ಸುದ್ದಿಮೂಲ ವಾರ್ತೆ ಬಳ್ಳಾರಿ, ಡಿ.13
ನಮ್ಮ ಶಾಲೆಯ ವಿದ್ಯಾಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ತೋರಿದ ಆತ್ಮವಿಶ್ವಾಾಸ ಹಾಗೂ ಸೃಜನಶೀಲತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಶ್ರೀ ವಾಸವಿ ಎಜ್ಯುಕೇಷನ್ ಟ್ರಸ್ಟ್ ನ ಕಾರ್ಯದರ್ಶಿ ಪಿ.ಎನ್. ಸುರೇಶ್ ಅವರು ತಿಳಿಸಿದ್ದಾಾರೆ.
ಇಂದಿರಾನಗರ ಕ್ಲಸ್ಟರ್ ಮಟ್ಟದಲ್ಲಿ ನಡೆದ ಪ್ರತಿಭಾ ಕಾರಂಜಿ 2025-26 ರಲ್ಲಿ ಶ್ರೀ ವಾಸವಿ ವಿದ್ಯಾಾಲಯದ ವಿದ್ಯಾಾರ್ಥಿಗಳು ಸಾಂಸ್ಕೃತಿಕ, ಸಾಹಿತ್ಯ, ಕಲಾ, ಪ್ರಬಂಧ, ಸಂಸ್ಕೃತ ಮತ್ತು ಅರಬಿಕ್ ಧಾರ್ಮಿಕ ಪಠಣ, ಚಿತ್ರಕಲೆ, ಕಂಠಪಾಠ, ಆಶುಭಾಷಣ, ಕ್ಲೆೆ ಮಾಡಲ್, ರಂಗೋಲಿ, ಭರತನಾಟ್ಯ, ಕವ್ವಾಾಲಿ ಮತ್ತು ಹಲವು ವಿಭಾಗಗಳಲ್ಲಿ ವಿದ್ಯಾಾರ್ಥಿಗಳು 30 ಪ್ರಶಸ್ತಿಿಗಳನ್ನು ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿರುವುದನ್ನು ಶ್ಲಾಾಘಿಸಿ ಅವರು ಮಾತನಾಡಿದರು.
ವಿದ್ಯಾಾರ್ಥಿಗಳ ಈ ಸಾಧನೆ ನಮ್ಮ ಸಂಸ್ಥೆೆಯ ಮೌಲ್ಯಗಳು ಮತ್ತು ವಿದ್ಯಾಾರ್ಥಿ ಕೇಂದ್ರಿಿತ ಶಿಕ್ಷಣದ ಲವಾಗಿದೆ. ಅಲ್ಲದೇ, ನಮ್ಮ ಸಂಸ್ಥೆೆಯಲ್ಲಿ ಕೇವಲ ಶಿಕ್ಷಣ ಬೋಧಿಸುವುದಿಲ್ಲ, ಬದಲಾಗಿ ವ್ಯಕ್ತಿಿತ್ವ ರೂಪುಗೊಳ್ಳುವಲ್ಲಿ ಅಗತ್ಯವಿರುವ ವಿವಿಧ ಕ್ಷೇತ್ರಗಳಲ್ಲಿ ವಿದ್ಯಾಾರ್ಥಿಗಳು ಪಾಲ್ಗೊೊಳ್ಳುವಂತೆ ಪ್ರೋೋತ್ಸಾಾಹಿಸಲಾಗುತ್ತದೆ ಎನ್ನುವುದು ಸಾಬೀತಾಗುತ್ತಿಿದೆ ಎಂದರು.
ಶಾಲಾ ಮುಖ್ಯಗುರುಗಳಾದ ವೀರೇಶ್. ಯು ಅವರು, ವಿದ್ಯಾಾರ್ಥಿಗಳ ಪ್ರಸ್ತುತ ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊೊಳ್ಳುವಿಕೆ ಮತ್ತು ಸಾಧನೆಯು ಅವರ ಭವಿಷ್ಯ ರೂಪಿಸುವಲ್ಲಿ ಪ್ರೋೋತ್ಸಾಾಹಿಸುತ್ತದೆ ಎಂದರು.

