ಸುದ್ದಿಮೂಲ ವಾರ್ತೆ ರಾಯಚೂರು, ಡಿ.25:
ಕ್ರಿಿಸ್ಮಸ್ ಹಬ್ಬದ ಹಿನ್ನೆೆಲೆಯಲ್ಲಿ ರಾಯಚೂರಿನಲ್ಲಿ ಶಾಸಕ ಡಾ.ಶಿವರಾಜ ಪಾಟೀಲ, ವಿವಿಧ ಪಕ್ಷದ ಮುಖಂಡರು ಚರ್ಚ್ಗಳಿಗೆ ತೆರಳಿ ವಿಶೇಷ ಪ್ರಾಾರ್ಥನೆಯಲ್ಲಿ ಪಾಲ್ಗೊೊಂಡು ಹಬ್ಬ ಆಚರಿಸಿದರು.
ಇಂದು ರಾಯಚೂರಿನ ಮೆಥೋಡಿಸ್ಟ್ಘಿ, ಆಗಾಪೆ, ಕ್ಯಾಾಥೋಲಿಕ್, ಇನ್ಫೆೆಂಟ್ ಜೀಸಸ್ ಮತ್ತಿಿತರ ಚರ್ಚ್ಗಳಲ್ಲಿ ಯೇಸುವಿನ ಜನ್ಮ ದಿನದ ನಿಮಿತ್ತ ಕ್ರೈಸ್ತಬಾಂಧವರು ಬೆಳಿಗ್ಗೆೆ ಸಾಮೂಹಿಕವಾಗಿ ವಿಶೇಷ ಪ್ರಾಾರ್ಥನೆ ಸಲ್ಲಿಸಿದರು. ಅಲ್ಲದೆ, ಸಂಗೀತದ ಮೂಲಕ ಯೇಸುವಿನ ಜೀವನಗಾಥೆ ತಿಳಿಸಿ ಬೈಬಲ್ ಸಂದೇಶ ಸಾರಿದರು.
ಯೇಸುವಿನ ತೊಟ್ಟಿಿಲಲ್ಲಿ ನಾಮಕರಣ ಮಾಡಿದರಲ್ಲದೆ, ಯೇಸು ಪ್ರಭು ಹುಟ್ಟಿಿದ ದಿನವಾಗಿದ್ದರಿಂದ ಕೇಂದ್ರಿಿಯ ಮೇಥೋಡಿಸ್ಟ್ನಲ್ಲಿ ಕೇಕ್ ಕತ್ತರಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಶಾಸಕ ಡಾ.ಶಿವರಾಜ ಪಾಟೀಲ ಕ್ರಿಿಸ್ಮಸ್ ಹಬ್ಬ ಸರ್ವರ ಬಾಳಲ್ಲಿ ಸುಖ ಶಾಂತಿ ತರಲಿ. ಸಮಾಜಮುಖಿಯಾಗಿ ಹಲವು ವರ್ಷಗಳಿಂದ ಕ್ರೈಸ್ತ ಸಮುದಾಯ ಮಾಡುತ್ತಿಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಯೇಸು ಕ್ರಿಿಸ್ತನ ಸಂದೇಶದಂತೆ ಎಲ್ಲರೂ ಸಹಬಾಳ್ವೆೆಘಿ, ಪ್ರೀತಿಯ ಹಂಚಿ ಬದುಕು ಸಾಗಿಸೋಣ ಎಂದು ಹೇಳಿದರು.
ಕ್ರಿಿಸ್ಮಸ್ ಆಚರಣೆ ಕಾರ್ಯಕ್ರಮದಲ್ಲಿ ಪಾಲಿಕೆ ಮಾಜಿ ಸದಸ್ಯೆೆ ಲಕ್ಷ್ಮೀಘಿ, ಸ್ಟೀವನ್ ಬಿನ್ನಿಿಘಿ, ರವೀಂದ್ರ ಜಲ್ದಾಾರ್, ಕಡಗೋಲು ಆಂಜನೇಯ್ಯಘಿ, ಸೇರಿದಂತೆ ಅನೇಕರು ನಗರದ ವಿವಿಧ ಚರ್ಚ್ ಗಳಿಗೆ ಭೇಟಿ ನೀಡಿ ಸಿಹಿ ಹಂಚಿ ಸನ್ಮಾಾನಿಸುವ ಮೂಲಕ ಶುಭ ಕೋರಿ ಚರ್ಚ್ ನ ಧರ್ಮಗುರುಗಳ ಆಶೀರ್ವಾದ ಪಡೆದರು.
ಸಡಗರ ಸಂಭ್ರಮದಿಂದ ಕ್ರಿಿಸ್ಮಸ್ ಆಚರಣೆ , ವಿಶೇಷ ಪ್ರಾಾರ್ಥನೆೆ

