ಪ್ರಶಾಂತ್ ಕುರ್ಮಾ ಎಂ.ಎನ್. ಬೆಳಗಾವಿ, ಡಿ.19
ಕರ್ನಾಟಕದ ಉತ್ತರ ಭಾಗಗಳಾದ ಕಲ್ಯಾಾಣ ಕರ್ನಾಟಕ , ಕಿತ್ತೂರು ಕರ್ನಾಟಕ ಹಾಗೂ ಉತ್ತರ ಕರ್ನಾಟಕಗಳ ಅಭಿವೃದ್ಧಿಿ, ಇಲ್ಲಿನ ಜ್ವಲಂತ ಸಮಸ್ಯೆೆಗಳ ಪರಿಹಾರಕ್ಕೆೆ ಕೈಗೊಳ್ಳಬೇಕಾದ ಕ್ರಮದ ಜೊತೆಗೆ ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿಯೂ ಹಿಂದುಳಿದಿರುವಿಕೆಯ ಕಾರಣಗಳನ್ನು ವಿಸ್ತೃತವಾಗಿ ಚರ್ಚಿಸುವ ಸಲುವಾಗಿ ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಕಳೆದ ಹತ್ತು ದಿನಗಳಿಂದ ನಡೆಯುತ್ತಿಿದ್ದ ವಿಧಾನ ಮಂಡಲದ ಚಳಿಗಾಲದ ಅಧಿವೇಶನಕ್ಕೆೆ ಶುಕ್ರವಾರ ರಾತ್ರಿಿ ತೆರೆ ಬಿದ್ದಿದೆ.
ಉತ್ತರ ಕರ್ನಾಟಕದ ವಿಚಾರ ಇದೇ ಮೊಟ್ಟ ಮೊದಲ ಬಾರಿಗೆ ಅಧಿವೇಶನದ ಎರಡನೇ ದಿನದಿಂದಲೇ ಚರ್ಚೆಗೆ ತೆಗೆದುಕೊಂಡಿದ್ದು 17 ಗಂಟೆಗೂ ಹೆಚ್ಚು ಕಾಲ ನಡೆದ ಚರ್ಚೆಗೆ ಶುಕ್ರವಾರ ಮುಖ್ಯಮಂತ್ರಿಿ ಸಿದ್ದರಾಮಯ್ಯ ಉತ್ತರಿಸುವ ಮೂಲಕ ತೆರೆ ಎಳೆದರು.
ಸುದೀರ್ಘ ಉತ್ತರ ನೀಡಿದ ಅವರು, 2002 ರಲ್ಲಿ ವರದಿ ನೀಡಿದ್ದ ಆರ್ಥಿಕ ತಜ್ಞ ಪ್ರೊೊ.ನಂಜುಂಡಸ್ವಾಾಮಿ ವರದಿಯಲ್ಲಿ ಉತ್ತರ ಕರ್ನಾಟಕ ವ್ಯಾಾಪ್ತಿಿಯಲ್ಲಿ ಕರ್ನಾಟಕದ ಉತ್ತರ ಭಾಗದ 27 ತಾಲೂಕುಗಳನ್ನು ಹಿಂದುಳಿದ ತಾಲ್ಲೂಕುಗಳೆಂದು ಗುರುತಿಸಲಾಗಿದ್ದು ಅವರ ಶಿಾರಸ್ಸಿಿನಂತೆ 37 ಸಾವಿರ ಕೋಟಿಗೂ ಹೆಚ್ಚಿಿನ ಖರ್ಚು ಮಾಡಿದ್ದರೂ ಈ ಭಾಗ ಇನ್ನೂ ಅಭಿವೃದ್ಧಿಿಯ ಪಥಕ್ಕೆೆ ಬಂದಿಲ್ಲ. ಇನ್ನೂ ಈ ಭಾಗದಲ್ಲಿ ಪ್ರಾಾದೇಶಿಕ ಅಸಮತೋಲನವಿದೆ. ಶೈಕ್ಷಣಿಕವಾಗಿ, ಆರ್ಥಿಕವಾಗಿ ಇನ್ನೂ ಹಿಂದುಳಿದೇ ಇರುವುದಕ್ಕೆೆ ಸೂಕ್ತ ಕಾರಣ ಕಂಡುಕೊಳ್ಳಬೇಕಾಗಿದೆ. ಈ ಭಾಗದ ಅಭಿವೃದ್ಧಿಿಯಲ್ಲಿ ಕೇಂದ್ರ ಸರ್ಕಾರದ ಜವಾಬ್ಧಾಾರಿ ಕೂಡ ಇದ್ದರೂ ಅದು ಉತ್ತರ ಕರ್ನಾಟಕ ಭಾಗದ ಯಾವ ಯೋಜನೆಗಳಿಗೂ ಅಗತ್ಯ ಸಹಕಾರ ನೀಡುತ್ತಿಿಲ್ಲ ಎಂದು ದೂರಿದರು.
