ಸುದ್ದಿಮೂಲ ವಾರ್ತೆ ಬೆಂಗಳೂರು, ಜ.27:
ಸದನದಲ್ಲಿ ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರು ನೀಡಿದ ಹೇಳಿಕೆ ವಿರೋಧಿಸಿ ಕಾಂಗ್ರೆೆಸ್ ಕಾರ್ಯಕರ್ತರು ಪೋಸ್ಟರ್ ಅಂಟಿಸಿರುವ ಘಟನೆ ವಿಧಾನಸಭೆಯಲ್ಲಿ ಮಂಗಳವಾರ ಚರ್ಚೆಗೆ ಗ್ರಾಾಸವಾಯಿತು.
ಶೂನ್ಯವೇಳೆಯಲ್ಲಿ ಕಾಂಗ್ರೆೆಸ್ ಪೋಸ್ಟರ್ ಅಭಿಯಾನ ಪ್ರಸ್ತಾಾಪಿಸಿದ ಸುರೇಶ್ ಕುಮಾರ್, ನಾನು ಮೊನ್ನೆೆ ವಿಧಾನಸಭೆಯಲ್ಲಿ ಏಳು ತಿಂಗಳಿಗೆ ಹುಟ್ಟಿಿರುವ ಸಂಬಂಧ ಮಾತನಾಡಿದ್ದೆ. ಅದನ್ನು ವಿರೋಧಿಸಿ ಮನೆ ಗೋಡೆಗೆ ಪೋಸ್ಟರ್ ಹಾಕಿದ್ದಾರೆ. ಕೆಲವು ಕಾರ್ಯಕರ್ತರು ಬಂದು ಪೋಸ್ಟರ್ ಹಾಕಿದ್ದಾರೆ. ಇದರಿಂದ ನನ್ನ ಕುಟುಂಬಕ್ಕೆೆ ಆಂತಕ ಆಗಿದೆ. ಈ ಪೋಸ್ಟರ್ ಅಭಿಯಾನ ನಿಲ್ಲಿಸಿ. ಇಲ್ಲಿ ಯಾರಿಗೆ ರಕ್ಷಣೆ ಇದೆ. ಅಂದು ವಿಧಾನಸಭೆಯಲ್ಲಿ ಮಾತನಾಡಿದ್ದನ್ನು ಸಭಾಧ್ಯಕ್ಷರು ಕಡತದಿಂದ ತೆಗೆದು ಹಾಕಿದ್ದಾರೆ. ಅದರೂ ಈ ರೀತಿ ಮಾಡಿದ್ದು ಸರಿಯಲ್ಲ. ಗಾದೆ ಮಾತನ್ನು ಹೇಳಿರೋದನ್ನು ಹೊರಗೆ ತಂದು ಗಲಾಟೆ ಮಾಡಿದ್ದಾರೆ. ಡಿಪಿಅರ್ನಿಂದ ಒಂದು ಪಟ್ಟಿಿ ಕೊಡಿ, ಯಾವುದು ಹೇಳಬೇಕು, ಯಾವುದು ಬೇಡ ಅಂತ ಎಂದು ಬೇಸರ ವ್ಯಕ್ತಪಡಿಸಿದರು.
ಇದಕ್ಕೆೆ ಪ್ರತಿಕ್ರಿಿಯಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಪೋಸ್ಟರ್ ಅಂಟಿಸಿದವರ ಮೇಲೆ ಖಡಕ್ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು.
