ಸುದ್ದಿಮೂಲವಾರ್ತೆ
ಕೊಪ್ಪಳ ಸೆ 23:ಲೋಕಸಭೆ ಚುನಾವಣೆಗೆ ಬಿಜೆಪಿ ಜೆಡಿಎಸ್ ಮೈತ್ರಿಯು ರಾಷ್ಟ್ರೀಯತೆ ಇಟ್ಟುಕೊಂಡು ಮೈತ್ರಿ ಮಾಡಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಕೋಟಾ ಶ್ರೀನಿವಾಸ ಪೂಜಾರ ಹೇಳಿದ್ದಾರೆ.
ಅವರು ಇಂದು ಕೊಪ್ಪಳದಲ್ಲಿ ಬಿಜೆಪಿ ಕಚೇರಿಗೆ ಭೇಟಿಯ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಶಕ್ತಿ ಪ್ರಬಲವಾಗಿ ಬೆಳೆಯುತ್ತದೆ. ರಾಜ್ಯದಲ್ಲಿ ಜೆಡಿಎಸ್ ಒಂದು ಪ್ರಬಲ ರಾಜಕೀಯ ಪಕ್ಷವಾಗಿ ಜನ ಮಾನಸದಲ್ಲಿದೆ. ಬಿಜೆಪಿ ಜೆಡಿಎಸ್ ಮೈತ್ರಿ ಮನಪೂರ್ವಕ ಸ್ನೇಹವಾಗಿದೆ. ಮೈತ್ರಿಯನ್ನು ಸ್ನೇಹಕ್ಕೆ ಹೋಲಿಸಿ ಸ್ನೇಹ ಗಟ್ಟಿಯಾಗಿರುತ್ತೆ ಎಂದರು.
ರಾಜಕಾರಣದಲ್ಲಿ ಕೆಲವೊಮ್ಮೆ ಅನಿವಾರ್ಯ,ಅಗತ್ಯತೆ ಇರುತ್ತೆ. ಜೆಡಿಎಸ್ ಗೆ ಸೋಲು,ಗೆಲುವು ಹೊಸದಲ್ಲ.ಜೆಡಿಎಸ್ ನಿರ್ಲಕ್ಷ್ಯ ಪಾರ್ಟಿಯಲ್ಲ. ಅವರದೇ ಶಕ್ತಿ ಇದೆ ಎಂದರು.
ರೈತರ ಹಿತಕ್ಕೆ,ರಾಜ್ಯದ ಹಿತಕ್ಕೆ ಧಕ್ಕೆ ಬಂದಾಗ ಬೀದಿಗಿಳಿದು ಪ್ರತಿಭಟನೆ ಮಾಡುವುದು ಅನಿವಾರ್ಯವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಸಹಜ.ನಮ್ಮಲ್ಲೇ ನೀರೇ ಇಲ್ಲ,ಬೇರೆ ಅವರಿಗೆ ಹೇಗೆ ಬಿಡಬೇಕು. ಕೋರ್ಟ್ ನಲ್ಲಿ ಮನವರಿಕೆ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ. ಪ್ರಧಾನಿ ಮಧ್ಯಸ್ಥಿಕೆ, ಸಿದ್ಧರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ ಪ್ರಧಾನಿ ಮಧ್ಯಸ್ಥಿಕೆ ಪರಿಹಾರವಲ್ಲ.ಸುಪ್ರಿಂ ಕೋರ್ಟ್ನಲ್ಲಿ ರಾಜ್ಯ ಸರ್ಕಾರ ಮನವರಿಕೆ ಮಾಡಬೇಕು ಎಂದರು.
ಕಾಂಗ್ರೆಸ್ನಲ್ಲಿ ಡಿಸಿಎಂ ಗದ್ದಲ ವಿಚಾರವಾಗಿ ಮಾತನಾಡಿ ಸಚಿವ ಕೆ.ಎನ್. ರಾಜಣ್ಣ ಹೇಳಿಕೆ ಗಮನಿಸಿದ್ದೇನೆ. 3 ಉಪಮುಖ್ಯ ಮಂತ್ರಿ,5 ಮಾಡಬೇಕಾ,ಜಿಲ್ಲೆಗೊಂದು ಮಾಡಬೇಕಾ..? ಏನ್ ಬೇಕಾದರೂ ಮಾಡಿಕೊಳ್ಳಲಿ.ಮೊದಲು ಬರದಿಂದ ತತ್ತರಿಸಿರುವ ರೈತರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಲಿ.ಹಿಂದೆ ಯಡಿಯೂರಪ್ಪ ಸಿಎಂ ಇದ್ದಾಗ ಬರಹಕ್ಕೆ ಸ್ಪಂದಿಸುತ್ತಿದ್ದರು. ಸ್ಪಂದಿಸಕಾಗದೆ ಕೇಂದ್ರದ ಮೇಲೆ ಹಾಕುತ್ತಾರೆ. ಬರ ಪರಿಹಾರ ನೀಡುವ ಬಗ್ಗೆ ರಾಜ್ಯ ಸರ್ಕಾರ ಗಮನಹರಿಸಲಿ. ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ಬಿಜೆಪಿ ವಿಭಾಗೀಯ ಸಹ ಪ್ರಭಾರಿ ಚಂದ್ರಶೇಖರ ಹಲಗೇರಿ. ನಗರ ಬಿಜೆಪಿ ಅಧ್ಯಕ್ಷ ಸುನೀಲ ಹೆಬಸೂರು. ಮೊದಲಾದವರು ಇದ್ದರು.