ವೆಂಕಟೇಶ ಹೂಗಾರ ರಾಯಚೂರು , ಅ.17
ರಾಯಚೂರಿನಲ್ಲಿ ಮೆಣಸಿನಕಾಯಿ ಮಾರುಕಟ್ಟೆೆ ನಿರ್ಮಿಸುವ ಕನಸಿಗೆ ಹೆದ್ದಾಾರಿಯ ವಿಘ್ನ ಎದುರಾಗಿ ಈ ವರ್ಷವೇ ಮಾರುಕಟ್ಟೆೆ ನಿರ್ಮಿಸುವ ಕನಸು ಭಗ್ನಗೊಂಡಂತಾಗಿದೆ.
ಜಿಲ್ಲೆೆಯ ಮೆಣಸಿನಕಾಯಿ ಬೆಳೆಯುವ ರೈತರ ಸ್ಥಿಿತಿ, ಮಾರುಕಟ್ಟೆೆ ನಿರ್ಮಿಸುವ ಆಸೆ ಹೊತ್ತ ಎಪಿಎಂಸಿ ಆಡಳಿತ ಮಂಡಳಿಗೆ ಹಲ್ಲಿದ್ದಾಾಗ ಕಡಲೆ ಇಲ್ಲಘಿ, ಕಡಲೆ ಇದ್ದಾಾಗ ಹಲ್ಲೇ ಇಲ್ಲ ಎಂಬ ಗಾದೆೆ ಮಾತಿನಂತಾಗಿದೆ ಸದ್ಯದ ಸ್ಥಿಿತಿ.
ಜಿಲ್ಲೆೆಯ ರಾಯಚೂರು, ಮಾನ್ವಿಿಘಿ, ದೇವದುರ್ಗ ಹಾಗೂ ಸಿಂಧನೂರು ತಾಲೂಕಿನಲ್ಲಿ ಕಳೆದ ಐದಾರು ವರ್ಷಗಳಿಂದ ಮೆಣಸಿನ ಕಾಯಿ ಬೆಳೆಯುವ ಪ್ರದೇಶ ವಿಸ್ತಾಾರಗೊಂಡಿದೆ. ಅಲ್ಲಿ ಬೆಳೆದ ಉತ್ಪನ್ನ ಮಾರಾಟಕ್ಕೆೆ ಕರ್ನಾಟಕದ ಬ್ಯಾಾಡಗಿಗೆ ಹೊರತು ಪಡಿಸಿದರೆ ಆಂಧ್ರದ ಗುಂಟೂರಿಗೆ ತೆರಳುವುದು ಅನಿವಾರ್ಯವಾಗಿದೆ. ಅಲ್ಲದೆ, ಸಿಂಧನೂರಲ್ಲಿ ಸಣ್ಣ ಮಟ್ಟಿಿಗೆ ವ್ಯಾಾಪಾರ ನಡೆದರೂ ಮೆಣಸಿನಕಾಯಿ ಹೆಚ್ಚಿಿನ ಸಂಗ್ರಹಕ್ಕೆೆ ಗೋದಾಮುಗಳಿಂದಾಗಿ ಸಮಸ್ಯೆೆಯಾಗುತ್ತಿಿತ್ತುಘಿ.
ರಾಯಚೂರು ಎಪಿಎಂಸಿಯ ಹಳೆಯ ಮಾರುಕಟ್ಟೆೆಯಲ್ಲೂ ಆರಂಭಿಸಿದ್ದ ಮೆಣಸಿನಕಾಯಿ ಮಾರುಕಟ್ಟೆೆಗೆ ವರ್ತಕರು, ರೈತರು ಬಂದರೂ ವ್ಯವಸ್ಥೆೆ ಇಲ್ಲದ ಕಾರಣ ಸ್ಥಗಿತಗೊಂಡಿತ್ತುಘಿ.
ನಬಾರ್ಡ್ ಹಾಗೂ ಕೃಷಿ ಮಾರಾಟ ಮಂಡಳಿ ಸಹಯೋಗದಲ್ಲಿ ಮಾರುಕಟ್ಟೆೆ ನಿರ್ಮಾಣ ಮಾಡುವುದರಿಂದ ಸಾರಿಗೆ ಸಂಪರ್ಕಕ್ಕೂ ಅನುಕೂಲವಾಗಲಿದ್ದು ವರ್ತಕರಿಗೆ ಹಾಗೂ ಮೆಣಸಿನಕಾಯಿ ಸಾಗಣೆಗೆ ರೈಲ್ವೆೆಘಿ, ಬಸ್, ಹೈದ್ರಾಾಬಾದ್, ಮುಂಬೈ ಸೇರಿ ಪ್ರಮುಖ ನಗರ ಸಂಪರ್ಕ ಸುಲಭವಾಗಲಿದೆ ಎನ್ನುವ ಮಾತು ಅಧಿಕಾರಿಗಳದ್ದಾಾಗಿದೆ.
