*ಸುದ್ದಿಮೂಲ ವಾರ್ತೆ
ಕುರ್ಡಿ, ಏ, 9: ಮಾನ್ವಿ ತಾಲೂಕಿನ ಕುರ್ಡಿ ಗ್ರಾಮದ ಮೆಥೋಡಿಸ್ಟ್ ಚರ್ಚ್ ನಲ್ಲಿ ಭಾನುವಾರ ಯೇಸುಕ್ರಿಸ್ತನ ಪುನರುತ್ಥಾನದ ಆಚರಿಸಲಾಯಿತು.
ಗ್ರಾಮದಲ್ಲಿ ಕ್ರೈಸ್ತ ಸಮುದಾಯ ಹಾಗೂ ಅನುಯಾಯಿಗಳು ಯೇಸುಕ್ರಿಸ್ತನ ಸಮಾಧಿ ಹತ್ತಿರ 41 ದಿನಗಳಿಂದ ಉಪವಾಸ ಪ್ರಾರ್ಥನೆ, ಗುಡ್ ಫ್ರೈಡೆ, ಖರ್ಜೂರು ಗರಿಗಳ ಭಾನುವಾರು, ವಿಶೇಷ ಪ್ರಾರ್ಥನೆ ಕೂಟಗಳು, ಉಪವಾಸ ಇರುವ ಜನರಿಗೆ ಊಟದ ವ್ಯವಸ್ಥೆ, ಗುಡ್ ಫ್ರೈಡೆ ಹಾಗೂ ಈಸ್ಟರ್ ಹಬ್ಬ ಆಚರಣೆ ಮಾಡಿದರು.
ಗ್ರಾಮದಲ್ಲಿ ಪ್ರತಿ ಶುಕ್ರವಾರ ಐದು ವಾರ, ವಿಶೇಷ ಪ್ರಾರ್ಥನೆ ಕೂಟಗಳು ಚರ್ಚ್ ಆವರಣದಲ್ಲಿ ಬೇರೆ ಬೇರೆ ಕಡೆಯಿಂದ ಬಂದಂತಹ ಫಾಸ್ಟರ್ ಗಳು ಸಂದೇಶ ನೀಡಿದ್ದರು.ಶಾಂತಿ ಪ್ರಾರ್ಥನೆಗಾಗಿ ಆರು ಏರಿಯಾಗಳಲ್ಲಿ ವಿಶೇಷ ಆರಾಧನೆಗಳು ಹಮ್ಮಿಕೊಂಡಿತ್ತು.
ಖರ್ಜೂರು ಗರಿಗಳ ಭಾನುವಾರು ಯೇಸು ಕ್ರಿಸ್ತನು ಸರ್ವರಲ್ಲಿ ಸಾಮಾನ್ಯತೆ ಬದುಕಿ ತೋರಿಸಿದ್ದಾನೆ, ಆದ್ದರಿಂದ ಯೇಸುಕ್ರಿಸ್ತನ್ನು ಕತ್ತೆಯ ಮೇಲೆ ಭಾವಚಿತ್ರ ಇಟ್ಟು ಊರಿನ ಹೃದಯ ಭಾಗದಲ್ಲಿ ಮೆರವಣಿಗೆ ಮಾಡಿದರು,
*ಫಾಸ್ಟರ್ ರೆ. ಪ್ರಮೋದ್ ಸ್ಯಾಮುವೇಲ್ ಮಾತನಾಡಿ* ಪಕ್ಕ ಹಬ್ಬದ ಮುಂದೆ ಯೇಸು ತಾನು ಈ ಲೋಕವನ್ನು ತಂದೆ ಬಳಿಗೆ ಹೋಗಬೇಕಾದ ಕಾಲ ಬಂತೆಂದು ತಿಳಿದುಕೊಂಡು ಲೋಕದಲ್ಲಿರುವ ತನ್ನವರನ್ನು ಪ್ರೀತಿಸಿ ಪರಿಪೂರ್ಣವಾಗಿ ಪ್ರೀತಿತ್ತಾ ಬಂದನು, ಪಾಪಿಗಳು ಕ್ಷಮಾಪಣೆ, ಮನುಷ್ಯನ ಮರಣದ ನಂತರ ನಿತ್ಯ ಜೀವ, ಲೋಕಕ್ಕೆ ಶಾಂತಿ, ಪ್ರೀತಿ, ರಕ್ಷಣಿ,
ಲೋಕದ ಪಾಪಗಳಿಗೋಸ್ಕರ ಶಿಲುಬೆಯ ಮೇಲೆ ಮರಣ ಹೊಂದಿದ ಯೇಸುಕ್ರಿಸ್ತನು 3 ನೇ ದಿನದಲ್ಲಿ ಪುನರುತ್ಥಾನ ಆದ ಮೇಲೆ ದೇವರು ಮರಣವನ್ನು ಜಯಿಸಿದ್ದು ಜನರಿಗೆ ಸಮಾಧಾನ, ಸಂತೋಷ, ತಂದಿದೆ ಹೇಳಿದರು. ನಂತರ ಚರ್ಚ್ ಜಮಾಯಿಸಿ ವಿಶೇಷ ಆರಾಧನೆ ಹಾಗೂ ಪ್ರಾರ್ಥನೆ ಮಾಡಿದರು.
ಬೆಳಗಿನ ಜಾವ 3 ಗಂಟೆಗೆ ಆತನ ಸಮಾಧಿಯಲ್ಲಿ ವಿಶೇಷವಾಗಿ ಆರಾಧನೆ ಮಾಡಿ ದಾರಿ ಮಧ್ಯೆ ಮೆರವಣಿಗೆ ಮೂಲಕ ಯೇಸು ಪುನರುತ್ಥಾನ ಆಗಿದ್ದಾನೆಂದು ಕೂಗುತ್ತಾ ಸಾಗಿದರು.
ಮೂರನೇ ದಿನದಲ್ಲಿ ಯೇಸು ಎದ್ದು ಬಂದ ಸ್ಮರಣೆ ಹಾಗೂ ಪುನರುತ್ಥಾನ ಆದ ಕಾರಣ ಇಲ್ಲಿನ ಜನರು ಆಚಾರ-ವಿಚಾರವಾಗಿ ಕ್ರೈಸ್ತ ಸಮುದಾಯದ ಬಾಂಧವರು ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡುತ್ತಾರೆ ಎಂದರು.
*ಈ ಸಂದರ್ಭದಲ್ಲಿ ಫಾಸ್ಟರ್ ರೆ. ಪ್ರಮೋದ್ ಸ್ಯಾಮುವೇಲ್, ಫಾಸ್ಟರ್ ಪ್ರಭಾಕರ್, ಉಗ್ರಾಣಿಕಾರು, ಮಾಜಿ ಉಗ್ರಾಣಿಕರು, ಎಂವೈಎಫ್, ಡಬ್ಲೂಸಿಎಸ್ ಸಿ, ಗ್ರಾಮದ ಕ್ರೈಸ್ತ ಅನುಯಾಯಿಗಳಿದ್ದರು.*