ಬೂದಯ್ಯಸ್ವಾಮಿ ಇಂಗಳದಾಳ ಗಬ್ಬೂರು, ಡಿ.13
ಸಮೀಪದ ಹಿರೇರಾಯಕುಂಪಿ ಗ್ರಾಾಮ ಚರಂಡಿ ನೀರಿನ ಸಮಸ್ಯೆೆಯಿಂದ ನರಳುತ್ತಿಿದೆ. ಊರು ಪ್ರವೇಶ ಮಾಡುವ ಅಗಸಿ ಮುಂದೆ ಬಾವಿ ಗಾತ್ರದ ಗುಂಡಿಬಿದ್ದು 2ಅಡಿ ಚರಂಡಿ ನೀರು ನಿಲ್ಲುತ್ತಿಿವೆ. ಶಾಸಕಿ ಕರೆಮ್ಮ ಜಿ.ನಾಯಕ ಊರಿಗೆ ಭೇಟಿನೀಡಿ ಗುಂಡಿ ಮುಚ್ಚಲು ಸೂಚಿಸಿದ್ದರೂ ಅಧಿಕಾರಿಗಳು ಕವಡೆಕಾಸಿನ ಕಿಮ್ಮತ್ತು ಕೊಡುತ್ತಿಿಲ್ಲ ಎಂದು ಗ್ರಾಾಮಸ್ಥರು ಆರೋಪಿಸಿದ್ದಾಾರೆ.
ಶಾವಂತಗೇರಾ ಗ್ರಾಾಪಂಗೆ ಹಿರೇರಾಯಕುಂಪಿ ಒಳಪಡುತ್ತಿಿದ್ದು ಪಿಡಿಒ ಸೈಯದ್ ಮತೀನ್ ಕಚೇರಿಗೆ ಬರುತ್ತಿಿಲ್ಲ, ೆನ್ ಸ್ವೀಕರಿಸುತ್ತಿಿಲ್ಲ ಎಂದು ಗ್ರಾಾಮಸ್ಥರು ಅಸಮಾಧಾನ ವ್ಯಕ್ತಪಡಿಸುತ್ತಿಿದ್ದಾಾರೆ. ಗ್ರಾಾಮ ಚರಂಡಿ ನೀರಿನ ಸಮಸ್ಯೆೆಯಿಂದ ನರಳುತ್ತಿಿದ್ದು ಎಲ್ಲೆೆಂದರಲ್ಲಿ ನೀರುನಿಂತು ನರಕಯಾತನೆ ಅನುಭವಿಸುತ್ತಿಿದ್ದಾಾರೆ. ಊರು ಪ್ರವೇಶ ಮಾಡುವ ಅಗಸಿ ಮುಂದೆ ಗುಂಡಿಬಿದ್ದು ನೀರು ನಿಲ್ಲುತ್ತಿಿವೆ. ಅಲ್ಲದೆ ರಸ್ತೆೆ ಮೇಲೆ ನೀರು ಹರಿಯುತ್ತಿಿದ್ದು ಚರಂಡಿ ವ್ಯವಸ್ಥೆೆ ಕಲ್ಪಿಿಸಿಲ್ಲ. ಸೊಳ್ಳೆೆಗಳ ಹಾವಳಿ ಮಿತಿಮೀರಿದ್ದು ಸಾಂಕ್ರಾಾಮಿಕ ರೋಗದ ಭೀತಿ ಆವರಿಸಿದೆ. ಊರಿನ ಮೇಲ್ಭಾಾಗದ ಮಳೆ ಹಾಗೂ ಚರಂಡಿ ನೀರು ಅಗಸಿಗೆ ಹರಿದುಬರುತ್ತಿಿವೆ. ಮಹಿಳೆಯರು, ಮಕ್ಕಳು ಸೇರಿ ಜನರ ಓಡಾಟಕ್ಕೆೆ ತೀವ್ರ ಸಮಸ್ಯೆೆಯಾಗಿದೆ.
