ಸುದ್ದಿಮೂಲವಾರ್ತೆ
ಕೊಪ್ಪಳ ಆ 08: ಸೇನೆಯಲ್ಲಿ 23 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾಗಿ ಬಂದ ಯೋಧನಿಗೆ ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ ಕೋರಲಾಯಿತು. ಕೊಪ್ಪಳ ರೈಲ್ವೇ ನಿಲ್ದಾಣದಲ್ಲೊಂದು ಅಪರೂಪದ ಘಟನೆ ನಡೆಯಿತು.
ಕೊಪ್ಪಳ ತಾಲೂಕಿನ ಗುಡಗೇರಿ ಗ್ರಾಮದ ನಾಗಬಸಯ್ಯ ಎಂಬುವವರು ಬಿ ಎಸ್ ಎಫ್ ನಲ್ಲಿ 23 ವರ್ಷ ಸೇವೆ ಸಲ್ಲಿಸಿದ ನಿವೃತ್ತಿಯಾಗಿ ಇಂದು ಕೊಪ್ಪಳ ರೈಲು ನಿಲ್ದಾಣಕ್ಕೆ ಆಗಮಿಸಿದರು. ಅವರಿಗೆ ಗುಡಗೇರಿ ಗ್ರಾಮದ ಗ್ರಾಮಸ್ಥರು ಇಂದು ಮುಂಜಾನೆಯೇ ರೈಲು ನಿಲ್ದಾಣಕ್ಕೆ ಆಗಮಿಸಿ ರೈಲು ಮೂಲಕ ಆಗಮಿಸಿದವರಿಗೆ ಅದ್ದೂರಿಯಾಗಿ ಸ್ವಾಗತಿಸಿದರು. ಯೋಧನ ಕುಟುಂಬಕ್ಕೆ ಮಾಲಾರ್ಪಣೆ ಮಾಡಿ ಶಾಲು ಹೊದಿಸಿ ಸನ್ಮಾನಿಸಿ ಸ್ವಾಗತಿಸಿದರು. ಇಡೀ ಗ್ರಾಮದಲ್ಲಿ ಹಬ್ಬದ ವಾತವರಣವಿತ್ತು.
ನಾಗಬಸಯ್ಯ ಹಿರೇಮಠ 2000 ರಲ್ಲಿ ಬಿ ಎಸ್ ಎಫ್ ಗೆ ಸೇವೆಗೆ ಸೇರಿದ್ದರು. ಸೇನೆಗೆ ಸೇರಿದ ನಂತರ ಜಮ್ಮು, ಕಾಶ್ಮೀರ,ಪಶ್ಚಿಮ ಬಂಗಾಳ,ತ್ರಿಪುರ,ಛತ್ತಿಸಗಡ, ಇಂದೋರದಲ್ಲಿ ಸೇವೆ ಸಲ್ಲಿಸಿದ್ದರು.ಈಗ ಹವಾಲ್ದಾರ್ ಆಗಿ ನಿವೃತ್ತಿ ಹೊಂದಿರುವ ನಾಗಬಸಯ್ಯ ನಿವೃತ್ತಿ ಬಳಿಕ ಇಂದು ತನ್ನ ಸ್ವಗ್ರಾಮಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ನಾಗಬಸಯ್ಯ ಹಿರೇಮಠ ಗೆ ಗ್ರಾಮಸ್ಥರು ಸ್ನೇಹಿತರು ಅದ್ಧೂರಿ ಸ್ವಾಗತ ಕೋರಿದರು.
ಈ ಸಂದರ್ಭದಲ್ಲಿ ದೇಶದ ಪರ ಘೋಷಣೆ ಕೂಗಿ ಸ್ವಾಗತ ಕೋರಿದರು.ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿದರು.ದಾರಿಯುದ್ಧಕ್ಕೂ ಜನರುವ ಶುಭಾಶಯ ಕೋರಿದರು. ನಾಗಬಸಯ್ಯಗೆ ಹೂವಿನ ಹಾರ ಹಾಕಿ ಪೊಲೀಸರು ಸಹ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಾಗಬಸಯ್ಯ ಗ್ರಾಮಸ್ಥರು ತೋರಿದ ಪ್ರೀತಿ ವಿಶ್ವಾಸಕ್ಕೆ ಋಣಿಯಾಗಿದ್ದಾನೆ. ಆದರೆ ಮುಂಬರುವ ದಿನಗಳಲ್ಲಿ ನಿವೃತ್ತ ಯೋಧರಿಗೆ ಗೌರವ ನೀಡಬೇಕೆಂದರು.