ಸುದ್ದಿಮೂಲ ವಾರ್ತೆ ರಾಯಚೂರು, ಜ.06:
ರಾಯಚೂರು ಮಹಾನಗರ ಪಾಲಿಕೆಯ ಅಧ್ಯಕ್ಷತೆಯಲ್ಲಿ ಜನವರಿ 7ರ ಬೆಳಿಗ್ಗೆೆ 11 ಗಂಟೆಗೆ ಮಹಾನಗರ ಪಾಲಿಕೆ ಜೋನಲ್-2 ಕೋರ್ಟ ಹಾಲ್ (ಹಳೆ ಜಿಲ್ಲಾಧಿಕಾರಿಗಳ ಕಚೇರಿ) ಸಭೆ ಕರೆಯಲಾಗಿದೆ.
ಈ ಸಭೆಯಲ್ಲಿ ರಾಯಚೂರು ಮಹಾನಗರಪಾಲಿಕೆ ವತಿಯಿಂದ ಅನುಷ್ಠಾಾನವಾಗುತ್ತಿಿರುವ ಶೇ.29 ಪ.ಜಾತಿ ಪ.ಪಂಗಡ ಶೇ.7.25 ಇತರೆ ಹಿಂದುಳಿದ ಜನಾಂಗ ಶೇ.5 ವಿಕಲಚೇತನರ ಮುಂತಾದ ಬಡತನ ನಿರ್ಮೂಲನ ಯೋಜನೆಗಳ ಕುರಿತು, ಬಾಕಿ ಉಳಿದ ಅನುದಾನಕ್ಕೆೆ ಆರ್ಹ ಬಡವರಿಗೆ ಸದುಪಯೋಗವಾಗುವಂತ ಚಟುವಟಿಕೆಗಳ ಕ್ರಿಿಯಾ ಯೋಜನೆ ಕೈಗೆತ್ತಿಿಕೊಳ್ಳಬೇಕಾಗಿರುತ್ತದೆ. ಆದಕಾರಣ ಪ.ಜಾತಿ/ಪ.ಪಂಗಡ, ಇತರೆ ಹಿಂದುಳಿದ ವರ್ಗ, ವಿಕಲಚೇತನರು, ಮ್ಯಾಾನ್ಯುಯಲ್ ಸ್ಕ್ಯಾಾವೆಂಜರ್ ಮುಂತಾದ ಸಂಘಟನೆಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಕರೆದಿರುವ ಸಭೆಗೆ ತಪ್ಪದೆ ಹಾಜರಾಗಿ ಕ್ರಿಿಯಾ ಯೋಜನೆಯನ್ನು ಸುತ್ತೋೋಲೆ ಪ್ರಕಾರ ರೂಪಿಸುವುದಕ್ಕೆೆ ಸಲಹೆ ಸೂಚನೆಗಳನ್ನು ನೀಡಬೇಕೆಂದು ರಾಯಚೂರು ಮಹಾನಗರ ಪಾಲಿಕೆಯ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

