ಸುದ್ದಿಮೂಲ ವಾರ್ತೆ ಬೆಂಗಳೂರು, ನ.28:
ನಕಲಿ ಮತ್ತು ಸುಳ್ಳು ದಾಖಲೆ ಸೃಷ್ಟಿಿಸಿ ಅರಣ್ಯ ಭೂಮಿ ಕಬಳಿಸಲು ಪ್ರಯತ್ನಿಿಸುವವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಕಾನೂನು ಕ್ರಮ ಜರುಗಿಸಿ, ಶಿಕ್ಷೆ ಆಗುವಂತೆ ನೋಡಿಕೊಳ್ಳುವಂತೆ ಅರಣ್ಯ, ಜೀವಿಶಾಸ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆೆ ಉನ್ನತಾಧಿಕಾರಿಗಳಿಗೆ ಸ್ಪಷ್ಟ ಸೂಚಿಸಿದ್ದಾರೆ.
ಬೆಲೆಬಾಳುವ ಅರಣ್ಯ ಭೂಮಿ ಕಬಳಿಕೆ ಪ್ರಯತ್ನಗಳು ಹೆಚ್ಚುತ್ತಿಿರುವ ಹಿನ್ನೆೆಲೆಯಲ್ಲಿ ತಮ್ಮ ಕಚೇರಿಯಲ್ಲಿಂದು ಹಿರಿಯ ಅರಣ್ಯಾಾಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಬೆಂಗಳೂರು ಕೆಂಗೇರಿ ಬಳಿಯ ಬಿ.ಎಂ. ಕಾವಲು ಕಾಯ್ದಿಿಟ್ಟ ಅರಣ್ಯ ವ್ಯಾಾಪ್ತಿಿಯ ಸುಮಾರು 25 ಸಾವಿರ ಕೋಟಿ ರೂ. ಬೆಲೆಬಾಳುವ ಸುಮಾರು 482 ಎಕರೆ ಮೀಸಲು ಅರಣ್ಯ ಭೂಮಿ ರಕ್ಷಣೆಗೆ ಮೇಲ್ಮನವಿ ಸಲ್ಲಿಸುವಂತೆ ಸೂಚಿಸಿದರು.
ಎಂ.ಬಿ. ನೇಮಣ್ಣ ಗೌಡ ಎನ್ನುವವರು 2025ರ ಆಗಸ್ಟ್ 13ರಂದು ಹೈಕೋರ್ಟ್ಗೆ ಅರ್ಜಿ ಹಾಕಿದ್ದು, 17 ದಿನಗಳಲ್ಲಿ ಅಂದರೆ ಆಗಸ್ಟ್ 30ರಂದು ಉಚ್ಛ ನ್ಯಾಾಯಾಲಯ ಆದೇಶ ನೀಡಿರುವ ಬಗ್ಗೆೆ ಅಚ್ಚರಿ ವ್ಯಕ್ತಪಡಿಸಿದ ಅವರು, ಈ ತೀರ್ಪನ್ನು ಪ್ರಶ್ನಿಿಸಿ ಕೂಡಲೇ ಮೇಲ್ಮನವಿ ಸಲ್ಲಿಸಬೇಕು ಎಂದು ಸೂಚಿಸಿದರು.
ಹಾಸನ ವಿಭಾಗದ ಇನಾಂ ರದ್ದು ಕುರಿತ ನ್ಯಾಾಯಾಲಯದ ವಿಶೇಷ ಜಿಲ್ಲಾಧಿಕಾರಿಯವರು ಬೆಂಗಳೂರು ಬಿ.ಎಂ.ಕಾವಲು ಅರಣ್ಯ ಭೂಮಿಯನ್ನು 1974ರಲ್ಲಿ ತಮಗೆ 532 ಎಕರೆ ಮಂಜೂರು ಮಾಡಿರುತ್ತಾಾರೆಂದು ದಾಖಲೆ ಸಲ್ಲಿಸಿ ಆದೇಶ ಪಡೆದಿದ್ದಾರೆ. ಆದರೆ ಈ ಭೂಮಿ 1933ರಲ್ಲಿ ಸೆಕ್ಷನ್ 4 ಆಗಿ, 1935ರಲ್ಲಿ ಕಾಯ್ಡಿಿಟ್ಟ ಅರಣ್ಯ ಎಂದು ಅಧಿಸೂಚನೆಯಾಗಿದೆ. ಬೆಂಗಳೂರಿನ ಅಧಿಸೂಚಿತ ಅರಣ್ಯ ಭೂಮಿಯನ್ನು ಹಾಸನ ವಿಶೇಷ ಜಿಲ್ಲಾಧಿಕಾರಿ ಹೇಗೆ ಮಂಜೂರು ಮಾಡುತ್ತಾಾರೆ. ಮಿಗಿಲಾಗಿ 532 ಎಕರೆಯನ್ನು ಮಂಜೂರು ಮಾಡಲು ಕಾನೂನಿನಲ್ಲಿ ಅವಕಾಶ ಇದೆಯೇ, ಭೂ ಪರಿಮಿತಿ ಕಾಯ್ದೆೆ ಅನ್ವಯಿಸುವುದಿಲ್ಲವೇ ಈ ಎಲ್ಲ ಅಂಶವನ್ನು ನ್ಯಾಾಯಾಲಯದ ಗಮನಕ್ಕೆೆ ತಂದು ಸಮರ್ಥವಾಗಿ ವಾದ ಮಂಡಿಸುವಂತೆ ತಿಳಿಸಿದರು.
