ಸುದ್ದಿಮೂಲವಾರ್ತೆ
ಕೊಪ್ಪಳ ಜೂ 12:
ಕೊಪ್ಪಳ ಜಿಲ್ಲೆಯಲ್ಲಿ ಕಲುಷಿತ ನೀರಿನಿಂದ ಮೂವರು ಸಾವನ್ನಪ್ಪಿದ ಹಿನ್ನಲೆ ಮುಂದೆ ಇಂಥ ಪ್ರಕರಣಗಳು ಮರುಕಳಿಸಬಾರದು. ಮರುಕಳಿಸಿದರೆ ಜಿಲ್ಲಾ ಪಂಚಾಯತ್ ಸಿಇಒ ಹೊಣೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ ಎಂದು ಕೊಪ್ಪಳ ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ರತ್ನಂ ಪಾಂಡೆಯಾ ತಿಳಿಸಿದ್ದಾರೆ.
ಇಂದು ಸಿಎಂ ಸಿದ್ದರಾಮಯ್ಯ ರಿಂದ ವಿಡಿಯೋ ಕಾನ್ಫರೆನ್ಸ್ ನಡೆಸಿದರು.ಕುಡಿಯುವ ನೀರಿನ ಸಮಸ್ಯೆ ಕುರಿತು ಜಿಲ್ಲಾ ಆಡಳಿತ ಭವನದ ವಿಡಿಯೋ ಕಾನ್ಫರೆನ್ಸ್ ಕೊಠಡಿಯಲ್ಲಿ ಡಿಸಿ,ಸಿಇಓ ಸೇರಿದಂತೆ ಹಲವು ಅಧಿಕಾರಿಗಳು ಭಾಗಿಯಾಗಿದ್ದರು. ಜಿಲ್ಲೆಯಲ್ಲಿ ಕಳೆದ ವಾರದಲ್ಲಿ ಕಲುಷಿತ ನೀರಿನಿಂದ ಮೂವರು ಸಾವನ್ನಪ್ಪಿದ್ದರು. ಈ ಹಿನ್ನಲೆಯಲ್ಲಿ ಸಿದ್ದರಾಮಯ್ಯ ವಿಡಿಯೋ ಕಾನ್ಫರೆನ್ಸ್ ನಡೆಸಿದರು.ಕೊಪ್ಪಳ ಜಿಲ್ಲೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಜಿಲ್ಲೆಯ ತಹಶೀಲ್ದಾರ್ ಗಳು,ತಾ.ಪಂ ಇಓ,ನಗರಸಭೆ,ಪುರಸಭೆ,ಪಟ್ಟಣ ಪಂಚಾಯತಿ ಅಧಿಕಾರಿಗಳು ಭಾಗಿಯಾಗಿದ್ದರು.
ವಿಡಿಯೋ ಕಾನ್ಫರೆನ್ಸ್ ನಂತರ ಮಾಧ್ಯಮಗಳೊಂದಿಗೆ ಮಾಹಿತಿ ಮುಖ್ಯಮಂತ್ರಿಗಳು ಮಾಹಿತಿ ಕೇಳಿದರು. ಸಾವು ಪ್ರಕರಣದ ಕುರಿತು ವರದಿ ನೀಡಲು ಸೂಚಿಸಿದ್ದಾರೆ.ರಾಜ್ಯದಿಂದಲೂ ಒಂದು ತಂಡ ತನಿಖೆಗೆ ಆಗಮಿಸಲಿದೆ.ಕುಡಿವ ನೀರು ಸಮಸ್ಯೆಯಾದರೆ ಕ್ರಮ ಎಂದು ಹೇಳಿದ್ದಾರೆ ಎಂದರು.
ಜಿಲ್ಲೆಯಲ್ಲಿ ಎಲ್ಲಾ ಗ್ರಾಮಗಳ ಕುಡಿವ ನೀರಿನ ಪರೀಕ್ಷೆ ಮಾಡಲಾಗುವುದು.ಮೇಲ್ಮಟ್ಟ ಕುಡಿವ ನೀರಿನ ಟ್ಯಾಂಕಗಳ ಸ್ವಚ್ಛಗೊಳಿಸಲಾಗುತ್ತಿದೆ.ನಿತ್ಯ ತಾಲೂಕಾ ಪಂಚಾಯತ್ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುತ್ತಿದೆ.ಸಮಸ್ಯಾತ್ಮಕ ಗ್ರಾಮಗಳಲ್ಲಿ ತಕ್ಷಣ ಪರಿಹಾರ
ಕುಡಿವ ನೀರು ಅಯೋಗ್ಯವಾಗಿದ್ದರೆ ಟ್ಯಾಂಕರ ಮೂಲಕ ನೀರು ನೀಡಲಾಗುವದು ಎಂದು ತಿಳಿಸಿದರು.