ಸುದ್ದಿಮೂಲ ವಾರ್ತೆ ಮಾನ್ವಿಿ, ಜ.07:
ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳ ವಿವಿಧ ತಂಡ ಬುಧವಾರ ಮಾನ್ವಿಿ ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯ, ಪುರಸಭೆ ಹಾಗೂ ಭೂದಾಖಲೆ ಮತ್ತು ಮಾಪನ ಇಲಾಖೆಯ ಕಚೇರಿಗಳಿಗೆ ಪ್ರತ್ಯೇಕ ಭೇಟಿ ನೀಡಿ ಅಲ್ಲಿನ ಅಧಿಕಾರಿಗಳ, ಸಿಬ್ಬಂದಿಗಳ ಕಾರ್ಯ ವೈಖರಿ, ಕಡತ, ದಾಖಲೆಗಳನ್ನು ಪರಿಶೀಲನೆ ನಡೆಸಿದರು.
ಬೆಂಗಳೂರು ಲೋಕಾಯುಕ್ತ ನಿರೀಕ್ಷಕ ಆನಂದ ನೇತೃತ್ವದಲ್ಲಿ ಶಿಕ್ಷಣ ಇಲಾಖೆಗೆ ಭೇಟಿ ನೀಡಿದ ಅಧಿಕಾರಿಗಳ ತಂಡ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ದೊಡ್ಡಮನಿ ಇವರ ಗೈರು ಹಾಜರಿಯಲ್ಲಿ ಇಲಾಖೆಯ ಇತರ ಅಧಿಕಾರಿಗಳಿಂದ ದಾಖಲೆಗಳನ್ನು ಪಡೆದು ಪರಿಶೀಲಿಸಿದರು.
ಶಿಕ್ಷಣ ಇಲಾಖೆಯ 20 ಅಂಶಗಳ ಕಾರ್ಯಕ್ರಮಗಳ ಸಂಪೂರ್ಣ ಮಾಹಿತಿ, ಸರ್ಕಾರಿ ಶಾಲೆಗಳ ಮತ್ತು ಮಕ್ಕಳ ಮಾಹಿತಿ, ಕೊಠಡಿಗಳ ಸಂಖ್ಯೆೆ, ಮಕ್ಕಳ ಸುರಕ್ಷತೆ, ಮೂಲ ಸೌಕರ್ಯಗಳಾದ ಶೌಚಾಲಯ, ಕುಡಿಯುವ ನೀರು, ಶಿಕ್ಷಕರ ಸಂಖ್ಯೆೆ, ಶಿಕ್ಷಕರ ಕೊರತೆ, ಸಿಬ್ಬಂದಿಗಳ ಹಾಜರಾತಿ, ಮಕ್ಕಳ ಕಲಿಕೆಗೆ ಅಡ್ಡಿಿಯಾಗಿರುವ ತಾಂತ್ರಿಿಕ ತೊಂದರೆಗಳು, ಸಿಬ್ಬದಿ ಸಮಸ್ಯೆೆ, ಸ್ವಚ್ಚ ಭಾರತ ಅಭಿಯಾನದಡಿಯಲ್ಲಿ ಕೈಗೊಂಡ ಶೌಚಾಲಯಗಳ ನಿರ್ಮಾಣ, ಮಕ್ಕಳಿಗೆ ವಿತರಿಸಿದ ಶೂ, ಸಾಕ್ಸ್, ಪುಸ್ತಕ, ಅಕ್ಷರ ದಾಸೋಹ ವಿವಿಧ ವಿಷಯಗಳ ಕುರಿತು ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ ಸರಕಾರಕ್ಕೆೆ ವರದಿ ನೀಡಲಾಗುವುದು. ಲೋಪಗಳು ಕಂಡು ಬಂದಲ್ಲಿ ನೋಟೀಸ್ ನೀಡಿ ಕ್ರಮಕೈಗೊಳ್ಳಲಾಗುವುದು ಎಂದು ಲೋಕಾಯುಕ್ತ ಅಧಿಕಾರಿ ತಿಳಿಸಿದರು.
ಅದೇರೀತಿ ಪಟ್ಟಣದ ಪುರಸಭೆ ಕಚೇರಿಗೆ ಬೆಂಗಳೂರಿನ ಪಿ.ಐ.ರಾಜಶೇಖರಯ್ಯ ಹಾಗೂ ಬೆಳಗಾವಿ ಡಿ.ವೈ.ಎಸ್.ಪಿ. ಭರತರೆಡ್ಡಿಿ ನೇತೃತ್ವದಲ್ಲಿ ಭೇಟಿ ನೀಡಿ ವಿವಿಧ ಕಡತಗಳನ್ನು ಪರಿಶೀಲಿಸಿದರು.