ಈ ವೇಳೆ ಮಧ್ಯಪ್ರವೇಶಿಸಿದ ಪ್ರತಿಪಕ್ಷ ನಾಯಕ ಆರ್.ಅಶೋಕ್, ಸುರೇಶ್ ಕುಮಾರ್ ಮಾತು ವಾಪಸ್ ಪಡೆದಿದ್ದಾರೆ. ಕಡತದಿಂದಲೂ ಅದನ್ನು ತೆಗೆದು ಹಾಕಿದ್ದಾರೆ. ಮನೆ ಹತ್ರ ಹೋಗಿ ಈ ರೀತಿ ಮಾಡಿದ್ರೆೆ ಹೇಗೆ. ಪೊಲೀಸ್ ಠಾಣೆಯಲ್ಲಿ ದೂರು ಹೇಗೆ ಕೊಟ್ರು. ವಿಧಾನಸೌಧದಲ್ಲಿ ದೂರು ಕೊಡ್ತಾಾರೆ. ಈಗ ನಿಮ್ಮ ಸರ್ಕಾರ ಇದೆ. ಮುಂದೆ ನಮ್ಮ ಸರ್ಕಾರ ಬರುತ್ತದೆ. ಆಗಲೂ ಖಡಕ್ ಆಗಿ ನೀವು ಕೇಳಬೇಕು. ಅಂತಹ ಕ್ರಮ ಆಗಲಿ. ಅದು ಆಡಳಿತ, ವಿಪಕ್ಷ ಯಾರು, ಯಾರ ಮನೆಗೆ ಅಂಟಿಸಿದ್ರೂ ಕ್ರಮ ಆಗಬೇಕು. ಈ ಬಗ್ಗೆೆ ನಿಮ್ಮಿಿಂದ ಖಡಕ್ ಆಗಿ ಉತ್ತರ ಬೇಕು. ಪೋರ್ಸ್ಟ ಅಂಟಿಸಿದವರ ಮೇಲೆ ಖಡಕ್ ಕ್ರಮ ಆಗಬೇಕು ಎಂದು ಒತ್ತಾಾಯಿಸಿದರು.
ಇದಕ್ಕೆೆ ಉತ್ತರ ನೀಡಿದ ಗೃಹ ಸಚಿವ ಪರಮೇಶ್ವರ್, ನಾನು ಖಡಕ್ ಆಗಿಯೇ ಉತ್ತರ ಕೊಡ್ತೇನೆ. ಇನ್ಮೇಲೆ ಆ ರೀತಿ ಆಗದಂತೆ ನೋಡಿಕೊಳ್ತೇನೆ. ಯಾರು ಪೋಸ್ಟರ್ ಅಂಟಿಸಿದರು ಎಂಬ ಬಗ್ಗೆೆ ಖುದ್ದಾಗಿ ನಾನೇ ವಿಚಾರಿಸುತ್ತೇನೆ. ಠಾಣೆಯಲ್ಲಿ ದೂರು ಕೊಡುವ ಹಕ್ಕಿಿದೆ. ಕೊಟ್ಟಿಿದ್ದಾರೆ. ಅದರ ಬಗ್ಗೆೆಯೂ ನಾನು ಪರಿಶೀಲಿಸುತ್ತೇನೆ. ಸುರೇಶ್ ಕುಮಾರ್ ಅವರಿಗೆ, ಅವರ ಮನೆಗೆ ಭದ್ರತೆ ಕೊಡೋದು ನನ್ನ ಜವಾಬ್ದಾಾರಿ. ಆ ರೀತಿ ಮಾಡಿದರೆ ಒಳ್ಳೆೆ ಸಂಪ್ರದಾಯ ಆಗಲ್ಲ. ಇದನ್ನ ನಾನು ಖಂಡಿಸ್ತೇನೆ. ಏನು ಕ್ರಮ ತೆಗೆದುಕೊಳ್ಳಬೇಕು, ತೆಗೆದುಕೊಳುತ್ತೇನೆ ಎಂದು ಭರವಸೆ ನೀಡಿದರು.
ಈ ವೇಳೆ ಮಧ್ಯಪ್ರವೇಶ ಮಾಡಿದ ಸ್ಪೀಕರ್ ಯು.ಟಿ.ಖಾದರ್, ಸದನದಲ್ಲಿ ನಾವು ಚರ್ಚೆ ಮಾಡುತ್ತೇವೆ. ನಂತರ ಒಂದಾಗುತ್ತೇವೆ. ಇದು ನಮ್ಮ ಮನೆ ಇದ್ದಂತೆ, ನಾವೆಲ್ಲಾ ಒಂದೇ ಕುಟುಂಬ. ಆದ್ರೆೆ ಈ ರೀತಿ ಪೋಸ್ಟರ್ ಅಂಟಿಸೋದು ಸರಿಯಲ್ಲ. ಇದನ್ನ ಹಕ್ಕುಚ್ಯುತಿ ಸಮಿತಿಗೆ ನೀಡುವುದಾಗಿ ತಿಳಿಸಿದರು.
ಶಾಸಕ ಸುರೇಶ್ ಕುಮಾರ್ ಮನೆ ಗೋಡೆಗೆ ಪೋಸ್ಟರ್ ಅಂಟಿಸಿದವರ ವಿರುದ್ಧ ಕ್ರಮ

