ಸುದ್ದಿಮೂಲ ವಾರ್ತೆ ರಾಯಚೂರು, ಜ.05:
ರಾಯಚೂರು ಮಹಾನಗರ ಪಾಲಿಕೆಯ ಹಳೆಯ ಹಾಗೂ ಹೊಸ ಕಚೇರಿಗೆ ಲೋಕಾಯುಕ್ತರ ತಂಡ ದಿಢೀರ್ ಭೇಟಿ ಸಿಬ್ಬಂದಿಗಳಲ್ಲಿ ದುಗುಡ ಹೆಚ್ಚಿಿಸಿತಲ್ಲದೆ, ಸಾರ್ವಜನಿಕರಿಂದ ದೂರು ದುಮ್ಮಾಾನಗಳ ಆಲಿಸಿ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗ ಜರುಗಿತು.
ಇಂದು ಬೆಳಿಗ್ಗೆೆ ಕಚೇರಿ ಆರಂಭವಾಗುತ್ತಿಿದ್ದಂತೆ ಲೋಕಾಯುಕ್ತ ನಿಬಂಧಕ ಎ.ವಿ.ಪಾಟೀಲ ನೇತೃತ್ವದ ತಂಡ ಹಳೆಯ ಹಾಗೂ ಹೊಸ ಕಟ್ಟಡದಲ್ಲಿನ ಪಾಲಿಕೆಯ ಕಚೇರಿಗಳಿಗೆ ಭೇಟಿ ನೀಡಿ ರಾತ್ರಿಿ 7ರವರೆಗೂ ಕಡತಗಳ ಪರಿಶೀಲನೆ, ಅಧಿಕಾರಿ, ಸಿಬ್ಬಂದಿಗಳಿಂದ ಮಾಹಿತಿ, ಕಚೇರಿಗೆ ತಮ್ಮ ಕೆಲಸಗಳಿಗಾಗಿ ಬಂದಿದ್ದ ಸಾರ್ವಜನಿಕರಿಂದ ಮಾಹಿತಿ ಕೇಳಿ ತಿಳಿದುಕೊಂಡರಲ್ಲದೆ, ಸ್ಪಂದಿಸದ ಸಿಬ್ಬಂದಿ, ವಿಭಾಗದ ಮುಖ್ಯಸ್ಥರಿಗೆ ಬುದ್ದಿ ಮಾತು ಹೇಳಿದರು. ಅರ್ಜಿ ವಿಲೇವಾರಿ ಮಾಡದ ಅಧಿಕಾರಿಗಳಿಗೆ ಪ್ರಶ್ನೆೆ ಮಾಡಿ ಬೆವರಿಳಿಸಿದರು.
ಮೊದಲಿಗೆ ಹಳೆಯ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿ 11ಕ್ಕೆೆ ಹಳೆಯ ಜಿಲ್ಲಾಾಧಿಕಾರಿ ಕಚೇರಿಯಲ್ಲಿನ ಪಾಲಿಕೆಯ ಆಡಳಿತ ಕಚೇರಿಗೆ ಭೇಟಿ ಮಾಡಿದ ಲೋಕಾಯುಕ್ತ ಅಧಿಕಾರಿಗಳ ತಂಡ ವಿವಿಧ ವಿಭಾಗವಾರು ಪರಿಶೀಲನೆ ಮಾಡಿದರು.
ಆಸ್ತಿಿ ನೋಂದಣಿ, ಕರ ಸಂಗ್ರಹ ವಿಭಾಗ, ತಾಂತ್ರಿಿಕ ವಿಭಾಗ ಸೇರಿ ವಿವಿಧ ಸಿಬ್ಬಂದಿಗಳ ಖುದ್ದು ಭೇಟಿ, ಕಡತಗಳ ಮಾಹಿತಿ, ಲೋಕಾಯುಕ್ತದಲ್ಲಿನ ಪ್ರಕರಣ ಇದುವರೆಗಿನ ಪ್ರಗತಿ, ಒದಗಿಸಿದ ಮಾಹಿತಿಗಳ ಕುರಿತು ಪ್ರತಿ ಸಿಬ್ಬಂದಿಯಿಂದಲೂ ರಾತ್ರಿಿ 7ರವರೆಗೂ ಕಚೇರಿಯಲ್ಲಿಯೇ ಕುಳಿತು ಮಾಹಿತಿ ಪಡೆದರು. ಅಲ್ಲದೆ, ಕೆಲ ಕಡತಗಳು ವರ್ಷಾನುಗಟ್ಟಲೆ ಧೂಳು ಹಿಡಿದಿರುವುದನ್ನು ಗಮನಿಸಿ ತರಾಟೆಗೆ ತೆಗೆದುಕೊಂಡರೆ, ಮತ್ತೆೆ ಕೆಲ ಸಿಬ್ಬಂದಿಗೆ ಸಲಹೆ ಮಾಡಿದರು. ಕಡತವಿಲೇವಾರಿ ಬಗ್ಗೆೆ ಮಾಹಿತಿ ಪಡೆದರು. ಅಲ್ಲದೆ, ಕೆಲ ಸಾರ್ವಜನಿಕರ ಅರ್ಜಿಗಳ ಬಗ್ಗೆೆಯೂ ವಿವರ ಪಡೆದರು. ಅರ್ಜಿ ಅಥವಾ ದೂರು ಸಲ್ಲಿಸಿದ ಸಾರ್ವಜನಿಕರಿಗೆ ಅರ್ಜಿಯ ಸಂಖ್ಯೆೆಗಳ ನಮೂದಿಸದ ನೋಂದಣಿ ಪುಸ್ತಕ ಪರಿಶೀಲಿಸಿ ತರಾಟೆಗೆ ತೆಗೆದುಕೊಂಡರು.ಘನತ್ಯಾಾಜ್ಯ ವಿಲೇವಾರಿ ಸ್ಥಳಕ್ಕೆೆ ತೆರಳಿತು. ನಿತ್ಯ ಕಸದ ಸಂಗ್ರಹ ವ್ಯವಸ್ಥೆೆಘಿ, ವಿಲೇವಾರಿ ಸ್ವಚ್ಛತೆ, ವಾಹನಗಳ ಸ್ಥಿಿತಿ, ಪೌರಕಾರ್ಮಿಕರ, ಸ್ವಚ್ಛತೆ ಕಾರ್ಮಿಕರ ಪರಿಸ್ಥಿಿತಿ ಸೌಲಭ್ಯಗಳ ಕುರಿತು ಮಾಹಿತಿ ಸಂಗ್ರಹಿಸಿದೆ.
