ವಾರೆವ್ಹಾ..! ಯಾವ ಕಲಾವಿದನ ಕುಂಚದಲ್ಲಿ ಆರಳಿದ ಪ್ರಕೃತಿ ಸೌಂದರ್ಯವಿದು ಎಂದನಿಸುತ್ತಿದೆಯೇ? ಪ್ರಕೃತಿ ಮಾತೆ ಸಿಂಗರಿಸಿಕೊಂಡ ಮನಮೋಹಕ ದೃಶ್ಯವಿದು. ಪ್ರಕೃತಿಯ ಮಡಿಲಲ್ಲಿ ಸಾವಿರಾರು ಗಿಡಮರ ಗಳಿದ್ದರೂ ಅಲ್ಲೊಂದು ಇಲ್ಲೊಂದು ಉಳಿದಿರುವ ಹಚ್ಚಹಸಿರಿನ ಗಿಡಮರಗಳ ನಡುವೆ ಕೆಂಪು ಬಣ್ಣವೋ ಬಣ್ಣ. ”
ಪ್ರಕೃತಿ ಮಾತೆ ತನ್ನ ಕೇಶರಾಶಿಗೆ ಹೂವು ಮುಡಿದುಕೊಂಡಂತೆ, ಜೀರುಂಡೆಯ ಗಿಜಿ ಗಿಜಿ. ಜೇನುನೊಣಗಳ ಝೇಂಕಾರ ಹಬ್ಬದ ವೈಭವದಂತಿದೆ. ನಿಸರ್ಗದ ಚೆಲುವನ್ನು ಇಮ್ಮುಡಿಗೊಳಿಸಿದೆ.
ಇಷ್ಟೆಲ್ಲಾ ಪೀಠಿಕೆ ಯಾಕೆನ್ನುವಿರಾ? ಹೊಸಕೋಟೆ ತಾಲೂಕಿನ ನೆಗೆರೇನಹಳ್ಳಿ ಮುಖ್ಯರಸ್ತೆ ಬದಿ, ಗುಳ್ಳಹಳ್ಳಿ ಸರಕಾರಿ ಶಾಲಾ ಅವರಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳು ಹಾಗೂ ಕೆರೆ ಕಟ್ಟೆಯ ದಡಗಳು ಹಾಗೂ ಗುಡಿಬಂಡೆ ಪಟ್ಟಣದ ಹಲವು ಕಡೆ ಹಾಗೂ ಸುತ್ತಲ ಗ್ರಾಮಗಳ ರಸ್ತೆಗಳ ಬದಿ ಗುಲ್ಮೊಹರ್ ಕಂದರಳಿನ ತೇರಿನಂತೆ ಕಂಗೊಳಿಸುತ್ತಿವೆ.
ಬೇಸಿಗೆ ಮುಕ್ತಾಯ ಮತ್ತು ಮಳೆಗಾಲ ಆರಂಭದ ಸಮಯದಲ್ಲಿ ಪಕ್ಷತೆಗೆ ಅದೇನು ಸಂಭ್ರಮ, ಒಂದೆಡೆ ವಿದಾಯಕ್ಕೆ ಸಿದ್ಧವಾದ ಉರಿ ಬಿಸಿಲಿನ ಕಾವು, ಇನ್ನೊಂದೆಡೆ ಧರೆಯ ಸಂಪರ್ಕಕ್ಕೆ ಹೊಂಚುಹಾಕಿ ಕಾದು ಕುಳಿತ ಮಳೆ, ಇವೆರಡರ ನಡುವಿನ ಕಾಲದಲ್ಲಿ ನಿಸರ್ಗದ ಋತುಮಾನದ ಮೊರೆ ಕಳಚುವ ಸಂಭ್ರಮದಲ್ಲಿರುತ್ತದೆ. ಆಗ ಹಲವು ಬಗೆಯ ಹೂವುಗಳು ಪಲ್ಲವಿಸುತ್ತವೆ .
ಗುಲ್ ಮೊಹರ್ ಹೂವುಗಳು ನಾರಿಯ ಮುಡಿ ಏರುವುದಿಲ್ಲ, ದೇವಾಲಯಗಳಲ್ಲಿ ದೇವರ ಪೂಜೆಗೂ ಬಳಕೆ ಆಗುವುದಿಲ್ಲವಾದರೂ ಪ್ರಕೃತಿಯ ಮಡಿಲ ಸೌಂದರ್ಯಕ್ಕೆ ಮನಸೋಲದವರಿಲ್ಲ, ಪ್ರತಿಯೊಬ್ಬರ ಮನಸ್ಸಿಗೂ ಸಂತೋಷ ಉಂಟುಮಾಡುತ್ತವೆ.
