ಸುದ್ದಿಮೂಲ ವಾರ್ತೆ ಬೆಂಗಳೂರು, ಜ.28:
ವಿಮಾನ ಅಪಘಾತದಲ್ಲಿ ದುರ್ಮರಣ ಹೊಂದಿದ ಮಹಾರಾಷ್ಟ್ರ ಉಪಮುಖ್ಯಮಂತ್ರಿಿ ಅಜಿತ್ ಪವಾರ್ ಅವರಿಗೆ ವಿಧಾನಸಭೆ ಹಾಗೂ ಪರಿಷತ್ನಲ್ಲಿ ಬುಧವಾರ ಶ್ರದ್ಧಾಾಂಜಲಿ ಸಲ್ಲಿಸಲಾಯಿತು.
ಸದನ ಆರಂಭವಾಗುತ್ತಿಿದ್ದಂತೆಯೇ ಸಭಾಧ್ಯಕ್ಷ ಯು.ಟಿ.ಖಾದರ್ ಸಂತಾಪ ಸೂಚನಾ ನಿರ್ಣಯ ಮಂಡಿಸಿ, ಮಹಾರಾಷ್ಟ್ರ ರಾಜ್ಯದ ಉಪಮುಖ್ಯಮಂತ್ರಿಿಯವವಾದ ಅಜಿತ್ ಪವಾರ್ ಸೇರಿದಂತೆ ಇತರೆ ಐದು ಮಂದಿ ವಿಮಾನ ಅಪಘಾತದಲ್ಲಿ ನಿಧನರಾಗಿರುವುದನ್ನು ಸದನದಲ್ಲಿ ಅತ್ಯಂತ ವಿಷಾಧದಿಂದ ತಿಳಿಯ ಬಸುತ್ತೇನೆ ಎಂದು ಹೇಳಿದರು.
ಅಜಿತ್ ಪವಾರ್ ಅವರು 6 ಬಾರಿ ಶಾಸಕರಾಗಿ ಹಾಗೂ ಒಂದು ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆೆಯಾಗಿದ್ದು, ಕೇಂದ್ರ ರಕ್ಷಣಾ ಸಚಿವರಾಗಿ ಮಹಾರಾಷ್ಟ್ರದಲ್ಲಿ ಸಚಿವರಾಗಿ, ಉಪಮುಖ್ಯಮಂತ್ರಿಿಯಾಗಿ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಿದ್ದಾರೆ ಎಂದು ಹೇಳಿ, ಅವರ ನಿಧನದಿಂದ ದೇಶ ಒಬ್ಬ ಉತ್ತಮ ನಾಯಕರನ್ನು ಕಳೆದುಕೊಂಡಿದೆ ಎಂದು ತಿಳಿಸಿದರು.
ಸಂತಾಪ ಸೂಚನಾ ನಿರ್ಣಯದ ಮೇಲೆ ಸಚಿವರಾದ ಹೆಚ್.ಕೆ. ಪಾಟೀಲ್, ವಿಪಕ್ಷ ನಾಯಕ ಆರ್. ಅಶೋಕ್, ಕಾಂಗ್ರೆೆಸ್ ಶಾಸಕಾಂಗ ಪಕ್ಷದ ನಾಯಕ ಸುರೇಶಬಾಬು, ಸಚಿವೆ ಲಕ್ಷ್ಮಿಿಹೆಬ್ಳಾಾರ್ಕ, ಬ್ಲಾಾಕ್ ಕಾಂಗ್ರೆೆಸ್ ಸದಸ್ಯ ಲಕ್ಷ್ಮಣಸವದಿ ಅಜಿತ್ ಪವಾರ್ ಅವರ ಸೇವೆ, ಕಾರ್ಯ ನೆನಪಿಸಿಕೊಂಡರು.
ಇದಾದ ಬಳಿಕ ಸದನದಲ್ಲಿ 1 ನಿಮಿಷ ಮೌನ ಆಚರಿಸಿ ಅಜಿತ್ ಪವಾರ್ ಅವರಿಗೆ ಶ್ರದ್ಧಾಾಂಜಲಿ ಸಲ್ಲಿಸಲಾಯಿತು.
ಸದನ ಕಲಾಪದಲ್ಲಿ ಅಜಿತ್ ಪವಾರ್ಗೆ ಶ್ರದ್ಧಾಾಂಜಲಿ