ನಮ್ಮ ಸರ್ಕಾರ ಪ್ರಾಾದೇಶಿಕ ಅಸಮತೋಲನ ನಿವಾರಣೆಗೆ ಬದ್ಧವಾಗಿದ್ದು ಕೇಂದ್ರದಿಂದ ಸೂಕ್ತ ಸ್ಪಂದನೆ ಪಡೆಯಲು ಮತ್ತು ನಾವು ಸದನದಲ್ಲಿ ಗುರುವಾರ ಅನುಮೋದನೆ ಪಡೆದಿರುವ ಈ ಭಾಗದ ಸರ್ವತೋಮುಖ ಅಭಿವೃದ್ಧಿಿಗಾಗಿ ಇರುವ ಆರು ನಿರ್ಣಯಗಳ ಕುರಿತು ಮನವರಿಕೆ ಮಾಡಲು ಕೇಂದ್ರ ಸರ್ಕಾರಕ್ಕೆೆ ಸರ್ವ ಪಕ್ಷಗಳ ನಿಯೋಗ ಕರೆದೊಯ್ಯಲು ಸಿದ್ಧವಿರುವುದಾಗಿ ಮುಖ್ಯಮಂತ್ರಿಿ ಸಿದ್ದರಾಮಯ್ಯ ಘೋಷಿಸಿದರು.
ಉತ್ತರ ಕರ್ನಾಟಕ ಯಾಕೆ ಇನ್ನೂ ಹಿಂದುಳಿದಿದೆ. ತಲಾವಾರು ಆದಾಯದಲ್ಲಿ ಕಲಬುರಗಿ ಏಕೆ ರಾಜ್ಯದಲ್ಲೇ ಕೊನೆಯ ಸ್ಥಾಾನದಲ್ಲಿದೆ. ಅನುದಾನಗಳನ್ನು ಒದಗಿಸಿದರೂ ಅಭಿವೃದ್ಧಿಿಯಾಗದ ಕಾರಣಗಳೇನು? ಚಾರಿತ್ರಿಿಕ ಸಂಗತಿಗಳೇನಾದರೂ ಇವೆಯೆ? ಹೇಗೆ ಅಭಿವೃದ್ಧಿಿ ಸಾಧಿಸುವುದು? ಅನುದಾನಗಳಿಂದ ಮಾತ್ರವೇ ಅಭಿವೃದ್ಧಿಿ ಸಾಧ್ಯವಾಗುತ್ತದೆಯೆ? ಜನರ ಮನಸ್ಥಿಿತಿಯಲ್ಲಿ ಉಂಟು ಮಾಡಬೇಕಾದ ಬದಲಾವಣೆಗಳೇನು? ಇವೆಲ್ಲ ವಿಚಾರಗಳ ಕುರಿತು ಚರ್ಚಿಸಬೇಕಾಗಿದೆ ಎಂದು ಸುದೀರ್ಘ ಭಾಷಣ ಆರಂಭಿಸಿದ ಸಿಎಂ ತಮ್ಮ ಭಾಷಣದುದ್ದಕ್ಕೂ ಈ ಭಾಗದ ಸಮಸ್ಯೆೆಗಳು, ಸಮಸ್ಯೆೆಗೆ ಕಾರಣಗಳನ್ನು ವಿಶ್ಲೇಷಿಸುತ್ತಾಾ ರಾಜ್ಯದ ದಕ್ಷಿಣ ಭಾಗದೊಂದಿಗೆ ಹೋಲಿಕೆ ಮಾಡುತ್ತಾಾ ನಂಜುಡಪ್ಪ ವರದಿ ಶಿಾರಸ್ಸುಗಳನ್ನು ಜಾರಿ ಮಾಡಿದ್ದರೂ ಏಕೆ ಹಿಂದುಳಿದಿದೆ ಎಂಬುದರ ಕುರಿತು ಅಧ್ಯಯನ ನಡೆಸಿ ಈ ಭಾಗದ ಅಭಿವೃದ್ಧಿಿಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಶಿಾರಸ್ಸುಗಳನ್ನು ನೀಡಲು ಉತ್ತರ ಕರ್ನಾಟಕದವರೇ ಆದ ಹಿರಿಯ ಆರ್ಥಿಕ ತಜ್ಞ ಪ್ರೊೊ. ಗೋವಿಂದರಾವ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದ್ದು