ಸುದ್ದಿಮೂಲ ವಾರ್ತೆ
ಮೈಸೂರು, ಮೇ 18: ಸಾಂಸ್ಕ್ರತಿಕ ನಗರದ ಒಂಟಿಕೊಪ್ಪಲಿನ ಬಳಿ ಹಾಡು ಹಗಲೇ ರೌಡಿಶೀಟರ್ನನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಗುರುವಾರ ಸಂಜೆ ನಡೆದಿದೆ. ಅದು ಪೊಲೀಸ್ ಠಾಣೆ ಸಮೀಪದಲ್ಲಿ ನಡೆದಿರುವುದು ಜನರನ್ನು ಭಯಭೀತರನ್ನಾಗಿಸಿದೆ.
ಒಂಟಿಕೊಪ್ಪಲ್ ವಾಸಿ ಚಂದು ಅಲಿಯಾಸ್ ಚಂದ್ರಶೇಖರ್ ಅಲಿಯಾಸ್ ಕುಂಡ ಕೊಲೆಯಾದವನು.
ಒಂಟಿಕೊಪ್ಪಲ್ ಮುಖ್ಯ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಅದೂ ವಿ.ವಿ.ಪುರಂ ಪೋಲಿಸ್ ಠಾಣೆ ಅನತಿ ದೂರದಲ್ಲಿ ಸಂಜೆ ನಾಲ್ಕೂವರೆ ಗಂಟೆಯಲ್ಲಿ ಕೊಲೆಯಾಗಿದೆ. ಚಂದು ಅಲ್ಲೆ ನಾನ್ ವೆಜ್ ಫಾಸ್ಟ್ ಫುಡ್ ನಡೆಸುತ್ತಿದ್ದ. ಅಂಗಡಿ ಬಳಿ ಬಂದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಈತ ದೇವು ಮರ್ಡರ್ ಕೇಸ್ನಲ್ಲಿ ಆರೋಪಿ ಆಗಿದ್ದನು. ಕೊಲೆ ಸೇಡಿಗೆ ಚಂದುವನ್ನು ಕೊಲೆ ಮಾಡಲಾಗಿದೆ ಎಂದು ಹೇಳಲಾಗಿದೆ.