ಸಂಜೆಯವರೆಗೂ ಜಿಲ್ಲಾಾ ಕೇಂದ್ರದ ಮಹಾನಗರ ಪಾಲಿಕೆಯ ಅಧಿಕಾರಿ, ಸಿಬ್ಬಂದಿಗಳು ಲೋಕಾಯುಕ್ತ ಅಧಿಕಾರಿಗಳ ತಂಡ ಕೇಳಿದ ಮಾಹಿತಿ ನೀಡಲು ತಡಕಾಡಿದರಲ್ಲದೆ, ಮಾಹಿತಿಯೇ ಇಲ್ಲದ ಸಿಬ್ಬಂದಿ ವೌನಕ್ಕೆೆ ಶರಣಾಗಿದ್ದು ಕಂಡ ಲೋಕಾಯುಕ್ತರ ತಂಡ ನಿತ್ಯ ಹಾಜರಿ ಹಾಕಲು, ವೇತನ ಎಣಿಸಲು ಮಾತ್ರ ಬರುತ್ತಿಿದ್ದಂತಿದೆ ಸಿಬ್ಬಂದಿ, ಸಾರ್ವಜನಿಕರ ಸಮಸ್ಯೆೆಗೆ ಪರಿಹಾರ ಹುಡುಕದ ಬಗ್ಗೆೆ ವೌನವಾಗಿಯೇ ಮಾಹಿತಿ ಕಲೆ ಹಾಕಿದಂತಿತ್ತುಘಿ.
ಕಳೆದ ನಾಲ್ಕು ದಿನಗಳಿಂದಲೂ ರಾಯಚೂರು ಜಿಲ್ಲೆೆಯ ವಿವಿಧ ತಾಲೂಕು ಕಚೇರಿ, ಆಸ್ಪತ್ರೆೆಗಳಿಗೆ ದಿಢೀರ್ ಭೇಟಿ ನೀಡುತ್ತಿಿರುವ ಲೋಕಾಯುಕ್ತ ಅಧಿಕಾರಿಗಳ ತಂಡ ಜ.7ರಂದು ರಾಜ್ಯ ಮುಖ್ಯ ಲೋಕಾಯುಕ್ತ ಬಿ.ಎಸ್. ಪಾಟೀಲ್ ಜಿಲ್ಲೆಗೆ ಭೇಟಿ ನೀಡುವ ಮುನ್ನ ಮಾಹಿತಿ ಕಲೆ ಹಾಕುತ್ತಿಿದೆ.
ಅಲ್ಲಿನ ಪರಿಸ್ಥಿಿತಿ, ಅವ್ಯವಸ್ಥೆೆ ಬಗ್ಗೆೆ ಅವಲೋಕಿಸಿ ವರದಿ ಮಾಡಿಕೊಳ್ಳುತ್ತಿಿರುವುದು ಆಯಾ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳ ಎದೆ ಬಡಿತ ಹೆಚ್ಚಿಿಸಿದ್ದಾಾರೆ.
ಕಚೇರಿಯ ಪ್ರಗತಿ, ದೂರು ಅರ್ಜಿಗಳ ವಿಲೇವಾರಿ, ಮತ್ತು ತ್ವರಿತ ಕಾರ್ಯಕ್ಷಮತೆಯ ಬಗ್ಗೆೆ ಮಾಹಿತಿ ಪಡೆಯಲಾಗಿದೆ. ಕಳೆದ ಕೆಲವು ತಿಂಗಳುಗಳ ಹಿಂದೆ, ಉಪಲೋಕಾಯುಕ್ತರು ಮೂರು ದಿನಗಳ ಕಾಲ ಜಿಲ್ಲೆಯಲ್ಲಿ ಬಿಡಾರ ಹೂಡಿ ಪರಿಶೀಲನೆ ನಡೆಸಿದ್ದರು. ಉಪ ಲೋಕಾಯುಕ್ತರು ಸುಮಾರು 90 ಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸಿದ್ದರು. ಈ ಭೇಟಿಯ ವೇಳೆ ಹಿಂದಿನ ಪ್ರಕರಣಗಳ ಬಗ್ಗೆೆ ಮೆಲಕು ಹಾಕುವರೆ ಎಂಬ ದುಗುಡ ಸಿಬ್ಬಂದಿಯ ಕಾಡುತ್ತಿಿದೆ.
ಮಹಾನಗರ ಪಾಲಿಕೆಗೆ ಲೋಕಾಯುಕ್ತರ ತಂಡ, ರಾತ್ರಿಿವರೆಗೂ ಪರಿಶೀಲನೆ ಕಡತ, ಅರ್ಜಿ ಅಸಮರ್ಪಕ ವಿಲೇವಾರಿಗೆ ತಪರಾಕಿ