ಹೀಗಾಗಿ, ಗ್ರಾಾಮೀಣ ಶಾಸಕರ ಹಾಗೂ ಎಪಿಎಂಸಿ ಆಡಳಿತ ಸಮಿತಿಯ ಆಸಕ್ತಿಿಯಿಂದಾಗಿ ರಾಯಚೂರಿನ ಹತ್ತಿಿ ಮಾರುಕಟ್ಟೆೆ ಹಿಂಭಾಗದ 14 ಎಕರೆ ಪ್ರದೇಶದಲ್ಲಿ ಮೆಣಸಿನಕಾಯಿ ಮಾರುಕಟ್ಟೆೆ ನಿರ್ಮಾಣದ ಕನಸೊತ್ತು ಭೂಮಿ ಅಂತಿಮಗೊಳಿಸಿ ಇನ್ನೇನು ನಬಾರ್ಡ್ ಅವರ ಸಹಾಯದೊಂದಿಗೆ ಸುಮಾರು 25 ಕೋಟಿ ನೆರವಿನೊಂದಿಗೆ 50 ಕೋಟಿ ವೆಚ್ಚದಲ್ಲಿ ಮಾರುಕಟ್ಟೆೆ ನಿರ್ಮಾಣ ಆಗಲಿದೆ ಎನ್ನುವುದರೊಳಗೆ ರಾಷ್ಟ್ರೀಯ ಹೆದ್ದಾಾರಿ ಪ್ರಾಾಧಿಕಾರದ ಹುನುಗುಂದಾ- ಹೆದ್ದಾಾರಿ ಮಾರುಕಟ್ಟೆೆಗೆ ಗುರುತಿಸಿದ ಭೂಮಿಯ ಮಧ್ಯೆೆಯಲ್ಲಿಯೆ ರಸ್ತೆೆ ಹಾದು ಹೋಗಲಿರುವುದರಿಂದ ಇದೀಗ ಕನಸಿಗೆ ಗರ ಬಡಿದಂತಾಗಿದೆ.
ಈಗಿರುವ ಹತ್ತಿಿ ಮಾರುಕಟ್ಟೆೆ ಹಿಂಭಾಗದಲ್ಲಿ 14 ಎಕರೆ ಭೂಮಿಯಲ್ಲಿ ಸುಮಾರು 7 ಎಕರೆ ಚತುಷ್ಪಥ ಹೆದ್ದಾಾರಿ ನಿರ್ಮಾಣಕ್ಕೆೆ ಭೂಸ್ವಾಾಧೀನಕ್ಕೆೆ ಗುರುತಿಸಲಾಗಿದೆ. ಹೀಗಾಗಿ, ನಬಾರ್ಡ್ ಸಹಯೋಗದಲ್ಲಿ ಗುರುತಿಸಿ ಮಾರುಕಟ್ಟೆೆ ನಿರ್ಮಿಸಲು ಅಗತ್ಯ ಇರುವ ಭೂಮಿಯ ಕೊರತೆ ಎದುರಾಗಲಿರುವುದರಿಂದ ಇತ್ತೀಚೆಗೆ ಕೃಷಿ ಮಾರಾಟ ಮಂಡಳಿಯ ಕಾರ್ಯದರ್ಶಿಗಳು ಆಗಮಿಸಿ ಪರಿಶೀಲಿಸಿ ಮರಳಿದ್ದಾಾರೆ.
ಸ್ಥಳೀಯ ಎಪಿಎಂಸಿಯ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳಿಗೆ ಮರು ಪರಿಶೀಲನೆಗಾಗಿ ಇಲಾಖೆಗೆ ಸೇರಿದ ಇನ್ನೂ ಏಳು ಎಕರೆ ಭೂಮಿ ಗುರುತಿಸಿ ಪುನಃ ನಬಾರ್ಡ್ಗೆ ಪರಿಷ್ಕೃತ ಪ್ರಸ್ತಾಾವನೆಯನ್ನು ಹೊಸದಾಗಿ ಸಲ್ಲಿಸಲು ಸೂಚಿಸಿರುವುದಾಗಿ ಗೊತ್ತಾಾಗಿದೆ.
