ಸುದ್ದಿಮೂಲ ವಾರ್ತೆ ಹರಪನಹಳ್ಳಿ, ಜ.13:
ರಾಜನಹಳ್ಳಿಿ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ೆ.8 ಮತ್ತು 9 ರಂದು ನಡೆಯುವ ರಾಜ್ಯಮಟ್ಟದ ಮಹರ್ಷಿ ವಾಲ್ಮೀಕಿ ಜಾತ್ರೆೆಯಲ್ಲಿ ಮುಖ್ಯವಾಗಿ ರಾಜ್ಯ ಸರ್ಕಾರದ ಶಿಾರಸಿನಂತೆ ಪ. ಪಂಗಡದ ಶೇ7ಮೀಸಲಾತಿ 9 ನೇ ಶೆಡ್ಯೂಲ್ ಗೆ ಸೇರಿಸಲು ವಾಲ್ಮೀಕಿ ಜಾತ್ರೆೆಯಲ್ಲಿ ಗುರುಗಳ ಸಮ್ಮುಖದಲ್ಲಿ ಕೇಂದ್ರ ಸರ್ಕಾರಕ್ಕೆೆ ಹಕ್ತೊೊತ್ತಾಾಯ ಮಾಡಲಾಗುವುದು ಎಂದು ನಾಯಕ ಸಮುದಾಯದ ಗೌರವಾಧ್ಯಕ್ಷ ಎಚ್ ಕೆ ಹಾಲೇಶ್ ತಿಳಿಸಿದರು.
ಹರಪನಹಳ್ಳಿಿ ನಗರದ ಪ್ರವಾಸಿ ಮಂದಿರದಲ್ಲಿ ಮಹರ್ಷಿ ವಾಲ್ಮೀಕಿ ಜಾತ್ರೆೆಯ ನಿಮಿತ್ತ ಮಂಗಳವಾರ ನಡೆದ ಪೂರ್ವಭಾವಿ ಸಭೆಯಕುರಿತು ಪತ್ರಿಿಕಾಗೋಷ್ಠಿಿಯಲ್ಲಿ ಮಾತನಾಡಿ, ಜಾತ್ರೆೆಗಳೆಂದರೆ ಧಾರ್ಮಿಕ ಕಾರ್ಯಕ್ರಮಗಳು ಮಾತ್ರ ಜರುಗುತ್ತವೆ ಆದರೆ ವಾಲ್ಮೀಕಿ ಜಾತ್ರೆೆಯಲ್ಲಿ ಇಡೀ ರಾಜ್ಯಾದ್ಯಂತ ಇರುವ ಸಮುದಾಯ ಒಗ್ಗೂಡಿಸಿ ಸಮಾಜದ ಜಾಗೃತಿಯ ಜೊತೆಗೆ ಸಮಾಜದಲ್ಲಿ ವೈಚಾರಿಕ ಪ್ರಜ್ಞೆ ಬೆಳೆಸುವುದು ಹಾಗೂ ರಾಜಕೀಯ, ಸಾಮಾಜಿಕ, ಮತ್ತು ಶೈಕ್ಷಣಿಕ. ಮತ್ತು ಔದ್ಯೋೋಗಿಕ ಪ್ರಗತಿ ಸಾಧಿಸುವ ಗುರಿ ಹೊಂದುವುದು ಜಾತ್ರೆೆಯ ಪ್ರಮುಖ ಉದ್ದೇಶವಾಗಿದೆ ಎಂದರು.
