ಸುದ್ದಿಮೂಲ ವಾರ್ತೆ
ಆನೇಕಲ್,ಜೂ.26 : ಕಳ್ಳತನದಲ್ಲಿ ಭಾಗಿಯಾಗಿದ್ದ ಆರೋಪಿಯೊಬ್ಬ ಪೊಲೀಸ್ ಬಂಧನದಲ್ಲಿರುವಾಗಲೇ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ಕಾಳು ಮುರಿದುಕೊಂಡಿರುವ ಘಟನೆ ಆನೇಕಲ್ ನಲ್ಲಿ ನಡೆದಿದೆ.
ಒಂಟಿ ಮನೆಗಳನ್ನು ಟಾರ್ಗೆಟ್ ಮಾಡಿ ಮನೆಗೆ ಕನ್ನ ಹಾಕುತ್ತಿದ್ದ ಚೇತನ್ ಅಲಿಯಾಸ್ ವಾಜಿ ಎಂಬುವನನ್ನು ಪೊಲೀಸರು ಬಂಧಿಸಿ ಮೆಡಿಕಲ್ ಟೆಸ್ಟ್ ಮಾಡಿಸಲು ಹೋದ ಸಂದರ್ಭದಲ್ಲಿ, ಆತ ಆಸ್ಪತ್ರೆಯ ಮೊದಲನೇ ಮಹಡಿಯಿಂದ ಜಿಗಿದು ಪರಾರಿಯಾಗಲು ಯತ್ನಿಸಿದ. ಆದರೆ, ಜಿಗಿದ ವೇಳೆ, ಕಾಲು ಮುರಿದುಕೊಂಡು ಆಸ್ಪತ್ರೆ ಸೇರಿದಾನೆ.
ಆನೇಕಲ್ ಅರವಂಟಿಗಪುರ ಗ್ರಾಮ ನಿವಾಸಿಯಾಗಿರುವ ಚೇತನ್ ಮನೆಗಳ್ಳತನಗಳಲ್ಲಿ ಭಾಗಿಯಾಗಿದ್ದ. ನ್ಯಾಯಾಲಯದ ಆದೇಶದಂತೆ ಮೆಡಿಕಲ್ ಟೆಸ್ಟ್ ಮಾಡಿಸಲು ಕರೆತಂದಿದ್ದಾಗ ಈ ಘಟನೆ ನಡೆದಿದೆ.
ಕಳೆದ ಆರು ತಿಂಗಳ ಹಿಂದೆ ಬಂಧನ ಮಾಡಲು ಹೋದಾಗ ಮನೆಯ ಕಾಂಪೌಂಡು ಹಾರಿ ಎಸ್ಕೇಪ್ ಆಗಿದ್ದ ಎನ್ನಲಾಗಿದೆ.
ಆರೋಪಿಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಆರೋಪಿ ವಿರುದ್ಧ ಆನೇಕಲ್ ಅತ್ತಿಬೆಲೆ ಸರ್ಜಾಪುರ ಕೋಣನಕುಂಟೆ ಸೇರಿದಂತೆ ಅನೇಕ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ .