ಸುದ್ದಿಮೂಲ ವಾರ್ತೆ ಚಿತ್ತಾಾಪುರ, ನ.16:
ತೀವ್ರ ಕುತೂಹಲ ಮೂಡಿಸಿದ ಆರ್ಎಸ್ಎಸ್ ಪಥಸಂಚಲನವು ಪೊಲೀಸರ ಸರ್ಪಗಾವಲಿನಲ್ಲಿ ಸುಮಾರು 300 ಜನ ಗಣವೇಶಧಾರಿಗಳಿಂದ ಯಶಸ್ಸಿಿಯಾಗಿ ಜರುಗಿತು.
ಪಟ್ಟಣದ ಬಜಾಜ್ ಕಲ್ಯಾಾಣ ಮಂಟಪದಿಂದ ಆರಂಭವಾದ ಪಥಸಂಚಲನವು ಬಸವೇಶ್ವರ ವೃತ್ತ, ಬಸ್ ನಿಲ್ದಾಾಣ ವೃತ್ತ, ಅಂಬೇಡ್ಕರ್ವೃತ್ತ, ರಾಘವೇಂದ್ರ ಖಾನಾವಳಿ, ಕೆನರಾ ಬ್ಯಾಾಂಕ್, ತಾಪಂ ಕಚೇರಿ ವೃತ್ತದ ಮೂಲಕ ಬಜಾಜ್ ಕಲ್ಯಾಾಣ ಮಂಟಪಕ್ಕೆೆ ತಲುಪಿತು.
300 ಜನ ಗಣವೇಷಧಾರಿಗಳು ಹಾಗೂ 50 ಜನ ಘೋಷವಾದಕರಿಂದ ಪಥ ಸಂಚಲನ ನಡೆಯಿತು.
ಭಾರತ್ ಮಾತಾಕಿ ಜೈ, ವಂದೇ ಮಾತರಂ ಎಂದು ಸಹಸ್ರಾಾರು ಜನರು ಘೋಷಣೆ ಕೂಗಿದದರು.
ಇದೇ ವೇಳೆ ಪಥಸಂಚಲನದಲ್ಲಿ ಭಾಗವಹಿಸಿದ ಗಣವೇಶಧಾರಿಗಳ ಮೇಲೆ ಸಾರ್ವಜನಿಕರು ಪುಷ್ಪಾಾರ್ಚನೆ ಮಾಡಿದರು.
ಪಟ್ಟಣಕ್ಕೆೆ ಸಂಪರ್ಕಿಸುವ ನಾಲ್ಕೂ ರಸ್ತೆೆಗಳಲ್ಲಿ ಪೊಲೀಸರು ನಾಕಾ ಬಂದಿ ಹಾಕಿ, ಪಟ್ಟಣ ಪ್ರವೇಶಿಸುವ ಬಸ್ ಸೇರಿದಂತೆ ಬಹುತೇಕ ಎಲ್ಲ ವಾಹನಗಳನ್ನೂ ತಪಾಸಣೆಗೆ ಒಳಪಡಿಸುತ್ತಿಿದ್ದರು. ಪಥಸಂಚಲನ ಸಾಗುವ ಸಮಯದಲ್ಲಿ ಹತ್ತು ಡ್ರೋೋನ್ ಕ್ಯಾಾಮೆರಾಗಳು ದೃಶ್ಯ ಸೆರೆ ಹಿಡಿದು ನಿಗಾ ವಹಿಸಿದ್ದವು. ಸಮಗ್ರ ದೃಶ್ಯ ಸೆರೆ ಹಿಡಿಯಲೆಂದು ಡ್ರೋೋನ್ ಮುಖಾಂತರ ವಿಡಿಯೊ ಕ್ಯಾಾಮೆರಾಗಳನ್ನು ಬಳಸಿದ್ದರು.
ಈ ಸಂದರ್ಭದಲ್ಲಿ ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳನ್ನು ಬಂದೋಬಸ್ತ್ ಗೆ ನಿಯೋಜಿಸಲಾಗಿತ್ತು.