ಒಟ್ಟಿನಲ್ಲಿ ಸಸ್ಯಲೋಕ ತನ್ನ ಗರ್ಭದಲ್ಲಿ ಎಷ್ಟೊಂದು ಅತ್ಯದ್ಭುತ, ಆಶ್ಚರ್ಯಕರ ಬಣ್ಣ ವಿನ್ಯಾಸ, ಗುಣಗಳನ್ನು ಅಡಗಿಸಿಕೊಂಡಿ ದೆಯೋ ಏನೋ ಎಂದು ಭಾಸವಾಗುತ್ತದೆ. ಮಾರು ಹೋಗದವರಾರು? ಬೇಸಿಗೆಯ ಬಿಸಿಲ ತಾಪ ತಾಳಲಾರದ ನಾಗರೀಕರು, ವಾಹನ ಸವಾರರು ಮಾರು ಹೋಗುತ್ತಿದ್ದಾರೆ. ಬೇಸಿಗೆಯಲ್ಲಿ ನಳನಳಿಸುವ ಗುಲ್ ಮೊಹರ್ ಅರಳಿದಾಗ ಹೃನ್ಮನ ತಣಿಸುತ್ತಿದೆ.
ಮೂರು ತಿಂಗಳ ಅದ್ಭುತ ವಿಸ್ಮಯ…
ಇದು ಏಪ್ರಿಲ್ ಮೇ ಜೂನ್ ತಿಂಗಳಲ್ಲಿ ಕಂಡು ಬರುವ ವಿಶೇಷ. ನಿಸರ್ಗದಲ್ಲಿ ಈಗ ಪುಷ್ಪೋತ್ಸವ, ಗಿಡ ಮರಗಳಲ್ಲಿ ಬಣ್ಣ ಬಣ್ಣದ ಹೂವುಗಳ ಹಬ್ಬದ ಕಾಲ. ನಿಸರ್ಗವೇ ಏರ್ಪಡಿಸಿರುವ ಪುಪ್ಪೋತ್ಸವ. ಸಾವಿರಾರು ವರ್ಷಗಳಿಂದ ನಿಸರ್ಗದಲ್ಲಿ ನಡೆಯುತ್ತಿರುವ ಪುಣೋತ್ಸವ, ಮಳೆಗಾಲಕ್ಕೆ ದಿನಗಣನೆ ಆರಂಭವಾಗಿದೆ. ರಸ್ತೆ ಬದಿಯ ಮರಗಳಲ್ಲಿ, ಉದ್ಯಾನಗಳು, ಬೆಟ್ಟಗುಡ್ಡಗಳ ಮರಗಳಲ್ಲಿ ಪರಿತ ಹೂವುಗಳ ಜತೆಗೆ ಹೆಸರಿಲ್ಲದ ಎಷ್ಟೋ ಬಣ್ಣ ಬಣ್ಣದ ಹೂವುಗಳು ನಿರಾಡಂಬರ ಸುಂದರಿಯರಂತೆ ಅರಳಿ ನಳ ನಳಿಸುತ್ತಿವೆ. ಮನಸ್ಸಿಗೆ ಮುದ ನೀಡುತ್ತಿವೆ.
ಎಲೆಗಳೇ ಇಲ್ಲದ ಮರಗಳು, ಮೈತುಂಬಾ ಹೂವು ಒದ್ದು ಪಲ್ಲವಿಸಿವೆ. ನಿಸರ್ಗದ ಚೆಲು ವನ್ನು ಈ ಹೂವುಗಳು ಇಮ್ಮಡಿಸಿವೆ. ಅದರಲ್ಲಿ ಗುಲ್ಮೊಹರ್ ಎನ್ನುವುದು ಚೆಲುವಿನ ಅಕ್ಷಯ ಪಾತ್ರೆ. ಇಳೆಯ ಅತ್ಯಂತ ವರ್ಣ ರಂಜಿತ ಮರ ಎನಿಸಿಕೊಂಡಿದೆ. ಮುಂಗಾರು ಮಳೆ ಯ ಆರಂಭದ ದಿನಗಳವರೆಗೂ ಈ ಚೆಲು ವೆಯ ಮೆರವಣಿಗೆ ನಡೆದಿರುತ್ತದೆ. ನಿಸರ್ಗ ಪ್ರಿಯರಿಗೆ ರಸದೂಟ ದೊರೆಯುತ್ತದೆ.