ಬಹುತೇಕ ಜನವರಿ ತಿಂಗಳ ಅಂತ್ಯದೊಳಗೆ ಈ ಸಮಿತಿಯು ವರದಿ ಸಲ್ಲಿಸುವ ನಿರೀಕ್ಷೆ ಇದೆ. ಈ ವರದಿಯನ್ನು ಆಧರಿಸಿ, ಯಾವ ಜಿಲ್ಲೆಗಳು, ತಾಲ್ಲೂಕುಗಳು, ಯಾವ ಕ್ಷೇತ್ರಗಳಲ್ಲಿ ಹಿಂದುಳಿದಿವೆ ಎಂಬುದನ್ನು ಪರಿಶೀಲಿಸಿ, ಅದಕ್ಕೆೆ ಅನುಗುಣವಾಗಿ ಅಭಿವೃದ್ದಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಪ್ರಮುಖವಾಗಿ ಪ್ರಾಾದೇಶಿಕ ಅಸಮತೋಲನ ಮತ್ತು ಅಸಮಾನತೆ ನಿವಾರಿಸುವುದು ನಮ್ಮ ಸರ್ಕಾರದ ಮುಖ್ಯ ಆಶಯವಾಗಿದೆ. ಶಿಕ್ಷಣ, ಆರೋಗ್ಯ, ಪೌಷ್ಠಿಿಕತೆ ಕ್ಷೇತ್ರಗಳಲ್ಲಿ ಉತ್ತರ ಕರ್ನಾಟಕ ಹಿಂದುಳಿದಿರುವುದು ನಿಜ. ಉತ್ತರ ಕರ್ನಾಟಕದಲ್ಲಿ ಶಿಕ್ಷಣ ಕ್ಷೇತ್ರ ಅಭಿವೃದ್ಧಿಿಯಾಗಿ, ಅಸಮತೋಲನೆ ನಿವಾರಣೆ ಆಗಬೇಕು, ಇದಕ್ಕಾಾಗಿಯೇ ಆರ್ಥಿಕ ತಜ್ಞೆ ಪ್ರೊೊ. ಛಾಯಾ ದೇವಣಗಾಂವಕರ್ನೇತೃತ್ವದಲ್ಲಿ ಶಿಕ್ಷಣ ಸಮಿತಿಯನ್ನು ರಚಿಸಿದ್ದು, ಡಿ. 16 ರಂದು ವರದಿ ಸಲ್ಲಿಸಿದ್ದಾರೆ. ಸಮಿತಿ ನೀಡಿರುವ ವರದಿಯಲ್ಲಿ ಶಿಾರಸು ಮಾಡಿರುವ ಅಂಶಗಳನ್ನು ನಾವು ಜಾರಿಗೊಳಿಸುತ್ತೇವೆ. ಇದರಿಂದ ಉತ್ತರ ಕರ್ನಾಟಕದ ಶಿಕ್ಷಣ ಕ್ಷೇತ್ರವೂ ಕೂಡ ಅಭಿವೃದ್ಧಿಿಗೊಂಡು, ಈ ಭಾಗದಲ್ಲಿಯೂ ಸಾಕ್ಷರತೆ ಪ್ರಮಾಣ ಸುಧಾರಣೆಯಾಗುವ ವಿಶ್ವಾಾಸವಿದೆ. ಕಲ್ಯಾಾಣ ಕರ್ನಾಟಕ ಪ್ರದೇಶದಲ್ಲಿ ಖಾಲಿ ಇರುವ ಹುದ್ದೆಗಳಲ್ಲಿ 80 ರಷ್ಟು ಹುದ್ದೆಗಳನ್ನು ಕೂಡಲೆ ಭರ್ತಿ ಮಾಡಿಕೊಳ್ಳಲು ಸೂಚನೆ ನೀಡಿದ್ದು, ಮಂಜೂರಾತಿ ನೀಡಿರುವ 900 ಕೆ.ಪಿ.ಎಸ್. ಶಾಲೆಗಳ ಪೈಕಿ 300 ಕೆಪಿಎಸ್ ಶಾಲೆಗಳನ್ನು ಕಲ್ಯಾಾಣ ಕರ್ನಾಟಕ ಪ್ರದೇಶಕ್ಕೇ ನೀಡಲಾಗಿದೆ ಎಂದರು.
