ಸುದ್ದಿಮೂಲ ವಾರ್ತೆ ಕರ್ನೂಲ್, ಹೈದರಾಬಾದ್, ಅ.24:
ಹೈದ್ರಾಾಬಾದ್ನಿಂದ ಬೆಂಗಳೂರಿಗೆ ಬರುತ್ತಿಿದ್ದ ಕಾವೇರಿ ಟ್ರಾಾವೆಲ್ಸ್ನ ಖಾಸಗಿ ಬಸ್ ಕರ್ನೂಲ್ ಬಳಿ ಶುಕ್ರವಾರ ನಸುಕಿನ ಜಾವ ಬೈಕ್ಗೆ ಅಪ್ಪಳಿಸಿದ ಪರಿಣಾಮ ಉಂಟಾದ ಬೆಂಕಿಯಿಂದ ಒಂದೇ ಕುಟುಂಬದ ನಾಲ್ವರು ಸೇರಿ 19 ಮಂದಿ ಸಜೀವ ದಹನವಾದ ದಾರುಣ ಘಟನೆ ಸಂಭವಿಸಿದೆ.
ಗುರುವಾರ ರಾತ್ರಿಿ ಹೈದ್ರಾಾಬಾದ್ನಿಂದ ಬಸ್ ಹೊರಟಾಗ ಬಸ್ನಲ್ಲಿ 45 ಪ್ರಯಾಣಿಕರು ಇದ್ದರು. ಮಾರ್ಗಮಧ್ಯೆೆ ಓರ್ವ ಪ್ರಯಾಣಿಕ ಬಸ್ ಹತ್ತಿಿದ್ದಾನೆ. ಹೀಗೆ ಒಟ್ಟು 46 ಪ್ರಯಾಣಿಕರನ್ನು ಹೊತ್ತು ಬೆಂಗಳೂರಿಗೆ ಬರುವ ಮಾರ್ಗದಲ್ಲಿ ನಸುಕಿನ ಜಾವ 3.30ರ ಸುಮಾರಿಗೆ ಬಸ್ ದಿಢೀರನೆ ಬೆಂಕಿ ಹತ್ತಿಿ ಹೊತ್ತಿಿ ಉರಿದಿದ್ದು ಮಹಿಳೆಯರು, ಮಕ್ಕಳು ಸೇರಿ 19 ಮಂದಿ ಪ್ರಯಾಣಿಕರು ಸಜೀವ ಬೆಂಕಿಗೆ ಆಹುತಿಯಾಗಿದ್ದಾರೆ. 27 ಮಂದಿ ಪ್ರಯಾಣಿಕರು ಪ್ರಾಾಣಾಪಾಯದಿಂದ ಪಾರಾಗಿದ್ದಾರೆ.
ನೆಲ್ಲೂರು ಜಿಲ್ಲೆಯ ವಿಂಜಾಮುರು ಮಂಡಲದ ಗೊಲ್ಲವರಿಪಲ್ಲಿ ಗ್ರಾಾಮದ ಒಂದೇ ಕುಟುಂಬದ ನಾಲ್ವರು ಗೊಲ್ಲ ರಮೇಶ್ (35), ಅನುಷಾ (30), ಮಾನ್ವಿಿತಾ (10) ಮತ್ತು ಮನೀಶ್ (12) ಮೃತಪಟ್ಟವರಲ್ಲಿ ಸೇರಿದ್ದಾರೆ. ಗೊಲ್ಲ ರಮೇಶ್ ಬೆಂಗಳೂರಿನ ಸ್ಟಾವೇರ್ ಕಂಪನಿಯೊಂದರಲ್ಲಿ ಉದ್ಯೋೋಗಿಯಾಗಿದ್ದ. ದೀಪಾವಳಿ ರಜೆ ಪ್ರಯುಕ್ತ ಕುಟುಂಬ ಸಮೇತ ತೆರಳಿದ್ದರು. ಮರಳಿ ಬೆಂಗಳೂರಿಗೆ ಬರುವಾಗ ಇಡೀ ಕುಟುಂಬ ಬಸ್ ದುರಂತದಲ್ಲಿ ಮೃತಪಟ್ಟಿಿದೆ.