ವಿವಿಧ ಅಭಿವೃದ್ಧಿಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲು ಡಿ.1ರಂದು ಶಾಸಕಿ ಕರೆಮ್ಮ ಜಿ.ನಾಯಕ ಭೇಟಿನೀಡಿದ್ದರು. ಆ ಸಂದರ್ಭದಲ್ಲಿ ಗ್ರಾಾಮಸ್ಥರು ಅಗಸಿ ಮುಂದಿನ ಚರಂಡಿ ನೀರಿನ ಸಮಸ್ಯೆೆ ಬಗ್ಗೆೆ ನೋವು ತೋಡಿಕೊಂಡಿದ್ದರು. ಸ್ಥಳದಲ್ಲೆೆ ಇದ್ದ ತಾಪಂ ಇಒ ಬಸವರಾಜ ಹಟ್ಟಿಿ, ಪಿಡಿಒ ಸೈಯದ್ ಮತೀನ್ಗೆ ಸೂಚನೆ ನೀಡಿ ನೀರು ನಿಲ್ಲದಂತೆ ಕ್ರಮಕೈಗೊಳ್ಳಲು ಸೂಚಿಸಿದ್ದರು. ನಾಳೆಯೇ ಕ್ರಮಕೈಗೊಳ್ಳುತ್ತೇವೆ ಎಂದು ತಲೆ ಅಲ್ಲಾಾಡಿಸಿದ್ದ ಅಧಿಕಾರಿಗಳು, ಸೂಚನೆ ನೀಡಿ 15ದಿನವಾದರೂ ಆಕಡೆ ಕಣ್ಣೆೆತ್ತಿಿಯೂ ನೋಡಿಲ್ಲ. ಸಮಸ್ಯೆೆ ಇನ್ನೂ ಜೀವಂತವಿದ್ದು, ಶಾಸಕಿ ಮಾತಿಗೆ ಅಧಿಕಾರಿಗಳು ಕವಡೆಕಾಸಿನ ಕಿಮ್ಮತ್ತು ನೀಡಿಲ್ಲ ಎಂದು ಗ್ರಾಾಮಸ್ಥರು ಆರೋಪಿಸುತ್ತಿಿದ್ದಾಾರೆ.
ಶಾವಂತಗೇರಾ ಗ್ರಾಾಪಂಗೆ 15ವರ್ಷಗಳಿಂದ ಚುನಾವಣೆಯೇ ನಡೆದಿಲ್ಲ. ಗ್ರಾಾಪಂ ಪುನರ್ವಿಂಗಡಣೆ ಸಂದರ್ಭದಲ್ಲಿ ಕೆಲವರು ಕಲಬುರಗಿಯ ಸಂಚಾರಪೀಠದಲ್ಲಿ ದಾವೆಹೂಡಿದ್ದಾಾರೆ. ಹೀಗಾಗಿ 15ವರ್ಷಗಳಿಂದ ಗ್ರಾಾಪಂ ಸದಸ್ಯರು ಸೇರಿ ಆಡಳಿತ ಮಂಡಳಿಯೇ ರಚನೆಯಾಗಿಲ್ಲ. ಹೀಗಾಗಿ ಅಧಿಕಾರಿಗಳು ಆಡಿದ್ದೇ ಆಟ. ಜನರ ಸಮಸ್ಯೆೆ ಯಾರೂ ಕೇಳುತ್ತಿಿಲ್ಲ. ಪಿಡಿಒ ಸರಿಯಾಗಿ ಕಚೇರಿಗೆ ಬರುತ್ತಿಿಲ್ಲ. ಗ್ರಾಾಮದಲ್ಲಿ ಸಂಪೂರ್ಣ ಡ್ರೈನೇಜ್, ಸಿಸಿ ರಸ್ತೆೆ ನಿರ್ಮಾಣಕ್ಕೆೆ ಅನುದಾನ ಬಂದರೂ ಕಾಮಗಾರಿ ಪ್ರಾಾರಂಭಿಸಿಲ್ಲ. ಕೆಲಸ ಯಾವಾಗಾದ್ರೂ ಮಾಡಿ ಅಗಸಿಮುಂದೆ ನೀರು ನಿಲ್ಲದಂತೆ ಮರಂ ಹಾಕಲು ಗ್ರಾಾಮಸ್ಥರು ಒತ್ತಾಾಯಿಸಿದ್ದಾಾರೆ.
ಹಿರೇರಾಯಕುಂಪಿಯಲ್ಲಿ ಸುಮಾರು 400 ಮನೆಗಳಿದ್ದು 1500 ಜನಸಂಖ್ಯೆೆಯಿದೆ. ಅಗಸಿ ರಸ್ತೆೆ ಊರಿನ ಸಂಪರ್ಕ ಕೊಂಡಿಯಾಗಿದ್ದು ಬಹುತೇಕರು ಇಲ್ಲೇ ಓಡಾಡುತ್ತಾಾರೆ. ಸೈಕಲ್, ಬೈಕ್ ಮೇಲೆ ಹೋಗುವಾಗ ವಿದ್ಯಾಾರ್ಥಿಗಳು, ಯುವಕರು ಬಿದ್ದು ಗಾಯ ಮಾಡಿಕೊಂಡಿದ್ದಾಾರೆ. ಇನ್ನಾಾದರೂ ಅಧಿಕಾರಿಗಳು ಎಚ್ಚೆೆತ್ತುಕೊಂಡು ಸಮಸ್ಯೆೆಗೆ ಪರಿಹಾರ ಕಲ್ಪಿಿಸಬೇಕಿದೆ.
ಶಾಸಕಿ ಕರೆಮ್ಮ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ನೀಡದ ಅಧಿಕಾರಿಗಳು! ಸಮಸ್ಯೆಯಲ್ಲಿ ನರಳುತ್ತಿದ್ದಾರೆ ಹಿರೇರಾಯಕುಂಪಿ ಗ್ರಾಮಸ್ಥರು

