ಸುದ್ದಿಮೂಲ ವಾರ್ತೆ ಬೆಳಗಾವಿ, ಡಿ.10:
ಪ್ರತಿಪಕ್ಷಗಳ ವಿರೋಧದ ನಡುವೆಯೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ ಮತ್ತು ನಿಯಂತ್ರಣ) ವಿಧೇಯಕವನ್ನುವಿಧಾನಸಭೆಯಲ್ಲಿ ಮಂಡಿಸಿದರು.
ದ್ವೇಷ ಭಾಷಣ ಮಸೂದೆಯು ಈಗಾಗಲೇ ಸಾಕಷ್ಟು ಚರ್ಚೆಗೆ ಬಂದಿದ್ದು ದ್ವೇಷ ಭಾಷಣವು ಗಂಭೀರ ಅಪರಾಧ ಎಂದು ಸುಪ್ರಿಿಂಕೋರ್ಟ್ ಇತ್ತೀಚೆಗಷ್ಟೇ ವ್ಯಾಾಖ್ಯಾಾನಿಸಿತ್ತು. ಡಿ.4ರಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ದ್ವೇಷ ಭಾಷಣ ಪ್ರತಿಬಂಧಕ ವಿಧೇಯಕ ಸೇರಿದಂತೆ ಒಟ್ಟು ಎಂಟು ಮಹತ್ವದ ವಿಧೇಯಕಕ್ಕೆೆ ಒಪ್ಪಿಿಗೆ ನೀಡಲಾಗಿತ್ತು.
ದ್ವೇಷ ಭಾಷಣ ಎಂಬುದು ಯಾವುದೇ ಪೂರ್ವ ಕಲ್ಪಿಿತ ಹಿತಾಸಕ್ತಿಿ ಸಾಧಿಸಲು ಬದುಕಿರುವ ಅಥವಾ ಮೃತ ವ್ಯಕ್ತಿಿಗಳ ವರ್ಗ, ಗುಂಪು ಅಥವಾ ಸಮುದಾಯದ ವಿರುದ್ಧ ಅಸಾಮರಸ್ಯ ಅಥವಾ ವೈರತ್ವದ ಅಥವಾ ದ್ವೇಷದ ಅಥವಾ ಕೆಡುಕಿನ ಭಾವನೆಗಳನ್ನು ಮೂಡಿಸುವ ಉದ್ದೇಶದೊಂದಿಗೆ ಸಾರ್ವಜನಿಕ ನೋಟದಲ್ಲಿ ಮೌಖಿಕವಾಗಿ ಅಥವಾ ಲಿಖಿತ ರೂಪದ ಪದಗಳಲ್ಲಿ ಅಥವಾ ಸಂಕೇತಗಳ ಮೂಲಕ ಅಥವಾ ದೃಶ್ಯರೂಪಕಗಳ ಮೂಲಕ ಅಥವಾ ವಿದ್ಯುನ್ಮಾಾನ ಸಂವಹನಗಳ ಮೂಲಕ ಅಥವಾ ಇನ್ನಾಾವುದೇ ರೂಪದಲ್ಲಿ ಮಾಡಲಾದ, ಪ್ರಕಟಿಸಲಾದ ಅಥವಾ ಪರಿಚಯಿಸಲಾದ ಯಾವುದೇ ಅಭಿವ್ಯಕ್ತಿಿಯನ್ನು ಒಳಗೊಳ್ಳುವುದು.
ವಿಧೇಯಕದಲ್ಲೇನಿದೆ?
ಧಾರ್ಮಿಕ, ಜನಾಂಗೀಯ, ಜಾತಿ ಅಥವಾ ಸಮುದಾಯ, ಲಿಂಗ, ಲೈಂಗಿಕ ದೃಷ್ಟಿಿಕೋನ, ಜನ್ಮಸ್ಥಳ, ಭಾಷೆ, ರೆಸಿಡ್ಸ್ೆ, ಅಂಗವೈಕಲ್ಯ ಬುಡಕಟ್ಟು ಕುರಿತು ಯಾವುದೇ ವ್ಯಕ್ತಿಿಗೆ ಹಾನಿ ಮಾಡುವ ಅಥವಾ ದ್ವೇಷ ಉತ್ತೇಜಿಸುವುದು ಅಪರಾಧವಾಗಿದ್ದು ಒಂದು ವರ್ಷಕ್ಕೆೆ ಕಡಿಮೆ ಇಲ್ಲದಂತೆ ಏಳು ವರ್ಷಗಳ ವರೆಗೆ ವಿಸ್ತರಿಸಬಹುದಾದ ಅವಧಿಯ ಕಾರಾಗೃಹವಾಸ ಜೊತೆಗೆ 50,000 ರೂ.ಗಳ ಜುಲ್ಮಾಾನೆಯೊಂದಿಗೆ ದಂಡಿಸಲಾಗುವುದು ಮತ್ತು ಪುನರಾವರ್ತಿತ ಅಪರಾಧಗಳಿಗೆ ಎರಡು ವರ್ಷಗಳಿಗೆ ಕಡಿಮೆ ಇಲ್ಲದ ಹತ್ತು ವರ್ಷಗಳಿಗೆ ವಿಸ್ತರಿಸಬಹುದಾದ ಅವಧಿಯ ಜೈಲು ಶಿಕ್ಷೆಯೊಂದಿಗೆ 1 ಲಕ್ಷ ರೂ. ದಂಡ ವಿಧಿಸಬಹುದಾಗಿದೆ. ಜೊತೆಗೆ ಅಪರಾಧದ ಪರಿಣಾಮದ ತೀವ್ರತೆ ಆಧರಿಸಿ ಸಂತ್ರಸ್ಥರಿಗೆ ಪರಿಹಾರ ನೀಡಬಹುದಾಗಿದೆ.
