ಸುದ್ದಿಮೂಲ ವಾರ್ತೆ ಬಳ್ಳಾರಿ, ಜ.06:
ಬ್ಯಾಾನರ್ ಗಲಾಟೆಯ ಗದ್ದಲದ ಸದ್ದು ಅಡಗುತ್ತಿಿದ್ದಂತೆಯೇ ಅದು ವಿಭಿನ್ನ ಸ್ವರೂಪಗಳನ್ನು ಪಡೆದುಕೊಂಡು ತಿರುವುಗಳನ್ನು ಪಡೆಯುತ್ತಲೇ ಇದೆ. ಕಾಂಗ್ರೆೆಸ್ ಪರವಾಗಿ ಉಪ ಮುಖ್ಯಮಂತ್ರಿಿ ಡಿ.ಕೆ. ಶಿವಕುಮಾರ್ ಅವರು ಮಂಗಳವಾರ ಬಳ್ಳಾಾರಿಗೆ ಭೇಟಿ ನೀಡಿದ್ದು, ಬಿಜೆಪಿ ಪರವಾಗಿ ಕೇಂದ್ರ ಸಚಿವ ಪ್ರಹ್ಲಾಾದ್ ಜೋಷಿ ಮತ್ತು ಮಾಜಿ ಮುಖ್ಯಮಂತ್ರಿಿ ಬಸವರಾಜ ಬೊಮ್ಮಾಾಯಿ ಅವರು ಬಳ್ಳಾಾರಿಗೆ ಬುಧವಾರ ಭೇಟಿ ನೀಡುವ ಸಾಧ್ಯತೆಗಳು ಹೆಚ್ಚಿಿವೆ.
ಈ ಮಧ್ಯೆೆ ಪೊಲೀಸ್ ತನಿಖಾ ತಂಡವು ಶಾಸಕ ಜಿ. ಜನಾರ್ಧನರೆಡ್ಡಿಿ ಅವರ ಮನೆ ಮತ್ತು ಸುತ್ತಲೂ ವಿವಿಧ ರೀತಿಯ ಶೋಧಗಳನ್ನು ನಡೆಸುತ್ತಿಿದೆ. ಬಿ. ಶ್ರೀರಾಮುಲು ಅವರು ಮಾತನಾಡಿ, ‘ಕಾಂಗ್ರೆೆಸ್ನಿಂದ ಸತ್ಯವನ್ನು ಮರೆಮಾಚುವ ಪ್ರಯತ್ನ ನಡೆದಿದೆ. ಮುಖ್ಯಮಂತ್ರಿಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿಿ ಡಿ.ಕೆ. ಶಿವಕುಮಾರ್ ಅವರು ಶಾಸಕ ನಾರಾ ಭರತರೆಡ್ಡಿಿ ಅವರನ್ನು ಪಕ್ಕದಲ್ಲಿ ಕೂಡಿಸಿಕೊಂಡರೆ, ಪೊಲೀಸರಿಂದ ನಿಷ್ಪಕ್ಷಪಾತ ತನಿಖೆ ನಿರೀಕ್ಷಿಸಲು ಸಾಧ್ಯವೇ? ಮೃತ ರಾಜಶೇಖರನ ಸಾವಿಗೆ ನ್ಯಾಾಯ ಸಿಗಲಿದೆಯೇ? ಇಡೀ ಪ್ರಕರಣವನ್ನು ಮುಚ್ಚಿಿಹಾಕುವ ಪ್ರಯತ್ನ ನಡೆದಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಗಲಭೆಯ ಸಂದರ್ಭದಲ್ಲಿ ನಡೆದ ನೂಕುನುಗ್ಗಲಿನ ಆವೇಶದಲ್ಲಿ ಖಾರದಪುಡಿ ಮತ್ತು ಕಟ್ಟಿಿಗೆ ಬಳಕೆ ಆಗಿರಬಹುದು. ಗಲಭೆಗೆ ಸಂಬಂಧಿಸಿದಂತೆ ಎರಡೂ ಕಡೆಯವರ ಬಂಧನವಾಗಿದೆ. ಪೊಲೀಸರು ಅಗತ್ಯವಿದ್ದಲ್ಲಿ ನನ್ನನ್ನು ಬಂಧಿಸಲಿ, ನಾನು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸುವುದಿಲ್ಲ. ಗಲಭೆ ನಿಯಂತ್ರಿಿಸಲು – ಜಗಳ ಬಿಡಿಸಲು ಬಂದಿದ್ದ ಜಿ. ಜನಾರ್ಧನರೆಡ್ಡಿಿಯ ಪಕ್ಕದಲ್ಲಿಯೇ ಗುಂಡು ಹಾರಿದೆ ಎಂದರು.
