ಸುದ್ದಿಮೂಲ ವಾರ್ತೆ ರಾಯಚೂರು, ಡಿ.13:
ಆರೋಗ್ಯ ಜೀವನಕ್ಕೆೆ ಶಾಲೆ, ಮನೆಯ ಸುತ್ತ ಪೌಷ್ಟಿಿಕ ತರಕಾರಿಯ ತೋಟ ಬೆಳೆಸಲು ಮಕ್ಕಳಿಗೆ ಕೃಷಿ ವಿಜ್ಞಾನಿ ಡಾ.ಮಲ್ಲಾಾರೆಡ್ಡಿಿ ಹೇಳಿದರು.
ಇಂದು ತಾಲೂಕಿನ ದುಗನೂರಿನ ಸರ್ಕಾರಿ ಮಾದರಿ ಹಿರಿಯ ಪ್ರಾಾಥಮಿಕ ಶಾಗೆೆ ಕೃಷಿ ವಿಜ್ಞಾನಿಗಳ ತಂಡ ಭೇಟಿ ನೀಡಿ ಮಕ್ಕಳಿಗೆ ಪೌಷ್ಟಿಿಕ ತೋಟದ ಮಹತ್ವ ತಿಳಿಸಿದರು.
ಮನುಷ್ಯನ ಜೀವನಕ್ಕೆೆ ಬಹಳ ಮುಖ್ಯವಾದುದ್ದು ಆರೋಗ್ಯ ಇದರ ರಕ್ಷಣೆ ಪೌಷ್ಟಿಿಕ ಆಹಾರದಿಂದ ಸಾಧ್ಯಘಿ. ಹಾಗಾಗಿ ಪೌಷ್ಟಿಿಕ ತೋಟ ಬೆಳಸುವುದು ಬಹಳ ಪ್ರಮುಖವಾಗಿದೆ ಎಂದು ತಿಳಿಸಿದರು.
ಹಿರಿಯ ಕೃಷಿ ವಿಜ್ಞಾನಿಗಳಾದ ಡಾ.ಹೇಮಲತಾ ಇವರು ಮಕ್ಕಳಿಗೆ ತೋಟದ ತಯಾರಿ ಹೇಗೆ ಮಾಡಿಕೊಳ್ಳಬೇಕು ಎಂದು ಪ್ರಾಾತ್ಯಕ್ಷೆ ಮಾಡಿ ಮಾರ್ಗದರ್ಶನ ಮಾಡಿದರು.
ವಿಜ್ಞಾನಿಗಳಾದ ಡಾ. ಶ್ರೀವಾಣಿ ಕೀಟಗಳ ಕುರಿತು ಅದರಲ್ಲಿ ವಿಶೇಷವಾಗಿ ಜೇನಿನ ಹುಳುಗಳ ಮಾಹಿತಿ ನೀಡಿ ಮಕ್ಕಳಿಗೆ,ಮಕರಂದ ಎಲ್ಲಿ ಇರುತ್ತೆೆ ,ಜೇನು ನೊಣ ಮಕರಂದವನ್ನು ಯಾವ ವಿಧದಲ್ಲಿ ಹುಡುಕುತ್ತವೆ ಎಂದು ಚಟುವಟಿಕೆ ಮೂಲಕ ವಿವರಿಸಿದರು.ವಿಜ್ಞಾನಿಗಳಾದ ಡಾ.ವೀಣಾ ಇವರು ಶುದ್ಧ ಮತ್ತು ಸಂಸ್ಕರಣೆಯ ಆಹಾರ ನಿತ್ಯ ಜೀವನಕ್ಕೆೆ ಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯಗುರುಗಳಾದ ಗೂರ, ಸಹಶಿಕ್ಷಕರಾದ ಚಂದ್ರಶೇಖರ ನಾಯ್ಕ್ಘಿ, ಸಂಪತರಾಜ್, ಪುಲಿ ಅಂಜಿನೇಯ್ಯ, ಮಲ್ಲೇಶ, ನರೇಶಕುಮಾರ,ನವೀನ್ ಕುಮಾರ, ಮಹೇಶ ಕುಮಾರ ವಿದ್ಯಾಾರ್ಥಿಗಳಿದ್ದರು.
ದುಗನೂರು ಶಾಲೆಗೆ ಕೃಷಿ ವಿಜ್ಞಾನಿಗಳ ತಂಡ ಭೇಟಿ ಶಾಲೆ, ಮನೆ ಸುತ್ತ ಪೌಷ್ಟಿಕ ತೋಟ ಬೆಳೆಸಿ-ಡಾ.ಮಲ್ಲಾಾರೆಡ್ಡಿ

