಳು ಆಯೋಗದ ಈ ಆದೇಶವನ್ನು ಪ್ರಶ್ನಿಿಸಿ ನ್ಯಾಾಯಾಲಯದಲ್ಲಿ ಪ್ರಕರಣ ಹೂಡಿದ್ದಾಾರೆ. ಅದು ಸದ್ಯ ವಿಚಾರಣೆ ಹಂತದಲ್ಲಿರುವುದರಿಂದ ಸಂಸ್ಥೆೆಗಳಲ್ಲಿ ಆಡಳಿತಾಧಿಕಾರಿ ನೇಮಕದ ಬಗ್ಗೆೆ ಗೊಂದಲವಿದ್ದು ನ್ಯಾಾಯಾಲಯದ ಮುಂದಿನ ತೀರ್ಪಿನ ಮೇಲೆ ಸ್ಪಷ್ಟತೆ ಸಿಗಲಿದೆ ಎಂಬ ಮಾಹಿತಿ ಅಧಿಕಾರಿಗಳಿಂದಾಗಿದೆ.