ಸರ್ಕಾರದ ಅಭಿಯೋಜಕರು ಕೊನೆ ಕ್ಷಣದವರೆಗೂ ಈ ಪ್ರಕರಣದಲ್ಲಿ ಮಾಹಿತಿ ನೀಡದೆ ಇರುವ ಬಗ್ಗೆೆಯೂ ಅಸಮಾಧಾನ ವ್ಯಕ್ತಪಡಿಸಿದ ಅವರು, ಕೆಲವು ಅರ್ಹ ಪ್ರಕರಣದಲ್ಲೂ ಮೇಲ್ಮನವಿಗೆ ಸೂಕ್ತ ಪ್ರಕರಣ ಅಲ್ಲ ಎಂದು ಸರ್ಕಾರಿ ವಕೀಲರು ಅಭಿಪ್ರಾಾಯ ವ್ಯಕ್ತಪಡಿಸುತ್ತಿಿರುವ ಬಗ್ಗೆೆಯೂ ತೀವ್ರ ಬೇಸರ ವ್ಯಕ್ತಪಡಿಸಿದರು.
ಅರಣ್ಯ ಭೂಮಿ ಕಬಳಿಕೆ ಮತ್ತು ಒತ್ತುವರಿ ಪ್ರಕರಣಗಳಲ್ಲಿ, ಸಮರ್ಥ ವಕೀಲರನ್ನು ನೇಮಕ ಮಾಡಲು ಮತ್ತು ಪರಿಣಾಮಕಾರಿಯಾಗಿ ವಾದ ಮಂಡಿಸುವಂತೆ ಸರ್ಕಾರಿ ಅಭಿಯೋಜಕರುಗಳಿಗೆ ಮತ್ತು ಹೆಚ್ಚುವರಿ ಅಡ್ವೊೊಕೇಟ್ ಜನರಲ್ ಅವರಿಗೆ ಸೂಚಿಸಲು ಸಭೆಯಲ್ಲಿ ಹಾಜರಿದ್ದ ಅಡ್ವೊೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿಿ ಅವರಿಗೆ ತಿಳಿಸಿದರು.
ಅರಣ್ಯ ಒತ್ತುವರಿ ಪ್ರಕರಣ ಹೆಚ್ಚಿಿರುವ 6-7 ಜಿಲ್ಲೆಗಳಲ್ಲಿ ಇಲಾಖೆಯಿಂದಲೇ ಪ್ರತ್ಯೇಕವಾಗಿ ವಕೀಲರನ್ನು ನೇಮಕ ಮಾಡಿಕೊಂಡು, ಅವರೊಂದಿಗೆ ವಾರಕ್ಕೊೊಮ್ಮೆೆ ಸಭೆ ನಡೆಸಿ, ಪ್ರಗತಿ ತಿಳಿಯುವುದು ಅಗತ್ಯವಾಗಿದೆ. ಹೀಗಾಗಿ ವಕೀಲರ ನೇಮಕಕ್ಕೆೆ ಪ್ರಸ್ತಾಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಈ ಪ್ರಕರಣದಲ್ಲಿ ಅರಣ್ಯ ಭೂಮಿ ಕಬಳಿಸಲು ದೊಡ್ಡ ಹುನ್ನಾಾರವೇ ನಡೆದಿರುವುದು ಮೇಲ್ನೋೋಟಕ್ಕೆೆ ಗೋಚರಿಸುತ್ತಿಿದೆ. ಈ ಹಿಂದೆ ಇದೇ ವ್ಯಕ್ತಿಿ ಸೇರಿದಂತೆ ಕೆಲವರು ಸಲ್ಲಿಸಿದ್ದ ಮೇಲ್ಮನವಿ ಸಂಬಂಧ ವಿಚಾರಣೆ ನಡೆಸಿದ್ದ ಮೂಡಿಗೆರೆಯ ಉಪ ವಿಭಾಗಾಧಿಕಾರಿಗಳು ಸುಳ್ಳು ದಾಖಲೆ ಸೃಷ್ಟಿಿಸಿ ಸರ್ಕಾರಿ ಜಮೀನು ಕಬಳಿಸುವವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗೆ ಸೂಚಿಸಿದ್ದಾರೆ. ಆದರೂ ವಿಳಂಬ ಮಾಡಿರುವ ಅರಣ್ಯಾಾಧಿಕಾರಿಗಳ ವಿರುದ್ಧವೂ ಕ್ರಮಕ್ಕೆೆ ಸೂಚಿಸಿದರು. ಅರಣ್ಯ ಭೂಮಿ ಕಬಳಿಸುವವರ ಮತ್ತು ಸಹಕಾರ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಈಶ್ವರ ಖಂಡ್ರೆೆ ಸೂಚಿಸಿದರು.
ಸಭೆಯಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆ ಮುಖ್ಯಸ್ಥರಾದ ಮೀನಾಕ್ಷಿ ನೇಗಿ ಮತ್ತಿಿತರರು ಪಾಲ್ಗೊೊಂಡಿದ್ದರು.

