ಸುದ್ದಿಮೂಲ ವಾರ್ತೆ
ಮೈಸೂರು, ಆ.24: ಅರಮನೆಒಳಾಂಗಣದಲ್ಲಿ ಇರುವ ಕರಿಕಲ್ಲು ತೊಟ್ಟಿಯಲ್ಲಿ ರಾಜವಂಶಸ್ಥರು ವಾಸಿಸುತ್ತಾರೆ. ಇಲ್ಲ್ಲಿರುವ ಪ್ರಾಂಗಣದಲ್ಲಿ ಮಂಗಳವಾರ ಬೆಳಿಗ್ಗೆ ಸಂಪ್ರದಾಯದಂತೆ ಜಟ್ಟಿಗಳ ಮುಷ್ಠಿ ಕಾಳಗ ನಡೆಯಿತು.
ಬೆಂಗಳೂರಿನ ಪ್ರಮೋದ್ ಜೆಟ್ಟಿಯಿಂದ ಚಾಮರಾಜನಗರದ ವೆಂಕಟೇಶ್ ಮತ್ತು ಚನ್ನಪಟ್ಟಣದ ಪ್ರವೀಣ್ ಜೆಟ್ಟಿಯಿಂದ ಮೈಸೂರು ಪ್ರದೀಪ್ ಜೆಟ್ಟಿ ನಡುವೆ ಬಹಳ ಸಮಯ ಸೆಣಸಾಟ ನಡೆಯಿತು. ಕೊನೆಗೆ ಪ್ರವೀಣ್ ಶೆಟ್ಟಿ ಪ್ರಹಾರಕ್ಕೆ ಪ್ರದೀಪ್ಶೆಟ್ಟಿ ಅವರಿಂದ ರಕ್ತ ಚಿಮ್ಮುತ್ತಿದ್ದಂತೆ ಕಾಳಗ ಕೊನೆಗೊಂಡಿತು. ಜಟ್ಟಿಗಳ ಕಾಳಗ ಮುಗಿದ ನಂತರವೇ ಜಂಬೂಸವಾರಿಯ ಅಂಬಾರಿ ಹೊರಡುವ ಸಿದ್ದತೆ ಆರಂಭವಾಗುತ್ತದೆ.
ರಾಜವಂಶಸ್ಥ ಯಧುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ವಿಜಯಯಾತ್ರೆ ಹೊರಡುವ ಮುನ್ನ ನಡೆದ ಕಾಳಗದಲ್ಲಿ ಬೆಂಗಳೂರಿನ ಪ್ರಮೋದ್ ಜಟ್ಟಿ ಹಾಗೂ ಚಾಮರಾಜನಗರದ ವೆಂಕಟೇಶ್ ಜಟ್ಟಿ ನಡುವೆ ನಡೆದ ಕಾಳಗದಲ್ಲಿ ಬೆಂಗಳೂರಿನ ಪ್ರಮೋದ್ ಜಟ್ಟಿ ಚಾಮರಾಜನಗರ ಜಟ್ಟಿ ಮೇಲೆ ಪ್ರಹಾರ ಮಾಡಿದರು. ಜೊತೆಗೆ ಚನ್ನಪಟ್ಟಣದ ಪ್ರವೀಣ್ ಜಟ್ಟಿಯಿಂದ ಮೈಸೂರಿನ ಪ್ರದೀಪ್ ಜಟ್ಟಿ ಪ್ರಹಾರಕ್ಕೆ ಒಳಗಾದರು.