ಜೆ.ಫಿಲೋಮಿನ್ ಬೇಬಿ (64), ಕಿಶೋರ್(64), ಪ್ರಶಾಂತ್(32), ಅಗಾರ್ಬಂದೋಪಾಧ್ಯಾಾಯ(23), ಯುವನ್ ಶಂಕರ್ ರಾಜಾ(22), ಮೇಘನಾಥ್(25), ಧಾತ್ರಿಿ(27), ಅಮೃತ್ ಕುಮಾರ್(18), ಚಂದನ ಮಂಗಾ(23), ಅನುಷಾ(22), ಗಿರಿ ರಾವ್(48), ಕೆನುಗು ದೀಪಕ್ ಕುಮಾರ್ ಎಂದು ಇತರರನ್ನು ಗುರುತಿಸಲಾಗಿದೆ. ಇನ್ನೂ ಕೆಲವರು ಗುರುತು ಪತ್ತೆೆ ಆಗದಿರುವುದರಿಂದ ಕುಟುಂಬ ಸದಸ್ಯರೊಂದಿಗೆ ಡಿಎನ್ಎ ಪಡೆದು ಗುರುತು ಪತ್ತೆೆ ಮಾಡುವ ಕಾರ್ಯ ನಡೆಸಲಾಗುತ್ತಿಿದೆ.
ಬೈಕ್ ಗುದ್ದಿದ್ದೇ ಅಪಘಾತಕ್ಕೆೆ ಕಾರಣ:
ಕರ್ನೂಲ್ ಸಮೀಪ ಬೈಕ್ ಒಂದು ಬಸ್ಗೆ ಡಿಕ್ಕಿಿ ಹೊಡಿದಿದೆ. ಬಳಿಕ ಅದು ಡೀಸೆಲ್ ಟ್ಯಾಾಂಕ್ಗೆ ಗುದ್ದಿದ್ದರಿಂದ ಡೀಸೆಲ್ ಸೋರಿಕೆಯಾಗಿ ಬಸ್ ಬೆಂಕಿ ಹೊತ್ತಿಿಕೊಳ್ಳಲು ಕಾರಣವಾಯಿತು ಎಂದು ಹೇಳಲಾಗುತ್ತಿಿದೆ. ನಸುಕಿನ ಜಾವ ಎಲ್ಲಾ ಪ್ರಯಾಣಿಕರು ನಿದ್ರೆೆಯಲ್ಲಿದ್ದರು. ಬಸ್ ಸುತ್ತಲೂ ಡೀಸೆಲ್ ಚೆಲ್ಲಿದ್ದರಿಂದ ಎಲ್ಲಾ ಕಡೆಯಿಂದಲೂ ಬೆಂಕಿ ಹೊತ್ತಿಿ ಕ್ಷಣಮಾತ್ರದಲ್ಲಿ ಇಡೀ ಬಸ್ ಸುತ್ತ ಆವರಿಸಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಬಸ್ನಲ್ಲಿ ಬೆಂಕಿ ಹೊತ್ತಿಿಕೊಳ್ಳುತ್ತಿಿದ್ದಂತೆಯೇ ಪ್ರಯಾಣಿಕರೆಲ್ಲರೂ ಗಾಬರಿಯಿಂದ ಹೊರಬಂದಿದ್ದಾರೆ. ಕೆಲವರು ಕಿಟಕಿ ಗಾಜುಗಳನ್ನು ಹೊಡೆದು ಹೊರಗೆ ಜಿಗಿದಿದ್ದಾರೆ. ಇದರಿಂದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕರ್ನೂಲ್ ಆಸ್ಪತ್ರೆೆಯಲ್ಲಿ ಚಿಕಿತ್ಸೆೆ ಪಡೆಯುತ್ತಿಿದ್ದಾರೆ. ಆದರೆ, ಬಸ್ನಿಿಂದ ಹೊರಬರಲು ಸಾಧ್ಯವಾಗದ ಮಹಿಳೆಯರು, ಮಕ್ಕಳು ಮತ್ತು ಕುಟುಂಬ ಸಮೇತ ಪ್ರಯಾಣಿಸುತ್ತಿಿದ್ದವರು ಬೆಂಕಿಯ ಕೆನ್ನಾಾಲಿಗೆಗೆ ಸಿಲುಕಿ ಸಜೀವ ದಹನಗೊಂಡಿದ್ದಾರೆ.
ಬಸ್ ಮೇಲೆ 16 ಪ್ರಕರಣಗಳು
ಅಪಘಾತಕ್ಕೆೆ ತುತ್ತಾಾದ ಖಾಸಗಿ ಬಸ್ ವಿರುದ್ಧ ತೆಲಂಗಾಣದಲ್ಲಿ 16 ಪ್ರಕರಣಗಳು ದಾಖಲಾಗಿವೆ. ಆದರೂ ಸಂಚಾರ ಸುಸ್ಥಿಿತಿಯಲ್ಲಿತ್ತು. ದಾಖಲೆಗಳೆಲ್ಲವೂ ಸರಿಯಾಗಿ ಇವೆ. ಘಟನೆಗೆ ಕಾರಣ ಏನು ಎಂಬುದರ ಬಗ್ಗೆೆ ತನಿಖೆ ನಡೆಸಲಾಗುವುದು. ಬಸ್ಗೆ ಇಬ್ಬರು ಚಾಲಕರಿದ್ದು, ಇಬ್ಬರನ್ನೂ ವಶಕ್ಕೆೆ ಪಡೆಯಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮೃತ ಕುಟುಂಬಗಳಿಗೆ ಪರಿಹಾರ
ಬಸ್ ದುರಂತದಲ್ಲಿ ಸಜೀವ ದಹನಗೊಂಡ 20 ಮಂದಿಯ ಕುಟುಂಬಕ್ಕೆೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂ. ಹಾಗೂ ಗಾಯಾಳುಗಳಿಗೆ ತಲಾ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ.