ಶಾಸಕ ಜಿ. ಜನಾರ್ಧನರೆಡ್ಡಿಿ ಅವರು ಮಾತನಾಡಿ, ಡಿ.ಕೆ. ಶಿವಕುಮಾರ್ ಅವರು ಶಾಸಕ ನಾರಾ ಭರತರೆಡ್ಡಿಿಗೆ ಬೆಂಬಲ ಕೊಡಲು ಬರುತ್ತಿಿರುವುದರಿಂದ ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಲ ಸಾಧ್ಯವಿಲ್ಲ. ಡಿ.ಕೆ. ಶಿವಕುಮಾರ್ಗೆ ಕಸಿಯಲು ಏನೂ ಇಲ್ಲ. ಇಂಥಹವರು ರಾಜ್ಯದ ಮುಖ್ಯಮಂತ್ರಿಿ ಆದಲ್ಲಿ ರಾಜ್ಯದ ಪಾಡೇನು? ಎಂದು ಟೀಕಿಸಿದರು.
ಈ ಮಧ್ಯೆೆ, ಕಾಂಗ್ರೆೆಸ್ ಪಾಳೆಯದಿಂದ ಗಲಭೆಯ ಸಂದರ್ಭದಲ್ಲಿ ಖಾರದ ಪುಡಿಯನ್ನು ಎರಚಿತ ಮಹಿಳೆಯರ ಮತ್ತು ಕಟ್ಟಿಿಗೆಗಳನ್ನು ಹಿಡಿದುಕೊಂಡು ರಾಜಾರೋಷವಾಗಿ ಗಲಭೆ ನಡೆದ ಸ್ಥಳದಲ್ಲಿ ತಿರುಗಾಡಿದ ವೀಡಿಯೋಗಳನ್ನು ಬಿಡುಗಡೆ ಮಾಡಿ, ಬಿಜೆಪಿ ಪಾಳಯದಲ್ಲಿ ಆತಂಕ ಮೂಡಿಸುವ ಕೆಲಸ ನಡೆದಿದೆ.
ಡಿ.ಕೆ. ಶಿವಕುಮಾರ್ ಅವರು ಅಧಿಕಾರಿಗಳ ಮತ್ತು ಜಿಲ್ಲೆೆಯ ಎಲ್ಲಾಾ ಶಾಸಕರು, ಸಂಸದರು ಮತ್ತು ಮೇಯರ್ ಅವರ ಪ್ರತ್ಯೇಕ ಸಭೆಗಳನ್ನು ನಡೆಸಿದ್ದಾಾರೆ. ಜನಪ್ರತಿನಿಧಿಗಳ ಸ್ಥಳದಲ್ಲಿ ಶಾಸಕ ನಾರಾ ಭರತರೆಡ್ಡಿಿ ಅವರ ಆತ್ಮಸ್ಥೈರ್ಯ ತುಂಬುವ – ವಿಶ್ವಾಾಸ ವೃದ್ಧಿಿಸುವ ವಿಚಾರಗಳನ್ನು ವ್ಯಕ್ತಪಡಿಸಿ, ಬುದ್ಧಿಿವಾದ ಹೇಳಿದ್ದಾಾರೆ ಎಂದು ಮೂಲಗಳು ತಿಳಿಸಿವೆ.
ನಿಲ್ಲದ ಮುಖಂಡರ ಭೇಟಿ, ಚರ್ಚೆ ; ಆರೋಪ – ಪ್ರತ್ಯಾರೋಪ