ಸರ್ಕಾರದಿಂದ ಪುರಸಭೆಗೆ ಬಂದಿರುವ ಸರ್ಕಾರದ ಅನುದಾನ, ಅವುಗಳ ಬಳಕೆ, ಪುರಸಭೆಯಿಂದ ಸಂಗ್ರಹಿಸಲಾದ ತೆರಿಗೆ ಹಾಗೂ ಬಾಕಿ ಇರುವ ತೆರಿಗೆ, ಸಾರ್ವಜನಿಕರಿಗೆ ನಿರ್ಮಿಸಲಾಗಿರುವ ಸಾಮೂಹಿಕ ಶೌಚಲಾಯಗಳ ವ್ಯವಸ್ಥೆೆ, ನಿರ್ವಹಣೆ, ನೂತನ ಲೇಔಟ್, ಹಾಜರಾತಿ, ಸಕಾಲ ನಿರ್ವಹಣೆ, ಮಾಹಿತಿ ಹಕ್ಕು ಅರ್ಜಿಗಳ ನಿರ್ವಹಣೆ, ಪುರಸಭೆ ಮುಖ್ಯಾಾಧಿಕಾರಿಗಳ ಹಾಗೂ ಸಿಬ್ಬಂದಿಗಳ ಪೋನ್ ಪೇ, ಪುರಸಭೆ ಬಜೆಟ್ ಪ್ರತಿ, ಕಂದಾಯ ಪ್ರತಿ, ಅಡಿಟ್ ವರದಿ, ಪುರಸಭೆಯ ವಾಹನಗಳ ಸಂಖ್ಯೆೆ ಹಾಗೂ ಬಳಕೆ, ಸಿ.ಸಿ.ಕ್ಯಾಾಮಾರಗಳ ನಿರ್ವಹಣೆ, ಜನರಿಗೆ ಒದಗಿಸುತ್ತಿಿರುವ ಕುಡಿಯುವ ನೀರು ಹಾಗೂ ಮೂಲಸೌಕರ್ಯಗಳು, ಬಿ.ಖಾತಾ, ಎ.ಖಾತಗಳ ಮಾಹಿತಿ, ಪೌರಕಾರ್ಮಿಕರಿಗೆ ನೀಡುತಿರುವ ಸರ್ಕಾರಿ ಸೌಲಭ್ಯಗಳು, ತ್ಯಾಾಜ್ಯ ವಿಲೇವಾರಿ, ಸಿಬ್ಬಂದಿಗಳ ಕೊರತೆ , ಸಾರ್ವಜನಿಕರ ಕುಂದುಕೊರತೆಗಳ ನಿವಾರಣೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆೆ ದಾಖಲೆಗಳನ್ನು ಸಂಗ್ರಹಿಸಿ ಪರಿಶೀಲಿಸಿದರು.
ಹಾಗೇಯೇ ಸಾರ್ವಜನಿಕ ದೂರುಗಳ ಆಧಾರದ ಮೇಲೆ ಬಸ್ ನಿಲ್ದಾಾಣದ ಹತ್ತಿಿರದ ಮಳಿಗೆಗಳ ಹರಾಜು ವಿಳಂಬ, ನಿರುಪಯುಕ್ತ ಟೌನ್ ಹಾಲ್, ಇದರ ಬಳಕೆ, ಪಟ್ಟಣದ ಬೀದಿನಾಯಿಗಳಿಗೆ ಲಸಿಕೆ, ಹಾಗೂ ಸ್ಥಳಾಂತರ, ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ಸಾಮೂಹಿಕ ಶೌಚಾಲಯಗಳ ವ್ಯವಸ್ಥೆೆ, ಉದ್ಯಾಾನವನಗಳ ನಿರ್ವಹಣೆ ಸೇರಿದಂತೆ ವಿವಿಧ ಅಂಶಗಳ ಬಗ್ಗೆೆ ಪುರಸಭೆ ಮುಖ್ಯಾಾಧಿಕಾರಿ ಪರಶುರಾಮ ದೇವಮಾನೆ ಅವರಿಂದ ಅಗತ್ಯ ದಾಖಲೆಗಳನ್ನು ಪಡೆದು ಪರಿಶೀಲಿಸಿದರು.
ಅದೇರೀತಿ ಹೊಸಪೇಟೆಯ ಲೋಕಾಯುಕ್ತ ಡಿ.ವೈ.ಎಸ್.ಪಿ ಸಚಿನ್ ಛಲವಾದಿ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಭೂದಾಖಲೆಗಳ ಮತ್ತು ಮಾಪನ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಭೂಮಾಪನ ಅಧಿಕಾರಿ ಮಹಮ್ಮದ್ ನೂರುದ್ದೀನ್ ಅವರಿಂದ ಅಗತ್ಯ ದಾಖಲೆಗಳನ್ನು ಪಡೆದು ಪರಿಶೀಲಿಸಿದರು. ರೈತರಿಂದ ಜಮೀನು ಆಳತೆ ಸೇರಿದಂತೆ ವಿವಿಧ ಖಾತೆಗಳಿಗೆ ಸಂಬಂಧಿಸಿದ ಬಾಕಿ ಇರುವ ಅರ್ಜಿಗಳು, ತಾಂತ್ರಿಿಕ ತೊಂದರೆಗಳು, ಭೂಮಾಪಕರ ಹಾಗೂ ಸಿಬ್ಬಂದಿಗಳ ಕೊರತೆ, ಸಮಸ್ಯೆೆಗಳ ಬಗ್ಗೆೆ ಮಾಹಿತಿ ಪಡೆದು ಪರಿಶೀಲನೆ ನಡೆಸಿದರು.
ಮಾನ್ವಿಿ: ಶಿಕ್ಷಣ ಇಲಾಖೆ, ಪುರಸಭೆ, ಭೂದಾಖಲೆ ಕಚೇರಿಗಳಿಗೆ ಲೋಕಾಯುಕ್ತ ಅಧಿಕಾರಿಗಳ ತಂಡ ಭೇಟಿ-ಪರಿಶೀಲನೆ

