ಸುದ್ದಿಮೂಲ ವಾರ್ತೆ ರಾಯಚೂರು, ಜ.08:
2025-26ನೇ ಸಾಲಿನಲ್ಲಿ ರಾಯಚೂರು ಜಿಲ್ಲೆಯಿಂದ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಸಾಧನೆ ತೋರಿದ ಕ್ರೀೆಡಾಪಟುಗಳಿಗೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಇಲ್ಲಿನ ಜಿಲ್ಲಾಾಡಳಿತ, ಜಿಲ್ಲಾಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಸಹಯೋಗದಲ್ಲಿ ನಡೆದ ಎರಡು ದಿನದ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಸನ್ಮಾಾನಿಸಿ ಗೌರವಿಸಲಾಯಿತು.
ಪುಟ್ಬಾಾಲ್ ಕ್ರೀಡೆಯಲ್ಲಿ ಲಯನ್ಸ್ ಶಾಲೆಯ ವಿದ್ಯಾಾರ್ಥಿನಿಯರಾದ ಮುಸ್ಮಾಾನ ಕುಮಾರಿ, ಸಮನ್ಷಿಿ ಎ.ಪಾಟೀಲ್, ಅಮೃತಾ, ವೈಷ್ಣವಿ ಲಂಬಾಣಿ, ಗುಂಡು ಎಸೆತ ಕ್ರೀೆಡೆಯಲ್ಲಿ ಸಿರವಾರದ ಶಾಂತಿನಿಕೇತನ ಶಾಲೆಯ ವಿದ್ಯಾಾರ್ಥಿ ಮಲ್ಲಿಕಾರ್ಜುನ ಹಾಗೂ ಪುಟ್ಬಾಾಲ್ ಕ್ರೀಡೆಯಲ್ಲಿ ರಾಯಚೂರು ತಾಲೂಕಿನ ಡಿ.ಯದ್ಲಾಾಪೂರು ಶಾಲೆಯ ವಿದ್ಯಾಾರ್ಥಿನಿ ಗೌರಮ್ಮ ಅವರಿಗೆ ಸನ್ಮಾಾನಿಸಿ ಗೌರವಿಸಲಾಯಿತು.
ಸಾಧಕ ಕ್ರೀಡಾಪಟುಗಳಿಗೆ ಗೌರವ ಸನ್ಮಾನ

