ಸುದ್ದಿಮೂಲ ವಾರ್ತೆ ಮೈಸೂರು, ಸೆ.29:
ಈ ಬಾರಿಯ ಮೈಸೂರು ದಸರಾ ಮಹೋತ್ಸವದ ವಿಜಯದಶಮಿ ಜಂಬೂಸವಾರಿ ಮೆರವಣಿಗೆಗೆ 3 ದಿನ ಮಾತ್ರ ಬಾಕಿ ಇದ್ದು, ಸೋಮವಾರ ಜಂಬೂಸವಾರಿ ಮೆರವಣಿಗೆಯ ಪೂರ್ವ ತಾಲೀಮು ನಡೆಸಲಾಯಿತು.
ಅಭಿಮನ್ಯು ನೇತೃತ್ವದ ಗಜಪಡೆ, ಅಶ್ವಾಾರೋಹಿ ದಳ, ಪೊಲೀಸ್ ಇಲಾಖೆಯ ವಾದ್ಯವೃಂದ, ನಾನಾ ತುಕಡಿಗಳು ಭಾಗಿಯಾಗಿದ್ದು, ನಿಶಾನೆ ಆನೆಯಾಗಿ ಧನಂಜಯ, ನೌಪತ್ತು ಆನೆಯಾಗಿ ಗೋಪಿ ಇದ್ದು ಆ ನಂತರ ಸಾಲಾನೆಗಳಾಗಿ ಇತರೆ ಆನೆಗಳು ಸಾಗಿದವು.
ಚಿನ್ನದ ಅಂಬಾರಿ ಹೊತ್ತು ಸಾಗಲಿರುವ ಅಭಿಮನ್ಯುವಿಗೆ, ಆನೆ ಯೋಜನೆಯ ಸಿಸಿಎ್ ಮನೋಜ್ ರಾಜನ್, ಮೈಸೂರು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಡಾ. ಎಸ್ ರವಿಶಂಕರ್, ಡಿಸಿಎ್ ಡಾ. ಪ್ರಭುಗೌಡ, ಮೈಸೂರು ನಗರ ಡಿಸಿಪಿಗಳಾದ ಸುಂದರ್ ರಾಜ್, ಬಿಂದುಮಣಿ, ಸಿಎಆರ್ ಡಿಸಿಪಿ ಸಿದ್ದನಗೌಡ ಪಾಟೀಲ್ ಅವರಿಂದ ಸಾಂಕೇತಿಕವಾಗಿ ಪುಷ್ಪಾಾರ್ಚನೆ ಮಾಡಿ ಗೌರವ ಸಲ್ಲಿಸಿದರು.
ಪುಷ್ಪಾಾರ್ಚನೆ ಮಾಡುತ್ತಿಿದ್ದಂತೆ ಅರಮನೆಯ ಹೊರ ಆವರಣದಲ್ಲಿ ನಗರ ಸಶಸ ಮೀಸಲು ಪಡೆ ಪೊಲೀಸರಿಂದ 21 ಬಾರಿ ಕುಶಾಲತೋಪುಗಳು ಸಿಡಿಸಲಾಯಿತು. ರಾಷ್ಟ್ರಗೀತೆ ನುಡಿಸುವುದು ಮುಗಿಯುವುದರೊಳಗೆ 21 ಕುಶಾಲತೋಪುಗಳನ್ನು ಸಿಡಿಸುವಲ್ಲಿ ಸಿಎಆರ್ ಪೊಲೀಸರು ಪೂರ್ವಭಾವಿ ಸಿದ್ಧತೆಯಲ್ಲಿ ಯಶಸ್ವಿಿ ಕಂಡರು. ನಾಳೆ (ಸೆ.30) ಬೆಳಿಗ್ಗೆೆ 8 ಗಂಟೆಗೆ ಅಂತಿಮ ಮೆರವಣಿಗೆಯ ತಾಲೀಮು ನಡೆಸಲಾಗುತ್ತಿಿದೆ