ಮಂಡನೆಯಾದ ಇತರೇ ವಿಧೇಯಕಗಳು
2025ನೇ ಸಾಲಿನ ಕರ್ನಾಟಕ ಕಾರ್ಮಿಕ ಕಲ್ಯಾಾಣ ನಿಧಿ (ತಿದ್ದುಪಡಿ) ವಿಧೇಯಕ ಹಾಗೂ 2025ನೇ ಸಾಲಿನ ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿಿ) (ತಿದ್ದುಪಡಿ) ವಿಧೇಯಕಗಳನ್ನು ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಂಡಿಸಿದರು. ವಿಧೇಯಕದ ಪ್ರಸ್ತಾಾವವು ವಿಧಾನಸಭೆಯಲ್ಲಿ ಅಂಗೀಕಾರವಾಯಿತು.
2025ನೇ ಸಾಲಿನ ಶ್ರೀ ಮಲೈ ಮಹದೇಶ್ವರ ಸ್ವಾಾಮಿ ಕ್ಷೇತ್ರ ಅಭಿವೃದ್ಧಿಿ ಪ್ರಾಾಧಿಕಾರ (ತಿದ್ದುಪಡಿ) ವಿಧೇಯಕ, 2025ನೇ ಸಾಲಿನ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆೆಗಳು ಮತ್ತು ಧರ್ಮದಾಯ ದತ್ತಿಿಗಳ (ತಿದ್ದುಪಡಿ) ವಿಧೇಯಕ, 2025ನೇ ಸಾಲಿನ ಚಂದ್ರಗುತ್ತಿಿ ಶ್ರೀ ರೇಣುಕಾಂಬ ಕ್ಷೇತ್ರ ಅಭಿವೃದ್ಧಿಿ ಪ್ರಾಾಧಿಕಾರ ವಿಧೇಯಕ, 2025ನೇ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿಿ ಪ್ರಾಾಧಿಕಾರ ಮತ್ತು ಇತರ ಕೆಲವು ಕಾನೂನು (ತಿದ್ದುಪಡಿ) ವಿಧೇಯಕ, 2025ನೇ ಸಾಲಿನ ಔಷಧ ಮತ್ತು ಪ್ರಸಾಧನ ಸಾಮಗ್ರಿಿ (ಕರ್ನಾಟಕ ತಿದ್ದುಪಡಿ) ವಿಧೇಯಕ, 2025ನೇ ಸಾಲಿನ ಕರ್ನಾಟಕ ಬಾಡಿಗೆ (ತಿದ್ದುಪಡಿ) ವಿಧೇಯಕ, 2025ನೇ ಸಾಲಿನ ಕರ್ನಾಟಕ ರಾಜ್ಯ ವಿಶ್ವವಿದ್ಯಾಾನಿಲಯಗಳ (ಎರಡನೇ ತಿದ್ದುಪಡಿ) ವಿಧೇಯಕ, 2025ನೇ ಸಾಲಿನ ಬಯಲುಸೀಮೆ ಪ್ರದೇಶಾಭಿವೃಧ್ಧಿಿ ಮಂಡಳಿ (ತಿದ್ದುಪಡಿ) ವಿಧೇಯಕ, 2025ನೇ ಸಾಲಿನ ಮಲೆನಾಡು ಪ್ರದೇಶಾಭಿವೃದ್ಧಿಿ ಮಂಡಳಿ (ತಿದ್ದುಪಡಿ) ವಿಧೇಯಕಗಳನ್ನು ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ್ ಅವರು ವಿಧಾನಸಭೆಯಲ್ಲಿ ಮಂಡಿಸಿದರು. ವಿಧೇಯಕಗಳ ಪ್ರಸ್ತಾಾವವು ವಿಧಾನಸಭೆಯಲ್ಲಿ ಅಂಗೀಕಾರವಾಯಿತು.