ಇತ್ತ ಆಂಧ್ರದೇಶ ಮುಖ್ಯಮಂತ್ರಿಿ ಚಂದ್ರಬಾಬು ನಾಯ್ಡು ಮೃತ ಕುಟುಂಬಕ್ಕೆೆ ತಲಾ 5 ಲಕ್ಷ ರೂ. ಹಾಗೂ ಗಾಯಾಳುಗಳಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
ದುಬೈ ಪ್ರವಾಸದಲ್ಲಿರುವ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿ, ರಾಜ್ಯ ಸಾರಿಗೆ ಸಚಿವರು ಹಾಗೂ ಅಧಿಕಾರಿಗಳಿಗೆ ಘಟನೆ ಬಗ್ಗೆೆ ಸಮಗ್ರ ತನಿಖೆ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಮೃತರ ವಿವರಗಳನ್ನು ಗುರುತಿಸಲು ಹಾಗೂ ಸಂತ್ರಸ್ತರ ಕುಟುಂಬಗಳಿಗೆ ತಕ್ಷಣದ ನೆರವು ನೀಡಬೇಕು. ಗಾಯಾಳುಗಳಿಗೆ ಉತ್ತಮ ಚಿಕಿತ್ಸೆೆ ಸಿಗುವಂತೆ ನೋಡಿಕೊಳ್ಳಬೇಕು ಎಂದು ವೈದ್ಯಕೀಯ ಇಲಾಖೆಗೆ ಸೂಚನೆ ನೀಡಿದ್ದಾರೆ.
ಮುಂಜಾಗ್ರತೆ ವಹಿಸಬೇಕು: ಡಿಕೆಶಿ
ಕರ್ನೂಲ್ನಲ್ಲಿ ಸಂಭವಿಸಿರುವ ಬಸ್ ಅಪಘಾತ ದುರದೃಷ್ಟಕರ. ಇತ್ತೀಚೆಗೆ ಬೆಂಗಳೂರಿನಿಂದ ರಾಯಚೂರಿಗೆ ಗ್ರೀೀನ್ಲೈನ್ ಬಸ್ ಕೂಡ ಇದೇ ರೀತಿ ದುರಂತಕ್ಕೆೆ ಒಳಗಾಗಿತ್ತು. ಆಗ ನಮ್ಮ ಪಕ್ಷದ ರಾಯಚೂರು ಅಧ್ಯಕ್ಷೆ ಚಾಲಕನನ್ನು ಎಚ್ಚರಿಸಿದ ಪರಿಣಾಮ, ಬಸ್ ನಲ್ಲಿದ್ದ 20 ವೈದ್ಯಕೀಯ ವಿದ್ಯಾಾರ್ಥಿಗಳ ಜೀವ ಉಳಿಯಿತು ಎಂದು ಉಪಮುಖ್ಯಮಂತ್ರಿಿ ಡಿ.ಕೆ. ಶಿವಕುಮಾರ್ ಹೇಳಿದರು.
ಈ ಬಸ್ ದುರಂತ ಬೇರೆ ರಾಜ್ಯದಲ್ಲಿ ಆಗಿದ್ದರೂ ಈ ಬಗ್ಗೆೆ ಗಮನಹರಿಸುವಂತೆ ಸಾರಿಗೆ ಸಚಿವರು ಹಾಗೂ ಗೃಹ ಸಚಿವರಿಗೆ ಸೂಚಿಸುತ್ತೇವೆ. ಯಾವುದೇ ರಾಜ್ಯದ ಸರ್ಕಾರವಾಗಲಿ, ಈ ಬಗ್ಗೆೆ ಮುಂಜಾಗ್ರತಾ ಕ್ರಮಗಳ ಬಗ್ಗೆೆ ಗಮನಹರಿಸಬೇಕು ಎಂದು ಉಪ ಮುಖ್ಯಮಂತ್ರಿಿ ಡಿ.ಕೆ.ಶಿವಕುಮಾರ್ ಹೇಳಿದರು.

