ಸುದ್ದಿಮೂಲ ವಾರ್ತೆ ರಾಯಚೂರು, ಡಿ.08:
ನಗರದ ಶ್ರೀ ಗಿರಿ ಅಭಯ ಆಂಜನೆಯ್ಯ ದೇವಸ್ಥಾಾನದ ಆವರಣದಲ್ಲಿ ರಾಗರಂಜಿನಿ ಕಲಾ ಬಳಗದಿಂದ ಅಭಯ ಕಲೋತ್ಸವ ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮ ಉದ್ಘಾಾಟಿಸಿದ ಬಿಜೆಪಿ ಜಿಲ್ಲಾಾ ಪ್ರಧಾನ ಕಾರ್ಯದರ್ಶಿ ರವೀಂದ್ರ ಜಲ್ದಾಾರ್ ಮಾತನಾಡಿ, ಪಠ್ಯ ಪುಸ್ತಕದೊಂದಿಗೆ ಸಂಗೀತ ಮತ್ತು ಕ್ರೀೆಡೆಗಳಲ್ಲಿಯೂ ಮಕ್ಕಳ ಭಾಗವಹಿಸಲು ಅವಕಾಶ ಪಾಲಕರು ಮಾಡಿದರೆ ಆತ್ಮಸ್ಥೈರ್ಯ ಮತ್ತು ವೇದಿಕೆಯಲ್ಲಿ ಮಾತನಾಡುವ ಧೈರ್ಯದೊಂದಿಗೆ ಸಾಮಾಜಿಕ ಕಳಕಳಿ ಬೆಳೆಯುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದರು.
ವರ್ಷವಿಡೀ ನಗರದಲ್ಲಿ ಯಾವುದೇ ಕಾರ್ಯಕ್ರಮ ಇದ್ದರೂ ಅಲ್ಲಿ ಈ ತಂಡದ ಮುಖ್ಯಸ್ಥೆೆ ಮಹಾಲಕ್ಷ್ಮೀ ಯಾವುದೆ ಲಾಪೇಕ್ಷೆ ಇಲ್ಲದೆ ಭಾಗವಹಿಸುವ ಒಬ್ಬ ಶ್ರೇೇಷ್ಠ ಕಲಾವಿದರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಾನಪದ ಸಾಹಿತ್ಯ ಪರಿಷತ್ ಅಧ್ಯಕ್ಷೆೆ ಡಾ. ಅರುಣಾ ಹಿರೇಮಠ ಮಾತನಾಡಿ ನಗರದಲ್ಲಿ ಕಲಾವಿದರಿಗಾಗಿ ಸಂಗೀತ ಕಲಾ ಭವನ ನಿರ್ಮಾಣಕ್ಕೆೆ ನಿವೇಶನ ಒದಗಿಸಿಕೊಡಲು ಸಚಿವ ಶಾಸಕರಲ್ಲಿ ಅಧಿಕಾರಿಗಳಿಗೆ ಮನವಿ ಮಾಡಬೇಕಾಗಿದೆ ಎಂದು ಹೇಳಿದರು.
ಚಿದಾನಂದ ನುಲಿ, ನಾಗೇಶಪ್ಪ, ಗೀತಾಂಜಲಿ ಧರೇಶ, ನಾಗಮ್ಮ ಆಶಾಪೂರ, ದೀಪಾ, ಶಶಿಧರ ಹೂಗಾರ, ಸಾಯಿ ತಿಲಕ್ ದಾತರ ಹಾಗೂ ಇನ್ನಿಿತರರು ತಮ್ಮ ಸಂಗೀತ ಪ್ರಸ್ತುತ ಪಡಿಸಿದರು,
ವಿನೋದ ಅವರು ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ದಂಡಪ್ಪ ಬಿರಾದಾರ, ಸಂಸ್ಥೆೆ ಅಧ್ಯಕ್ಷೆೆ ಮಹಾಲಕ್ಷ್ಮಿಿ, ವಿಜಯಕುಮಾರ ದಿನ್ನಿಿ, ಸುಧಾಕರ ಅಸ್ಕಿಿಹಾಳ, ದೇವಸ್ಥಾಾನ ಸಮಿತಿ ಅಧ್ಯಕ್ಷ ಬಿ.ಬಸವರಾಜ, ಮಹಾದೇವಪ್ಪ, ಮುನಿಸ್ವಾಾಮಿ, ಗಿರಿಯಪ್ಪ ದಿನ್ನಿಿ, ತಿಪ್ಪಾಾರೆಡ್ಡಿಿ ಪಾಟೀಲ, ಶಶಿಧರ ಕಟ್ಟಿಿಮನಿ, ಷಣ್ಮುಖಪ್ಪಘಿ, ಶಾರದಾ, ನರೇಶ ಯಕ್ಲಾಾಸಪೂರ ಹಾಗೂ ಸಾರ್ವಜನಿಕರು ಪಾಲಕರು ಮಕ್ಕಳು ಉಪಸ್ಥಿಿತರಿದ್ದರು.
ಅಭಯ ಕಲೋತ್ಸವ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಲು ಸಂಗೀತ ಸಹಕಾರಿ – ಜಲ್ದಾರ್