ದೊಣ್ಣೆೆ ಕೊಟ್ಟು ಧರ್ಮಕ್ಕೆೆ ಪೆಟ್ಟು!
ವಿಧೇಯಕಗಳನ್ನು ಮಂಡಿಸುವಾಗ ಆಡಳಿತ ಪಕ್ಷದ ಸಚಿವರು ಸದಸ್ಯರು ಸುಮ್ಮನೆ ಕುಳಿತಿದ್ದರು. ಸಭಾಧ್ಯಕ್ಷರು ವಿಧೇಯಕ ಮಂಡಿಸಲಾಗಿದೆ. ವಿಧೇಯಕದ ಪರವಾಗಿರುವವರು ಹೌದು ಎನ್ನಬೇಕು ಎಂದಾಗ ಮೌನವಾಗಿಯೇ ಕುಳಿತಿದ್ದರು. ಹಲವು ವಿಧೇಯಕಗಳು ಇದೇ ರೀತಿಯಾಗಿ ಮಂಡನೆ ಆಗುತ್ತಾಾ ಸಾಗಿದಾಗ ವಿಪಕ್ಷ ಬಿಜೆಪಿಯ ಹಿರಿಯ ಸದಸ್ಯ ಎಸ್.ಸುರೇಶ್ ಕುಮಾರ್ ಮತ್ತಿಿತರರು ಏನಿದು ಮೌನಂ ಸಮ್ಮತಿ ಲಕ್ಷಣಂ…ಎಂದು ಛೇಡಿಸಿದರು. ಪ್ರತಿಕ್ರಿಿಯಿಸಿದ ಸಭಾಧ್ಯಕ್ಷ ಯು.ಟಿ.ಖಾದರ್ ಆಡಳಿತ ಪಕ್ಷದ ಸದಸ್ಯರಿಗೆ ‘ಹೌದು ಅಂತಾದರೂ ಹೇಳಿ ಮಾರಾಯ್ರೇ…ದೊಣ್ಣೆೆ ಕೊಟ್ಟು ಧರ್ಮಕ್ಕೆೆ ಪೆಟ್ಟು ತಿನ್ನುತ್ತೀರಲ್ಲಾಾ’ ಎಂದಾಗ ಆಡಳಿತ ಪಕ್ಷದ ಸದಸ್ಯರು ಹೌದು ಎಂದು ಜೋರಾಗಿ ಕೂಗಿದರು.
ಕೈ ಕೊಟ್ಟ ಮೈಕ್.. ಕಲಾಪ ಮುಂದಕ್ಕೆೆ
ವಿಧೇಯಕಗಳನ್ನು ಮಂಡಿಸಿ ಮುಂದಿನ ಕಲಾಪಕ್ಕೆೆ ಸಾಗುತ್ತಿಿದ್ದಂತೆ ವಿಧಾನಸಭೆಯ ಧ್ವನಿವರ್ಧಕ ವ್ಯವಸ್ಥೆೆ ಕೈ ಕೊಟ್ಟಿಿತು. ಮಾತನಾಡಿದ್ದು ಕೇಳಿಸುತ್ತಿಿರಲಿಲ್ಲ. ಆಗ ಸಭಾಧ್ಯಕ್ಷರು ಮೈಕ್ ಇಲ್ಲದೇ ಒಂದಷ್ಟು ಹೊತ್ತು ಕಲಾಪ ಮುಂದುವರೆಸಿದರಾದರೂ ಕೊನೆಗೆ ಕಲಾಪ ಮುಂದೂಡಿದರು. ಧ್ವನಿ ಅಡಗಿಸಿದ ಸರ್ಕಾರ ಎಂದು ವಿಪಕ್ಷ ಸದಸ್ಯರು ತಮಾಷೆ ಮಾಡಿದರೆ ಸದ್ದು ಹೊರಗಡೆಯೇ ಜಾಸ್ತಿಿ ಇದೆ. ಇಲ್ಲಿ ಯಾಕಿಲ್ಲ ಎಂದು ಆಡಳಿತ ಪಕ್ಷದ ಅಧಿಕಾರ ಹಂಚಿಕೆ ವಿಚಾರವನ್ನು ಪರೋಕ್ಷವಾಗಿ ಪ್ರಸ್ತಾಾಪಿಸಿ ಛೇಡಿಸಿದರು. ಧ್ವನಿವರ್ಧಕ ವ್ಯವಸ್ಥೆೆ ಸರಿಯಾದ ಬಳಿಕ ಕಲಾಪ ಮತ್ತೆೆ ಆರಂಭಗೊಂಡಿತು.