ಈ ಸಾಂಪ್ರದಾಯಿಕ ವಜ್ರಮುಷ್ಠಿ ಕಾಳಗದಲ್ಲಿ ಬೆಂಗಳೂರಿನ ಪ್ರಮೋದ್ ಜಟ್ಟಿ, ಚನ್ನಪಟ್ಟಣದ ಪ್ರವೀಣ್ ಜಟ್ಟಿ ಪ್ರಹಾರ ಮಾಡಿ ವಿಜಯಿಯಾದರು. ಸಾಂಪ್ರದಾಯಿಕ ವಜ್ರಮುಷ್ಠಿ ಕಾಳಗವನ್ನು ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಹಾಗೂ ಯಧುವೀರ್ ಒಡೆಯರ್ ಪತ್ನಿ ರಿಷಿಕಾ ಒಡೆಯರ್ ಹಾಗೂ ಮಗ ಆಧ್ಯವೀರ್ ಒಡೆಯರ್ ವೀಕ್ಷಣೆ ಮಾಡಿದರು. ಜಟ್ಟಿ ಕಾಳಗ ನೋಡಲು ಬಂದಿದ್ದ ಜನರು ರಾಜಮಾತೆಗೆ ಜೈಕಾರ ಹಾಕಿದರು.
ಜಟ್ಟಿ ಕಾಳಗ್ ಇತಿಹಾಸ ದೊಡ್ಡದು:
ಜಟ್ಟಿ ಕಾಳಗಕ್ಕೆ ವಜ್ರಮುಷ್ಟಿ ಕಾಳಗ ಎಂದು ಕರೆಯಲಾಗುತ್ತದೆ. ಜಟ್ಟಿಗಳು ನಡೆಸಿಕೊಡುವ ವಜ್ರಮುಷ್ಟಿ ಕಾಳಗ ಮಹಾಭಾರತದ ಕೃಷ್ಣನ ಕಾಲದಿಂದಲೂ ಇದೆ. ಈಗಲೂ ಅದನ್ನು ರಾಜವಂಶಸ್ಥರು ಆಚರಿಸಿಕೊಂಡು ಬರುತ್ತಿದ್ದಾರೆ. ಶರನ್ನವರಾತ್ರಿಯ ವಿಜಯದಶಮಿಯ ದಿನ ವಿಜಯಯಾತ್ರೆಗೆ ಮುಂಚೆ ಅರಮನೆಯ ಆನೆ ಬಾಗಿಲಿನ ಮೂಲಕ ಹೋಗಿ ಒಳಗಿರುವ ಕನ್ನಡಿ ತೊಟ್ಟಿಯಲ್ಲಿ ವಜ್ರಮುಷ್ಟಿ ಕಾಳಗವನ್ನು ಏರ್ಪಾಡು ಮಾಡಲಾಗುತ್ತಿದೆ. ವಜ್ರಮುಷ್ಟಿ ಕಾಳಗದಲ್ಲಿ ಎರಡು ಜೋಡಿ ಜಟ್ಟಿಗಳು ಚಾಮುಂಡೇಶ್ವರಿ ತಾಯಿಯ ಆಶೀರ್ವಾದ ಪಡೆದು ಕಾಳಗ ನಡೆಸುವರು.
ಜಟ್ಟಿಗಳು ಯಾರು?
ಇತಿಹಾಸ ಕಾಲದಿಂದ ಜಟ್ಟಿ ಜನಾಂಗದವರು ರಾಜ ಮನೆತನದಲ್ಲಿ ವಜ್ರಮುಷ್ಟಿ ಕಾಳಗ ನಡೆಸಿಕೊಂಡು ಬರುತ್ತಿದ್ದಾರೆ. ಈಗ ಮೈಸೂರು, ಚಾಮರಾಜನಗರ, ಚನ್ನಪಟ್ಟಣ ಹಾಗೂ ಬೆಂಗಳೂರಿನಲ್ಲಿ ವಾಸವಿರುವ ಜಟ್ಟಿ ಜನಾಂಗದವರು ಒಂದೊಂದು ಪ್ರದೇಶದಿಂದ ಇಬ್ಬರು ಜಟ್ಟಿಗಳನ್ನು ಆಯ್ಕೆ ಮಾಡಿ ಮಹಾರಾಣಿ ಹಾಗೂ ಮಹಾರಾಜರ ಮುಂದೆ ತಂದು ನಿಲ್ಲಿಸುತ್ತಾರೆ.
