ಸುದ್ದಿಮೂಲ ವಾರ್ತೆ ಕಲಬುರಗಿ, ಡಿ.15:
ಇಲ್ಲಿನ ದೂರದರ್ಶನ ಕೇಂದ್ರದ ಸಮಗ್ರ ಸುಧಾರಣೆಗಾಗಿ ಈಗಾಗಲೇ ಉನ್ನತ ಅಧಿಕಾರಿಗಳಿಗೆ ಸೂಕ್ತ ಸಲಹೆ ನೀಡಲಾಗಿದ್ದು ಅಭಿವೃದ್ಧಿಿಗೆ ಪ್ರಾಾಮಾಣಿಕ ಪ್ರಯತ್ನ ಮಾಡಲಾಗುತ್ತಿಿದೆ ಎಂದು ಆಕಾಶವಾಣಿ, ದೂರದರ್ಶನ ದಕ್ಷಿಣ ವಲಯದ ಹೆಚ್ಚುವರಿ ಮಹಾನಿರ್ದೇಶಕ ಭಾಗ್ಯವಾನ್ ಹೇಳಿದರು.
ಕಲಬುರಗಿ ಆಕಾಶವಾಣಿ ಕೇಂದ್ರದಲ್ಲಿ ಕಲಬುರಗಿಯ ಸಾಹಿತಿ, ಕಲಾವಿದರು ಹಾಗೂ ಚಿಂತಕರ ಜೊತೆ ನಡೆಸಿದ ಮುಕ್ತ ಸಂವಾದದಲ್ಲಿ ಮಾತನಾಡಿದ ಅವರು, ತಾನು ಕೂಡ ಕಲ್ಯಾಾಣ ಕರ್ನಾಟಕ ಭಾಗದ ಬೀದರ್ ಜಿಲ್ಲೆಯವನಾಗಿದ್ದು ದೂರದರ್ಶನ ಕೇಂದ್ರದ ಉಳಿವು ಮತ್ತು ಬೆಳವಣಿಗೆಗಾಗಿ ಪ್ರಾಾಮಾಣಿಕವಾಗಿ ಅನೇಕ ಸಲಹೆಗಳನ್ನು ನೀಡಿದ್ದೇನೆ. ಈಗಾಗಲೇ ಕೆಲವೊಂದು ನೆರವು ನೀಡಲಾಗಿದೆ. ಈ ಕುರಿತಾಗಿ ನಿರ್ಧಾರ ಕೈಗೊಳ್ಳುವವರು ಕೇಂದ್ರ ಸರಕಾರದ ಅಧೀನದಲ್ಲಿ ಬರುವ ಪ್ರಸಾರ ಭಾರತಿ ಆಗಿರುವುದರಿಂದ ಎಲ್ಲಾ ಸಮಸ್ಯೆೆಗಳನ್ನು ಅವರ ಗಮನಕ್ಕೆೆ ತರಲಾಗುವುದು. ನಿಮ್ಮ ಎಲ್ಲಾ ಬೇಡಿಕೆಗಳು ಗಮನದಲ್ಲಿದ್ದು ನನ್ನ ಕೈಯಲ್ಲಿ ಏನೂ ಇಲ್ಲ. ತನ್ನ ವ್ಯಾಾಪ್ತಿಿ ಮೀರಿದ ಬೇಡಿಕೆಗಳನ್ನು ಉನ್ನತಾಧಿಕಾರಿಗಳ ಗಮನಕ್ಕೆೆ ತಂದು ಪೂರ್ಣ ಸಹಾಯ ಮಾಡಲಾಗುವುದು ಎಂದರು.