ಎಲ್ಲಾ ಆನೆಗಳು ಸಿದ್ಧ:
ವಿಜಯದಶಮಿ ಜಂಬೂಸವಾರಿ ಮೆರವಣಿಗೆಗೆ ಎಲ್ಲಾ ಆನೆಗಳು ಸಿದ್ದಗೊಂಡಿವೆ ನಾನಾ ಹಂತದ ತಾಲೀಮಿನ ಬಳಿಕ ಇದೀಗ ಅಂತಿಮ ಸುತ್ತಿಿನಲ್ಲಿ ಮೆರವಣಿಗೆಯ ರಿಹರ್ಸಲ್ ನಡೆಸಲಾಗಿದೆ. ಮೆರವಣಿಗೆ ದಿನ ಆನೆಗಳು ಯಾವ ರೀತಿ ಸಾಗಬೇಕು ಎಂಬುದನ್ನು ಮನವರಿಕೆ ಮಾಡಿಕೊಡಲು ಪೂರ್ವ ತಾಲೀಮು ನಡೆಸಲಾಗಿದೆ. ಈ ಮೂಲಕ ಜಂಬೂಸವಾರಿ ಮೆರವಣಿಗೆಗೆ ಆನೆಗಳನ್ನು ತಯಾರಿ ಮಾಡಲಾಗುತ್ತಿಿದೆ. ಆನೆ ಯೋಜನೆಯ ಸಿಸಿಎ್ ಮನೋಜ್ ರಾಜನ್ ಹೇಳಿದರು.
ಬಳಿಕ ಎಡಬಲದಲ್ಲಿದ್ದ ಕುಮ್ಕಿಿ ಆನೆಗಳೊಂದಿಗೆ ಅಭಿಮನ್ಯು ಹೆಜ್ಜೆೆ ಹಾಕುತ್ತಾಾ ಸಾಗಿದ. ಮೈಸೂರು ರಾಜಮನೆತನದ ನವರಾತ್ರಿಿ ದರ್ಬಾರಿನ ಪೂಜಾ ಕೈಂಕರ್ಯಗಳಲ್ಲಿ ಶಾಂತ ರೀತಿಯಲ್ಲಿ ಭಾಗಿಯಾದ ಶ್ರೀಕಂಠ ಆನೆ ಮತ್ತು ಪಟ್ಟದ ಆನೆಯಾಗಿ ಶ್ರೀಕಂಠ ಭಾಗಿಯಾಗಿದ್ದಲ್ಲದೇ,ಇದಕ್ಕೆೆ ಏಕಲವ್ಯ ಆನೆ ಸಾಥ್ ನೀಡಿದ್ದವು.
ನಾದಸ್ವರ ವಾದನದ ಹಿಮ್ಮೇಳದೊಂದಿಗೆ ಅತ್ಯಂತ ಗಂಭೀರವಾಗಿ ಹೆಜ್ಜೆೆ ಹಾಕುತ್ತಾಾ ಸಾಗಿದ ಶ್ರೀಕಂಠ ಹಾಗೂ ಏಕಲವ್ಯರ ಜೊತೆಗೆ ರಾಜಮನೆತನಕ್ಕೆೆ ಸೇರಿರುವ ಪ್ರೀೀತಿ ಮತ್ತು ಚಂಚಲ ಆನೆಗಳು, ಪಟ್ಟದ ಕುದುರೆ, ಹಸುಗಳು ಭಾಗಿಯಾಗಿದ್ದವು.
