ಸುದ್ದಿಮೂಲ ವಾರ್ತೆ ಬೆಂಗಳೂರು, ನ.19:
ಕಬ್ಬು ಬೆಳೆಗಾರರ ಬೇಡಿಕೆ ಹಿನ್ನೆೆಲೆಯಲ್ಲಿ ತಾವು ದೆಹಲಿಗೆ ಹೋಗಿ ಮನವಿ ಸಲ್ಲಿಸಿದ ಮೇಲೆ ಸಕ್ಕರೆ ಬೆಲೆಯನ್ನು ಕೇಂದ್ರ ಸರ್ಕಾರ ಹೆಚ್ಚಳ ಮಾಡಿದೆ ಎಂದು ಮುಖ್ಯಮಂತ್ರಿಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ಕೆಜಿ ಸಕ್ಕರೆಗೆ 41 ರೂಪಾಯಿಗೆ ದರ ಹೆಚ್ಚಿಿಸುವಂತೆ ತಾವು ಮನವಿ ಸಲ್ಲಿಸಿದ್ದು, ಕೇಂದ್ರ ಸರ್ಕಾರ 40ರೂ.ಗೆ ಹೆಚ್ಚಳ ಮಾಡಿದೆ ಎಂದರು.
ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಹ್ಲಾಾದ್ ಜೋಶಿ ಹೇಳಿಕೆ ಪ್ರಕಾರ ದರ ಹೆಚ್ಚಳವಾಗಿದೆ. ಸುಮಾರು ಏಳೆಂಟು ವರ್ಷಗಳಿಂದ ಸಕ್ಕರೆಯ ಬೆಲೆ ಪರಿಷ್ಕರಣೆಯಾಗಿಲ್ಲ. ಪ್ರತಿ ಕೆ.ಜಿ.ಗೆ 31 ರೂಪಾಯಿಗಳಿವೆ. ಅದನ್ನು 41 ರೂಪಾಯಿಗೆ ಹೆಚ್ಚಿಿಸುವಂತೆ ಪ್ರಧಾನಮಂತ್ರಿಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮನವಿ ಮಾಡಲಾಗಿತ್ತು ಎಂದು ಸ್ಪಷ್ಟಪಡಿಸಿದರು.
ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿ, ದರ ನಿಗದಿ ಮಾಡುವವರು, ಸಕ್ಕರೆ ಮೊಲಾಸಸ್ ದರ ನಿಗದಿ ಮಾಡುವ ನಿರ್ಧಾರ ಕೇಂದ್ರದವರಿಗೆ ಇದೆ. ಪ್ರಲ್ಹಾಾದ್ ಜೋಶಿ ಅವರಿಗೂ ಕಬ್ಬು ಬೆಳೆಗಾರರ ಹೋರಾಟದ ಬಿಸಿಯ ಬಿಸಿಯ ಅರಿವಿದೆ. ಸಕ್ಕರೆ ಕಾರ್ಖಾನೆ ಮಾಲೀಕರು ಗಲಾಟೆ ಮಾಡಿದ್ದಾರೆ. ದರ ಹೆಚ್ಚಳ ಮಾಡಿ ಹತ್ತು ವರ್ಷವಾಗಿದೆ ಅಂತ ಗಲಾಟೆ ಮಾಡಿದ್ದಾರೆ. ಅದನ್ನ ಪ್ರಧಾನಿಗೆ ಮನವಿ ಮಾಡಿದ್ದೇವೆ. ರೈತರಿಗೂ ಒಳ್ಳೆೆಯದಾಗಬೇಕು, ಸಕ್ಕರೆ ಕಾರ್ಖಾನೆ ಮಾಲೀಕರಿಗೂ ಒಳ್ಳೆೆಯದಾಗಬೇಕು. ರೈತರು ಇದ್ದರೆ ್ಯಾಕ್ಟರಿ, ್ಯಾಕ್ಟರಿ ಇದ್ದರೆ ರೈತರು. ಉದ್ಯಮ ಕೂಡ ನಡೆಯಬೇಕು. ದರ ಹೆಚ್ಚಳದ ತೀರ್ಮಾನ ಮಾಡಿರುವುದು ಒಳ್ಳೆೆಯದು ಎಂದು ಹೇಳಿದರು.