ಈ ಮೂಲಕ ಈ ವರ್ಷವೇ ಜಿಲ್ಲೆೆಯಲ್ಲಿ ಮೆಣಸಿನಕಾಯಿ ಬೆಳೆಯುವ ರೈತರ ಆಸರೆಗೆ ಹೊಸ ಮಾರುಕಟ್ಟೆೆ ತಲೆ ಎತ್ತಲಿದೆ ಎಂಬ ಆಸೆ ಸದ್ಯಕ್ಕೆೆ ಕಮರಿದೆ ಎನ್ನುವುದರಲ್ಲಿ ಸಂದೇಹವೇ ಇಲ್ಲಘಿ. ಇನ್ನೂ ಮೂರು ತಿಂಗಳಲ್ಲಿ ನಬಾರ್ಡ್ಗೆ ಪುನರ್ ಪರಿಶೀಲನೆಗೆ ಪರಿಷ್ಕೃತ ಪ್ರಸ್ತಾಾವನೆ ಸಲ್ಲಿಸಿ, ಅನುಮತಿ ಪಡೆದು ನಬಾರ್ಡ್ ತಂಡ ರಾಯಚೂರಿಗೆ ಆಗಮಿಸಿ ಸ್ಥಳ ಪರಿಶೀಲಿಸಿ ಒಪ್ಪಿಿಗೆ ಕೊಡಬೇಕು ಇದು ಮೂರು ತಿಂಗಳಲ್ಲಿ ಕಷ್ಟ ಎನ್ನುವ ಮಾತು ಅಧಿಕಾರಿಗಳ ವಲಯದಿಂದ ಕೇಳಿ ಬಂದಿದೆ.
ಏನಿತ್ತು ಯೋಜನೆ :
ಕಳೆದ ಅಕ್ಟೋೋಬರ್ನಲ್ಲಿ ಮುಂಬೈನಿಂದ ನಬಾರ್ಡ್ನ ಮೂವರು ಉನ್ನತಾಧಿಕಾರಿಗಳ ತಂಡ ಆಗಮಿಸಿ ಎಪಿಎಂಸಿ ಗುರುತಿಸಿದ್ದ 14 ಎಕರೆ ಭೂಮಿ ಪರಿಶೀಲಿಸಿ ನಬಾರ್ಡ್ನ ಸಾಲದ ರೂಪದ 25 ಕೋಟಿ ಆರ್ಥಿಕ ನೆರವಿನೊಂದಿಗೆ ಮೂಲಭೂತ ಸೌಕರ್ಯಗಳಾದ ರಸ್ತೆೆಘಿ, ಚರಂಡಿ, ಬೆಳಕು, ನೀರು ಮತ್ತು ನಿವೇಶನಗಳ ಅಭಿವೃದ್ದಿಗೆ ಆದ್ಯತೆ ನೀಡುವ ಯೋಜನೆ ಹಾಕಿಕೊಳ್ಳಲಾಗಿತ್ತುಘಿ. ಅಲ್ಲದೆ, ಮೆಣಸಿನಕಾಯಿ ಸಂಗ್ರಹಕ್ಕೆೆ ವರ್ತಕರಿಗೆ ಅನುಕೂಲಕ್ಕಾಾಗಿ ಕೃಷಿ ಮಾರಾಟ ಮಂಡಳಿಗೆ 14 ಎಕರೆ ಪೈಕಿ 5 ಎಕರೆ ಜಮೀನು ಕಾಯ್ದಿಿರಿಸಿ ಪ್ರಸ್ತಾಾವನೆ ಸಲ್ಲಿಕೆಯಾಗಿದ್ದು ಮಂಡಳಿಯಿಂದಲೂ 25 ಕೋಟಿ ವೆಚ್ಚದಲ್ಲಿ ಎರಡು ಅತ್ಯಾಾಧುನಿಕ ಸೌಕರ್ಯ ಉಳ್ಳ ಕೋಲ್ಡ್ ಸ್ಟೋೋರೇಜ್ ನಿರ್ಮಾಣಕ್ಕೂ ಮುಂದಾಗಲಾಗಿತ್ತುಘಿ. ಆದರೆ, ಇದೀಗ ಅದಕ್ಕೂ ಕಲ್ಲು ಬಿದ್ದಂತಾಗಿದೆ.
