ಸುದ್ದಿಮೂಲ ವಾರ್ತೆ
ರಾಯಚೂರು,ಆ.19:ರಾಯಚೂರಿನ ಶಕ್ತಿ ನಗರದ ಕೆಪಿಸಿಎಲ್ ಪ್ಲಾಂಟ್ ನಲ್ಲಿ ನಡೆದ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಗಂಭೀರವಾಗಿ ಗಾಯಗೊಂಡ ಗುತ್ತಿಗೆ ಕಾರ್ಮಿಕ ಸಾವು.
ಮೃತ ಕಾರ್ಮಿಕನನ್ನು ನಿಂಗಪ್ಪ ಎಂದು ಗುರುತಿಸಲಾಗಿದೆ.
ವೆಲ್ಡಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾಗ ಈ ಅವಘಡ ನಡೆದಿದೆ ಎಂದು ಗೊತ್ತಾಗಿದೆ.
ಶನಿವಾರ ಎಂದಿನಂತೆ ಕೆಲಸ ಮಾಡುತ್ತಿದ್ದಾಗ ಸಂಭವಿಸಿದ ಘಟನೆಗೆ ಗಾಬರಿಯಾದ ಉಳಿದ ಕಾರ್ಮಿಕರು ತಕ್ಷಣ ಕೆಪಿಸಿಎಲ್ ಆಸ್ಪತ್ರೆಗೆ ಕರೆದೊಯ್ದಿದ್ದು ಚಿಕಿತ್ಸೆಗೆ ಕರದೊಯ್ದರು ಫಲಕಾರಿಯಾಗದೆ ಮೃತನಾಗಿದ್ದಾನೆ ಎಂದು ತಿಳಿದು ಬಂದಿದೆ.
ಗಂಭೀರವಾಗಿ ಗಾಯಗೊಂಡಿದ್ದು ಕಾರ್ಮಿಕ ಪ್ರಜ್ಞೆ ತಪ್ಪಿದ್ದ. ಕೆಲಸ ಮಾಡುವ ಸಂದರ್ಭದಲ್ಲಿ ಸುರಕ್ಷತಾ ಸಲಕರಣೆಗಳಿರ ಲಿಲ್ಲ ಎಂದು ಕಾರ್ಮಿಕರು ಆಪಾದಿಸಿದ್ದಾರೆ.
ಮೃತಪಟ್ಟ ಮಾಹಿತಿ ಪಡೆಯುತ್ತಿದ್ದಂತೆ ಉಳಿದ ಕಾರ್ಮಿಕರು ಪ್ರತಿಭಟನೆ ಆರಂಭಿಸಿದ್ದಾರೆ.