ಸ್ತ್ರೀ ತನ್ನದೇ ಆದ ಅಸ್ತಿತ್ವ ಸೃಷ್ಟಿಸಿಕೊಳ್ಳಬೇಕು:ಪಿ.ಎಸ್ ರಾಜೇಶ್ವರಿ
ಜೇವರ್ಗಿ :ಸರಕಾರಿ ಪ್ರಥಮ ದರ್ಜೆ ಕಾಲೇಜು ಜೇವರ್ಗಿಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ತಾಲೂಕಿನ ದಂಡಾಧಿಕಾರಿಗಳಾದ ಶ್ರೀಮತಿ ರಾಜೇಶ್ವರಿ ಇವರು ಆಗಮಿಸಿದ್ದರು.
ದಂಡಾಧಿಕಾರಿ ಪಿ ಎಸ್ ರಾಜೇಶ್ವರಿ ಮಾತನಾಡಿದರು ಸ್ವಾಭಿಮಾನಿ ಆಗಬೇಕು ಮತ್ತು ಒಳ್ಳೆಯ ಶಿಕ್ಷಣ ಹಾಗೂ ಮಾರ್ಗದರ್ಶನವನ್ನು ಪಡೆಯುವ ಮೂಲಕ ಸಮಾಜದಲ್ಲಿ ತನ್ನದೇ ಆದ ಅಸ್ತಿತ್ವವನ್ನು ಸೃಷ್ಟಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಕರಿಗೋಳೇಶ್ವರ ವಹಿಸಿದರು.ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ಬೋಧಕ ಹಾಗೂ ಬೋಧಕೇತರ ಮಹಿಳಾ ಸಿಬ್ಬಂದಿ ವರ್ಗದವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಡಾ. ವಿಷ್ಣುವರ್ಧನ್, ಡಾ. ನಾಗರೆಡ್ಡಿ, ಅಮಿತ್, ಭೀಮಣ್ಣ, ಡಾ. ಗುರುಪ್ರಕಾಶ್ ಹೂಗಾರ್, ಡಾ. ಲಕ್ಷ್ಮಣ್ ಬೋಸ್ಲೆ, ಡಾ. ಗೀತಾ ರಾಣಿ, ಡಾ. ಸಾವಿತ್ರಿ ಕುಲಕರ್ಣಿ, ಶೈಲಜಾ, ಡಾ. ಶರಣಮ್ಮ, ಭಾಗ್ಯಶ್ರೀ, ಶುಭಲಕ್ಷ್ಮಿ, ಅಕ್ಕಮಹಾದೇವಿ, ಸುಜಾತ, ಸೇರಿದಂತೆ ಕಾಲೇಜಿನ ಸಮಸ್ತ ಮಹಿಳಾ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.