ಸತ್ಯಕ್ಕೆೆ ದೂರ
ಅರಮನೆ ಆವರಣದಲ್ಲಿ ಶ್ರೀಕಂಠ ಆನೆ ಅಡ್ಡಾಾದಿಡ್ಡಿಿಯಾಗಿ ಓಡಾಡಿದವು ಎಂಬುದು ಸತ್ಯಕ್ಕೆೆ ದೂರವಾದ ಸಂಗತಿ. ಶ್ರೀಕಂಠ ಆನೆ ಅಡ್ಡಾಾದಿಡ್ಡಿಿಯಾಗಿ ಓಡಿದೆ ಎಂದು ತಿರುಚಲಾದ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಡಲಾಗಿದೆ. ವೀಡಿಯೋ ದೃಶ್ಯಾಾವಳಿಯ ವೇಗ ಹೆಚ್ಚಿಿಸುವ ಮೂಲಕ ಶ್ರೀಕಂಠ ಆನೆ ಅಡ್ಡಾಾದಿಡ್ಡಿಿಯಾಗಿ ಓಡಾಡಿದಂತೆ ಬಿಂಬಿಸಲಾಗಿದೆ. ಎಐ ತಂತ್ರಜ್ಞಾನ ಬಳಸಿಕೊಂಡು ಶ್ರೀಕಂಠ ಆನೆ ಅಡ್ಡಾಾದಿಡ್ಡಿಿ ಓಡಿದಂತೆ ತೋರಿಸಲಾಗಿದೆ. ಆನೆಗಳ ಬಳಿ ರೀಲ್ಸ್ ಮಾಡಿದ್ದವರ ವಿರುದ್ಧವೂ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಡಿಸಿಎ್ ಡಾ. ಪ್ರಭುಗೌಡ ಸ್ಪಷ್ಟನೆ ನೀಡಿದ್ದಾರೆ.
ಜಂಬೂ ಸವಾರಿಯಲ್ಲಿ ಭಾಗಿಯಾಗುವ ಆನೆಗಳು:
ಈ ಬಾರಿಯ ವಿಜಯದಶಮಿ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗಿಯಾಗುವ ಆನೆಗಳ ಪಟ್ಟಿಿಯನ್ನು ಅರಣ್ಯ ಸಚಿವ ಈಶ್ವರ್ ಖಂಡ್ರೆೆ ಘೋಷಣೆ ಮಾಡಿದ್ದಾರೆ.
ಅಂಬಾರಿ ಆನೆ – ಅಭಿಮನ್ಯು
ಕುಮ್ಕಿಿ ಆನೆಗಳು – ಕಾವೇರಿ, ರೂಪ.
ನಿಶಾನೆ ಆನೆ – ಧನಂಜಯ
ನೌತ್ ಆನೆ – ಗೋಪಿ
ಸಾಲಾನೆಗಳಾಗಿ ಮಹೇಂದ್ರ, ಶ್ರೀಕಂಠ, ಲಕ್ಷ್ಮಿಿ, ಕಂಜನ್, ಭೀಮ, ಏಕಲವ್ಯ, ಪ್ರಶಾಂತ, ಸುಗ್ರಿಿವ್, ಹೇಮಾವತಿ ಆನೆಗಳು ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗಿಯಲಿವೆ.
ಕಮಾಂಡೋ ಪಡೆ ಬಳಕೆ
ಮೈಸೂರು ದಸರಾ ಗಜಪಡೆಯ ಆನೆ ಬಳಿಗೆ ಹೋಗಿ ಕೆಲವರು ೆಟೋ, ರೀಲ್ಸ್ ಮಾಡಿದ್ದು ಇಂತಹವರಿಗೆ ನಿರ್ದಾಕ್ಷಿಣ್ಯವಾಗಿ ದಂಡ ಸೂಚಿಸಲಾಗಿದೆ. ಹಾಗೆಯೇ ದಸರಾ ಆನೆಗಳ ಬಳಿ ಹೋಗದಂತೆ ತಡೆಯಲು ಕಮಾಂಡೋ ಪಡೆ ಬಳಕೆಗೂ ತಿಳಿಸಲಾಗಿದೆ ಸಚಿವರು ಹೇಳಿದ್ದಾರೆ.