ಈಗಾಗಲೇ ರಾಜ್ಯದ ಕೃಷಿ ಉತ್ಪನ್ನ ಮಾರುಕಟ್ಟೆೆ ಸಮಿತಿಯ ಮೂಲಕ ವಿಸ್ತೃತವಾದ ವರದಿಯನ್ನು ಎಪಿಎಂಸಿ ಅಧಿಕಾರಿಗಳು ಸಲ್ಲಿಸಿದ್ದಕ್ಕೆೆ ಆಡಳಿತಾತ್ಮಕ ಅನುಮೋದನೆ ಜೊತೆಗೆ ಆರ್ಥಿಕ ಇಲಾಖೆಯಿಂದಲೂ ಹಸಿರು ನಿಶಾನೆ ಸಿಕ್ಕಿಿತ್ತುಘಿ.
ಒಟ್ಟಾಾರೆ ಈ ಜಿಲ್ಲೆೆಯ ಮೆಣಸಿನಕಾಯಿ ಬೆಳೆಗಾರರ ಮಾರುಕಟ್ಟೆೆಯ ಸಮಸ್ಯೆೆಗೆ ಶಾಶ್ವತ ಪರಿಹಾರ ಹುಡುಕುವ ಶಾಸಕರು, ಆಡಳಿತ ಮಂಡಳಿ ಅಧಿಕಾರಿಗಳ ಆಸೆಗೆ ಹೆದ್ದಾಾರಿ ನಿರ್ಮಾಣದ ಯೋಜನೆ ತಣ್ಣೀರು ಎರಚಿದಂತಾಗಿದೆ.
ಮೆಣಸಿನಕಾಯಿ ಮಾರುಕಟ್ಟೆೆ ನಿರ್ಮಾಣಕ್ಕೆೆ ಸರ್ಕಾರದಿಂದ ಅನುಮತಿ ಸಿಕ್ಕಿಿತ್ತುಘಿ. ಆದರೆ, ಮಾರುಕಟ್ಟೆೆಗೆ ಗುರುತಿಸಿದ ಜಮೀನಿನ ಅರ್ಧದಷ್ಟು ಹುನಗುಂದ-ಬೆಳಗಾವಿ – ರಾಯಚೂರು ಹೆದ್ದಾಾರಿಗೆ ಸ್ವಾಾಧೀನಪಡಿಸಿಕೊಂಡ ಕಾರಣ ಅನುದಾನ ನೀಡಲು ಮುಂದೆ ಬಂದಿರುವ ನಬಾರ್ಡ್ಗೆ ಮರು ಪ್ರಸ್ತಾಾವನೆ ಸಲ್ಲಿಸಲು ಸಿದ್ದತೆ ಮಾಡಿಕೊಳ್ಳಲಾಗುತ್ತಿಿದೆ. ವಿಸ್ತೃತ ಯೋಜನೆ ಸಮೇತ ವರದಿ ಸಲ್ಲಿಸಲು ಶಾಸಕರು ಸೂಚಿಸಿದ್ದು ಶೀಘ್ರವೇ ಕಾಮಗಾರಿ ಆರಂಭವಾಗಲಿದೆ.
— ಮಲ್ಲಿಕಾರ್ಜುನ ಗೌಡ ತಲಮಾರಿ, ಎಪಿಎಂಸಿ ಅಧ್ಯಕ್ಷರು.
ಈ ಹಿಂದೆ ಅಂದುಕೊಂಡಂತೆ ಆಗಿದ್ದರೆ ಮುಂದಿನ ತಿಂಗಳಿಗೆಲ್ಲ ಕಾಮಗಾರಿ ಆರಂಭವಾಗಬೇಕಿತ್ತುಘಿ. ಆದರೆ, ಹೆದ್ದಾಾರಿ ಗುರುತಿಸಿದ ಜಮೀನಲ್ಲಿಯೇ ಬರುವುದರಿಂದ ಹಿರಿಯ ಅಧಿಕಾರಿಗಳ ಸಲಹೆ ಪಡೆದು ನಬಾರ್ಡ್ಗೆ ಪುನಃ ಪ್ರಸ್ತಾಾವನೆಗೆ ತಯಾರಿ ಮಾಡಿಕೊಳ್ಳುತ್ತಿಿದ್ದೇವೆ ಈಗಾಗಲೆ — ಅದೆಪ್ಪಗೌಡ, ಕಾರ್ಯದರ್ಶಿ, ಎಪಿಎಂಸಿ ರಾಯಚೂರು.