ಉತ್ತರ ಕರ್ನಾಟಕ ಅಭಿವೃದ್ಧಿಿಗೆ ಸರ್ಕಾರದ ಕೊಡುಗೆ
ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಿಗೆ ಸರ್ಕಾರದ ಕೊಡುಗೆ ಏನು ಎಂದು ಪ್ರತಿಪಕ್ಷ ಸದಸ್ಯರು ಪ್ರಶ್ನಿಿಸಿದ್ದಾರೆ. ಆದರೆ ಅವರು ಯಾಕೆ ಹಿಂದುಳಿದಿದೆ ಎಂದು ಹೇಳಿಲ್ಲ. ನಾವು ಇದಕ್ಕೆೆ ಕಾರಣಗಳನ್ನು ಕಂಡುಕೊಂಡಿದ್ದೇವೆ. ಉತ್ತರ ಕರ್ನಾಟಕದ 10 ಜಿಲ್ಲೆಗಳ ಜನರ ತಲಾದಾಯ ಅದರಲ್ಲೂ ಕಲ್ಯಾಾಣ ಕರ್ನಾಟಕದ ಜನರ ತಲಾದಾಯ ಕಡಿಮೆ ಇರಲು ಕಾರಣಗಳೇನು? ಎಂದು ಹುಡುಕುತ್ತಾಾ ಹೋದರೆ ಡೈರಿ ಚಟುವಟಿಕೆಗಳು ಎಲ್ಲಿ ದುರ್ಬಲವಾಗಿವೆಯೋ ಅಲ್ಲಿಯೇ ತಲಾದಾಯವೂ ಕಡಿಮೆ ಇದೆ. ನೀವು ಸಲಹೆ ಕೊಡಬೇಕಾಗಿವುದು ಇಂಥ ವಿಚಾರಗಳ ಬಗ್ಗೆೆ. ಹಸು, ಎಮ್ಮೆೆ ಸಾಕಾಣಿಕೆಯು ತಕ್ಷಣದ ಆದಾಯವನ್ನು ಹೆಚ್ಚು ಮಾಡುತ್ತದೆ. ಜನರು ಗುಳೆ ಹೋಗುವುದನ್ನು ತಪ್ಪಿಿಸುತ್ತದೆ. ಜನ ನಿಂತರೆ ಅಲ್ಲಿ ಉತ್ತಮ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ. ಉತ್ತಮ ಶಿಕ್ಷಣವು ಉತ್ತಮ ಜೀವನದ ಕಡೆಗೆ ಮುನ್ನಡೆಯಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.
