ಸುದ್ದಿಮೂಲ ವಾರ್ತೆ
ಮಧ್ಯಪ್ರದೇಶ,ಏ.30: ಬ್ಯೂಟಿ ಪಾರ್ಲರ್ಗೆ ಹೋಗುವುದನ್ನು ತಡೆದಿದ್ದಕ್ಕೆ ಮನನೊಂದು ನೇಣಿಗೆ ಶರಣಾದ ಪತ್ನಿ, ಪಾರ್ಲರ್ಗೆ ಹೋಗುತ್ತಿದಂಹತ ಸಂದರ್ಭದಲ್ಲಿ ಹೋಗದಂತೆ ತಡೆದಿರುವ ಹಿನ್ನೆಲೆ ತನ್ನ ಮನೆಯಲ್ಲಿಯೇ ಫ್ಯಾನ್ ಗೆ ನೇಣು ಬಿಗಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ನಡೆದಿದೆ.
ಪಾರ್ಲರ್ಗೆ ಹೋಗದಂತೆ ತಡೆದಿದ್ದ ಪತಿಯ ಮಾತಿಗೆ ಕೋಪಗೊಂಡು ಫ್ಯಾನ್ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇಕೆ 34 ವರ್ಷದ ಮಹಿಳೆಯಾಗಿದ್ದು, ಈ ಘಟನೆಯ ನಂತರ ಮಹಿಳೆಯ ಪತಿ ಪೊಲೀಸರಿಗೆ ಈ ಘಟನೆ ಕುರಿತು ಮಾಹಿತಿ ನೀಡಿದ್ದಾನೆ.
ಈ ಘಟನೆಯು ಏಪ್ರಿಲ್ 27 ರಂದು ನಡೆದಿದೆ . ಏಪ್ರಿಲ್ 28 ರಂದು ಶುಕ್ರವಾರ ತನಿಕೆಯ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗುರುವಾರ ನಗರದ ಸ್ಕೀಮ್ ನಂಬರ್ 51 ಪ್ರದೇಶದಲ್ಲಿ ತನ್ನ ಮನೆಯಲ್ಲಿ ಪ್ಯಾನ್ಗೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬುವುದನ್ನು ಎಂದು ಸಬ್ ಇನ್ಸ್ಪೆಕ್ಟರ್ ಉಮಾಶಂಕರ್ ಯಾದವ್ ತಿಳಿಸಿದ್ದಾರೆ.
ಆಕೆಯನ್ನು ಬ್ಯೂಟಿ ಪಾರ್ಲರ್ಗೆ ಹೋಗದಂತೆ ತಡೆದಿರುವುದಾಗಿ ಆಕೆಯ ಪತಿ ಹೇಳಿದ್ದಾರೆ ಇದರಿಂದ ಕೋಪಗೊಂಡು ಫ್ಯಾನ್ಗೆ ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಪ್ರಕರಣವನ್ನು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ರು ತಿಳಿಸಿದ್ದಾರೆ.