ಕಲಬುರಗಿ ದೂರದರ್ಶನ ಮತ್ತು ಆಕಾಶವಾಣಿಯು ಈ ಭಾಗದ ಎರಡು ಕಣ್ಣುಗಳಿದ್ದಂತೆ ಸಂಸ್ಕೃತಿ ಪ್ರಸಾರಕ ಸಂಸ್ಥೆೆಗಳಾಗಿ ಅತ್ಯುನ್ನತ ಕೊಡುಗೆಗಳನ್ನು ನೀಡಿದೆ. ಮಾತ್ರವಲ್ಲದೆ ಈ ಭಾಗದಲ್ಲಿ ಅನೇಕ ಬರಹಗಾರರನ್ನು, ಕತೆಗಾರರನ್ನು, ಸಾಹಿತಿಗಳನ್ನು ನಿರ್ಮಾಣ ಮಾಡಿದೆ. ದೂರದರ್ಶನ ಕೇಂದ್ರವು ಹಳೆಯ ತಾಂತ್ರಿಿಕ ವ್ಯವಸ್ಥೆೆಯನ್ನು ಹೊಂದಿರುವ ಕಾರಣ ಉನ್ನತ ದರ್ಜೆಯ ಗುಣಮಟ್ಟದ ಕಾರ್ಯಕ್ರಮ ನಿರ್ಮಾಣ ಕಷ್ಟ ಸಾಧ್ಯವಾಗಿದೆ. ಕೇಂದ್ರವನ್ನು ಅತ್ಯಾಾಧುನಿಕವಾಗಿ ಅಭಿವೃದ್ಧಿಿಪಡಿಸುವುದಲ್ಲದೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ ಉತ್ತಮ ಮಟ್ಟದ ಕಾರ್ಯಕ್ರಮ ಪ್ರಸಾರ ಮಾಡಲು ಅನುಮಾಡಿ ಕೊಡಬೇಕು. ಗ್ರೇಡೆಡ್ ಕಲಾವಿದರಿಗೆ ಬೆಂಗಳೂರು ಮತ್ತು ಕಲಬುರಗಿಯಲ್ಲಿ ಅವಕಾಶ ಕಲ್ಪಿಿಸಬೇಕು. ಈಗಾಗಲೇ ವಿಮಾನ ನಿಲ್ದಾಾಣ ಕಾರ್ಯಾಚರಣೆ ಸ್ಥಗಿತಗೊಂಡಿದ್ದು ದೂರದರ್ಶನ ಕೇಂದ್ರವನ್ನು ಮುಚ್ಚುಗಡೆ ಮಾಡದಂತೆ ಸಾಹಿತಿಗಳು, ಕಲಾವಿದರು ಒಕ್ಕೊೊರಲಿನಿಂದ ಬೇಡಿಕೆ ಮುಂದಿಟ್ಟರು. ಕೇಂದ್ರ ಸರಕಾರವು ದೂರದರ್ಶನ ಕೇಂದ್ರ ಮುಚ್ಚಲು ಮುಂದಾದರೆ ಬೀದಿಗಿಳಿದು ತೀವ್ರ ಹೋರಾಟ ಮಾಡಲಾಗುವುದು. ಜಿಲ್ಲೆಯ ಸಚಿವರ ಮನೆಯ ಮುಂದೆ ಘೇರಾವ್ ಹಾಕಿ ಧರಣಿ ಮಾಡಲಾಗುವುದು. ಮುಂದಿನ ಹದಿನೈದು ದಿನಗಳೊಳಗೆ ಸಂಬಂಧಪಟ್ಟ ಇಲಾಖೆಯವರು ಅಭಿವೃದ್ಧಿಿಯ ಕುರಿತಂತೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಾಯಿಸಿದರು.
ಸಂವಾದ ಕಾರ್ಯಕ್ರಮದಲ್ಲಿ ಸಿ.ಎಸ್ ಮಾಲಿ ಪಾಟೀಲ್, ಶರಣು ಪಪ್ಪಾಾ, ಡಾ. ಸ್ವಾಾಮಿರಾವ್ ಕುಲಕರ್ಣಿ, ಬಸವರಾಜ್ ಕೊನೇಕ್, ಡಾ. ವಿಶಾಲಾಕ್ಷಿ ರೆಡ್ಡಿಿ , ಸುರೇಶ್ ಬಡಿಗೇರ್,ಮಾಲಾ ಕಣ್ಣಿಿ,ಭೀಮಣ್ಣ ಬೋನಾಳ್, ಮಹಿಪಾಲ ರೆಡ್ಡಿಿ ಮುನ್ನೂರು, ಪ. ಮನು ಸರ್ಗ, ಬಾಬುರಾವ್ ಕೋಬಾಳ, ನಾರಾಯಣ ಜೋಶಿ, ಬಸವರಾಜ ನಂದಿಧ್ವಜ ಮತ್ತಿಿತರ ಅನೇಕ ಗಣ್ಯರು ಉಪಸ್ಥಿಿತರಿದ್ದರು. ನಿಲಯದ ತಾಂತ್ರಿಿಕ ವಿಭಾಗದ ಸಹಾಯಕ ನಿರ್ದೇಶಕ ಗೋಪಾಲ ನಾಯಕ್ ಸ್ವಾಾಗತಿಸಿದರು. ಕಾರ್ಯಕ್ರಮ ಮುಖ್ಯಸ್ಥ ಬಿ ಸಿದ್ದಣ್ಣ, ಕಾರ್ಯಕ್ರಮ ನಿರ್ವಹಣಾಧಿಕಾರಿ ಸಂಗಮೇಶ್ ಉದ್ಘೋೋಷಕರಾದ ಶಾರದಾ ಜಂಬಲದಿನ್ನಿಿ, ಮಹಮ್ಮದ್ ಅಬ್ದುಲ್ ರವ್ೂ, ಅನುಷಾ, ಜಿ.ವಿ ಕುಲಕರ್ಣಿ ಮತ್ತಿಿತರರಿದ್ದರು. ಪ್ರಭು ನಿಷ್ಠಿಿ ಕಾರ್ಯಕ್ರಮ ನಿರೂಪಿಸಿದರು.
ಕಲಬುರಗಿ ದೂರದರ್ಶನ ಕೇಂದ್ರದ ಸುಧಾರಣೆಗೆ ಪ್ರಾಮಾಣಿಕ ಪ್ರಯತ್ನ: ಭಾಗ್ಯವಾನ್