371 ಜೆ ಸ್ಥಾಾನಮಾನ ಕೊಟ್ಟಿಿದ್ದೇ ಕಾಂಗ್ರೆೆಸ್ ನೀವೇನು ಮಾಡಿದ್ದೀರಿ ಎಂದು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಸಿಎಂ ಈ ಸ್ಥಾಾನಮಾನ ದೊರೆತ ನಂತರ ತಾಂತ್ರಿಿಕ, ವೈದ್ಯಕೀಯ ಶಿಕ್ಷಣ ಹಾಗೂ ಇನ್ನಿಿತರ ಪದವಿ ಹಾಗೂ ವೃತ್ತಿಿಪರ ಶಿಕ್ಷಣ ಸಂಸ್ಥೆೆಗಳಲ್ಲಿ ಶೇ.70 ರಷ್ಟು ಸ್ಥಾಾನಗಳನ್ನು ಮತ್ತು ರಾಜ್ಯದ ಉಳಿದ ಭಾಗಗಳಲ್ಲಿ ಶೇ.8 ರಷ್ಟು ಸ್ಥಾಾನಗಳನ್ನು ಈ ಭಾಗದ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ. ಇದರ ಪರಿಣಾಮ 2014-15 ರಿಂದ 2024 ರ ಶೈಕ್ಷಣಿಕ ಸಾಲಿನವರೆಗೆ 10,000ಕ್ಕೂ ಹೆಚ್ಚು ವಿದ್ಯಾಾರ್ಥಿಗಳು ವೈದ್ಯಕೀಯ, 31,000ಕ್ಕೂ ಹೆಚ್ಚು ವಿದ್ಯಾಾರ್ಥಿಗಳು ಇಂಜಿನಿಯರಿಮಗ್ ಕಾಲೇಜುಗಳಲ್ಲಿ ಪ್ರವೇಶ ಪಡೆದಿದ್ದಾರೆ. ಇದಲ್ಲದೆ 12,000 ಕ್ಕಿಿಂತ ಹೆಚ್ಚಿಿನ ವಿದ್ಯಾಾರ್ಥಿಗಳು ದಂತ ವೈದ್ಯಕೀಯ, ಹೋಮಿಯೋಪತಿ, ಕೃಷಿ ಸಂಬಂಧಿತ, ಬಿ-ಾರ್ಮಸಿ/ ಡಿ-ಾರ್ಮಸಿ ಕೋರ್ಸುಗಳು ಮುಂತಾದವುಗಳಿಗೆ ಮೀಸಲಾತಿ ಸೌಲಭ್ಯದಿಂದ ಉನ್ನತ ಶಿಕ್ಷಣ ಪಡೆಯಯಲು ಸಾಧ್ಯವಾಗಿದೆ ಎಂದು ವಿವರಿಸಿದರು.
ಕೇಂದ್ರ ಅಸಹಕಾರ :
ಕೃಷ್ಣ ಮೇಲ್ದಂಡೆ 3 ನೇ ಹಂತದ ಯೋಜನೆಯಲ್ಲಿ ನಮಗೆ 173 ಟಿ.ಎಂ.ಸಿ. ನೀರು ಹಂಚಿಕೆಯಾಗಿದ್ದು, ಆಲಮಟ್ಟಿಿ ಜಲಾಶಯವನ್ನು 519 ಮೀ. ನಿಂದ 524 ಮೀ.ಗೆ ಹೆಚ್ಚಿಿಸಲು ಈಗಾಗಲೇ ಅನುಮತಿ ದೊರೆತಿದೆ. ಇದುವರೆಗೂ ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸಿಲ್ಲ. ಯೋಜನೆಗೆ 75 ಸಾವಿರ ಹೆಕ್ಟರ್ ಭೂಮಿಯನ್ನು ಒಂದೇ ಹಂತದಲ್ಲಿ ಸ್ವಾಾಧೀನ ಪಡಿಸಿಕೊಂಡು, ತರಿ ಭೂಮಿಗೆ ಪ್ರತಿ ಹೆ. ಗೆ 40 ಲಕ್ಷ ರೂ., ಹಾಗೂ ಖುಷ್ಕಿಿ ಭೂಮಿಗೆ 30 ಲಕ್ಷ ರೂ. ಕೊಡಲು ನಾವು ಸಿದ್ಧರಿದ್ದು, ಈಗಾಗಲೆ ರೈತರು ಕೂಡ ಒಪ್ಪಿಿಕೊಂಡಿದ್ದಾರೆ. ಮುಂದಿನ ಬಜೆಟ್ನಲ್ಲಿ ಇದಕ್ಕೆೆ ಅನುದಾನ ಒದಗಿಸಲು ನಾವು ಸಿದ್ಧರಿದ್ದೇವೆ, ಕೊಟ್ಟ ಮಾತಿನಂತೆ ನಡೆದುಕೊಳ್ಳುವ ಸರ್ಕಾರ ನಮ್ಮದು ಎಂದರು.