ಆಗ ಮಹಾರಾಣಿಯವರು ಈ ಬಾರಿ ಜಟ್ಟಿ ಕಾಳಗದಲ್ಲಿ ಭಾಗವಹಿಸುವ ಎರಡು ಜೋಡಿಯನ್ನು ಆಯ್ಕೆ ಮಾಡಿ ಜಟ್ಟಿ ಕಾಳಗ ನಡೆಸುವ ಗುರುಗಳಿಗೆ ಸೂಚಿಸುತ್ತಾರೆ. ಬಳಿಕ ವಜ್ರಮುಷ್ಟಿ ಕಾಳಗ ರಾಜ ಪರಂಪರೆಯಂತೆ ಸಾಗುತ್ತದೆ. ವಜ್ರಮುಷ್ಟಿ ಕಾಳಗಕ್ಕೆ ಆಯ್ಕೆಯಾದ ನಾಲ್ಕು ಜೋಡಿಗಳಿಗೆ 45 ದಿನಗಳಿಗೆ ಮುಂಚೆ ತರಬೇತಿ ನೀಡಲಾಗುತ್ತದೆ. ಜಟ್ಟಿಗಳು ಶ್ರದ್ಧಾಭಕ್ತಿಯಿಂದ ಹಾಗೂ ಸಸ್ಯಹಾರಿ ಆಹಾರಗಳನ್ನು ಮಾತ್ರ ಸೇವನೆ ಮಾಡಬೇಕು.
ತಲೆಯಿಂದ ರಕ್ತ ಚಿಮ್ಮಿದಾಗ ವಜ್ರಮುಷ್ಟಿ ಕಾಳಗಕಕ್ಕೆ ಕೊನೆ:ವಿಜಯದಶಮಿಯಂದು ಮೈಸೂರು ಅರಮನೆಯ ಕನ್ನಡಿ ತೊಟ್ಟಿಯಲ್ಲಿ ನಡೆಯುವ ವಜ್ರಮುಷ್ಟಿ ಕಾಳಗದಲ್ಲಿ ಜಟ್ಟಿಗಳು ಭಾಗವಹಿಸುವರು. ವಿಜಯ ಯಾತ್ರೆ ಹೊರಡುವ ಮುನ್ನ ರಾಜರ ಸಮ್ಮುಖದಲ್ಲಿ ಈ ಕಾಳಗ ನಡೆಯುತ್ತದೆ. ರಾಜರಿಗೆ ನಮಸ್ಕರಿಸಿ ಕೆಲವೇ ಸೆಕೆಂಡುಗಳಲ್ಲಿ ಎರಡು ಜೋಡಿ ಜಟ್ಟಿಗಳು ಕೈ ಬೆರಳುಗಳಲ್ಲಿ ಧರಿಸಿರುವ ಕಾಡಿನ ಕೋಣದ ಕೊಂಬಿನ ಆಯುಧದಿಂದ ಪೈಪೋಟಿ ನಡೆಸುವರು. ತಲೆಯಿಂದ ರಕ್ತ ಚಿಮ್ಮಿದಾಗ ವಜ್ರಮುಷ್ಟಿ ಕಾಳಗ ಕೊನೆಗೊಳ್ಳುತ್ತದೆ. ಈ ಕಾಳಗದಲ್ಲಿ ರಕ್ತ ಚಿಮ್ಮಿದ ಜಟ್ಟಿಗಳು ರಾಜರಿಗೆ ನಮಸ್ಕರಿಸಿದ ಬಳಿಕ ರಾಜರು ಅರಮನೆಯಿಂದ ವಿಜಯ ಯಾತ್ರೆ ನಡೆಸಿ ಬನ್ನಿ ಪೂಜೆ ಸಲ್ಲಿಸಿ ವಾಪಸ್ ಅರಮನೆಗೆ ಆಗಮಿಸಿ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸುವರು.