ಸುದ್ದಿಮೂಲ ವಾರ್ತೆ ಸಿಂಧನೂರು, ಡಿ.30:
ಸಹಕಾರಿ ಸಂಘದ ಸದಸ್ಯರ ಸಹಕಾರ ಹಾಗೂ ಪ್ರೋೋತ್ಸಾಾಹದೊಂದಿಗೆ ಜನತಾ ಸೌಹಾರ್ದ ಸಹಕಾರಿ ಸಂಘವು ಯಶಸ್ಸಿಿನೆಡೆಗೆ ಮುನ್ನುಗ್ಗುತ್ತಿಿದ್ದು ರೂ.155 ಕೋಟಿ ರೂ. ವ್ಯವಹಾರ ದಾಟಿದ್ದು ಈ ವರ್ಷ ರೂ. 175 ಕೋಟಿ ವ್ಯವಹಾರ ದಾಖಲಿಸುವ ಗುರಿ ಹೊಂದಿದೆ ಎಂದು ಸಂಘದ ಅಧ್ಯಕ್ಷ ಅಭಿಷೇಕ್ ಸಿಂಗನಾಳ್ ತಿಳಿಸಿದ್ದಾಾರೆ.
ಸೌಹಾರ್ದ ಸಹಕಾರಿ ಕಾಯ್ದೆೆಯ ಬೆಳ್ಳಿಿ ಹಬ್ಬದ ಸಮಾರೋಪ ಸಮಾರಂಭದ ಅಂಗವಾಗಿ ಬೆಳಗಾವಿಯ ಕೆಎಲ್ಇ ಜೀರಗೆ ಭವನದಲ್ಲಿ ಭಾನುವಾರ ಎಸ್.ಎಸ್.ಪಾಟೀಲ್ ವೇದಿಕೆಯಲ್ಲಿ ಅತ್ಯುತ್ತಮ ಸಹಕಾರಿ ವ್ಯವಸ್ಥೆೆಯ ಸಂಘ ಹಾಗೂ ಸೌಹಾರ್ದ ಕಾಯ್ದೆೆಯ ಅಡಿಯಲ್ಲಿ ನೋಂದಣಿಗೊಂಡ ಮೊದಲ 50 ಸಹಕಾರಿ ಸಂಘದಲ್ಲಿ ಮುಂಚೂಣಿಯಲ್ಲಿದ್ದಕ್ಕಾಾಗಿ ಸೌಹಾರ್ದ ಸಂಯುಕ್ತ ಸಹಕಾರಿ ಕಡೆಯಿಂದ ಸನ್ಮಾಾನ ಸ್ವೀಕರಿಸಿದ ಶುಭ ಸಂದರ್ಭದಲ್ಲಿ ಅವರು ಸಂತೋಷ ವ್ಯಕ್ತಪಡಿಸಿ ಸಂಘದ ಪರವಾಗಿ ಬೆಳಗಾವಿಯಲ್ಲಿ ಉಪಾಧ್ಯಕ್ಷ ಎಸ್.ಶರಣೇಗೌಡ ಹಾಗೂ ಮುಖ್ಯಕಾರ್ಯನಿರ್ವಾಹಕ ಗಿರೀಶ್ ಎಂ ರವರು ಸನ್ಮಾಾನ ಸ್ವೀಕರಿಸಿದ್ದಾಾರೆ. ವ್ಯಾಾವಹಾರಿಕ ಅಭಿವೃದ್ಧಿಿಯ ಜೊತೆಗೆ ಸಮಾಜ ಸೇವೆಯಲ್ಲಿ ಜನತಾ ಸೌಹಾರ್ದ ಸಹಕಾರಿಯು ಮುಂಚೂಣಿಯಲ್ಲಿದ್ದು, ಈಗಾಗಲೇ ಸಿಂಧನೂರು, ಗಂಗಾವತಿ, ರಾಯಚೂರು ಹಾಗೂ ಬಾರಂದೂರು ಶಾಖೆಗಳನ್ನು ಹೊಂದಿದೆ.
ಸಹಕಾರಿ ಸಂಘ ಮುಕ್ತಿಿರಥ ಸೇವೆ ನೀಡುತ್ತಿಿದ್ದು, ಈ ಸೇವೆಯು ಜನರ ಮೆಚ್ಚಿಿಗೆಗೆ ಪಾತ್ರವಾಗಿದೆ. ಇಷ್ಟರಲ್ಲೇ ರಾಯಚೂರಿನಲ್ಲೂ ಈ ಸೇವೆ ನೀಡಲು ಸಿದ್ಧರಾಗಿರುವುದಾಗಿ ಮತ್ತು ಇನ್ನು ಹೆಚ್ಚಿಿನ ಶಾಖೆಗಳನ್ನು ಪ್ರಾಾರಂಭ ಮಾಡಲು ಗುರಿ ಹೊಂದಿದೆ ಎಂದು ಪತ್ರಿಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ಜನತಾ ಸೌಹಾರ್ದ ಸಹಕಾರಿಗೆ ಸಂಯುಕ್ತ ಸಹಕಾರಿಯಿಂದ ಸನ್ಮಾನ 175 ಕೋಟಿ ವ್ಯವಹಾರದ ಗುರಿ : ಅಭಿಷೇಕ ಸಿಂಗನಾಳ