ಜಾತ್ರಾಾ ಸಮಿತಿಯ ಅಧ್ಯಕ್ಷ ಆರ್ ಲೋಕೇಶ್ ಮಾತನಾಡಿ, ತಾಲೂಕಿನಲ್ಲಿ ಈಗಾಗಲೇ 11 ದಿನಗಳ ಪ್ರವಾಸ ಕೈಗೊಂಡು 150 ಕ್ಕೂ ಹೆಚ್ಚು ಹಳ್ಳಿಿಗಳು ಹಾಗೂ ಪಟ್ಟಣದಲ್ಲಿರುವ ಸಮುದಾಯದ ಬಡಾವಣೆಗೆ ತೆರಳಿ ಜಾತ್ರೆೆಗೆ ಆಗಮಿಸಲು ಆಹ್ವಾಾನಿಸಲಾಯಿತು, ಜಾತ್ರೆೆಯಲ್ಲಿ 5 ಲಕ್ಷಕ್ಕೂ ಹೆಚ್ಚು ಜನ ಸೇರುವ ಸಂಭವವಿದ್ದು ಮಠದಲ್ಲಿ 28ನೇ ವಾರ್ಷಿಕೋತ್ಸವ ಮತ್ತು ಲಿಂಗೈಕ್ಯ ಪುಣ್ಯಾಾನಂದಪುರಿ ಶ್ರೀಗಳ 19ನೇ ಪುಣ್ಯಾಾರಾಧನೆ, ಪ್ರಸನ್ನಾಾನಂದ ಪುರಿ ಶ್ರೀಗಳ 18ನೇ ವರ್ಷದ ಪಟ್ಟಾಾಧಿಕಾರ ಮಹೋತ್ಸವ ಅದ್ದೂರಿಯಾಗಿ ಆಚರಿಸಲಾಗುತ್ತದೆ ಇದರ ಭಾಗವಾಗಿ ತಾಲೂಕಿನಿಂದ ಹೆಚ್ಚು ಜನರು ತಮ್ಮ ತನು ಮನ ಧನದೊಂದಿಗೆ ಪಾಲ್ಗೊೊಳ್ಳಬೇಕು ಎಂದರು.
ವಾಲ್ಮೀಕಿ ಸಮಾಜದ ಮಾಜಿ ಅಧ್ಯಕ್ಷ ಕೆ ಉಚ್ಚೆೆಂಗೆಪ್ಪ ಮಾತನಾಡಿ. ೆ 8ರಂದು ವಾಲ್ಮೀಕಿ ಭಾವಚಿತ್ರ ಬೃಹತ್ ಮೆರವಣಿಗೆ, ಮಹರ್ಷಿಗಳ ರಥೋತ್ಸವ ಧ್ವಜಾರೋಹಣ, ಸರ್ವಧರ್ಮ ಸಾಮೂಹಿಕ ವಿವಾಹಗಳು, ಬುಡಕಟ್ಟು ವಸ್ತು ಪ್ರದರ್ಶನ, ಉದ್ಯೋೋಗ, ಕೃಷಿ ಮೇಳ ನಂತರ ಮಹಿಳಾ, ನೌಕರರ, ಯುವಕರ, ವೈದ್ಯರ, ವಕೀಲರ ಗೋಷ್ಠಿಿಗಳು, ಪ್ರತಿಭಾವಂತ ವಿದ್ಯಾಾರ್ಥಿಗಳಿಗೆ ಪುರಸ್ಕಾಾರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಸಮಾಜದ ಜನರು ಹೆಚ್ಚಿಿನ ಸಂಖ್ಯೆೆಯಲ್ಲಿ ಜಾತ್ರೆೆಗೆ ತೆರಳುವಂತೆ ಮನವಿ ಮಾಡಿದರು. ನಂತರ ಸಭೆಯಲ್ಲಿ ಜಾತ್ರೆೆಯ ಭಿತ್ತಿಿ ಪತ್ರಗಳನ್ನು ಅನಾವರಣಗೊಳಿಸಲಾಯಿತು.
ಈ ವೇಳೆ ಅಧ್ಯಕ್ಷ ಆರ್ ಲೋಕೇಶ್, ಸಮಾಜದ ಮಹಿಳಾ ಅಧ್ಯಕ್ಷೆ ಎಚ್ ಟಿ ವನಜಾಕ್ಷಮ್ಮ, ಕಾರ್ಯದರ್ಶಿ ಎಚ್ ಕೆ ಮಂಜುನಾಥ, ಸಮಾಜದ ಮುಖಂಡರಾದ ಗಿರಜ್ಜಿಿ ನಾಗರಾಜ್. ತೆಲಿಗಿ ಅಂಜಿನಪ್ಪ, ಶಿವಪ್ಪ, ತಳವಾರ ಅಂಜಿನಪ್ಪ, ಮಹಿಳಾ ಕಾರ್ಯದರ್ಶಿ ಲಕ್ಷ್ಮಿಿ ಚಂದ್ರಶೇಖರ, ಗಿಡ್ಡಳ್ಳಿಿ ನಾಗರಾಜ, ದಾದಾಪುರ ಶಿವಾನಂದ, ಪಟ್ನಾಾಮದ್ ಪರಶುರಾಮ, ಗುಂಡಿ ಮಂಜುನಾಥ,ಕೆಂಗಳ್ಳಿಿ ಪ್ರಕಾಶ, ಕರಿಯಪ್ಪ, ಪೂರ್ಜಾ ರಾಜು, ಮ್ಯಾಾಸ ಕೇರಿ ರಘು, ಪಿ ವೆಂಕಟೇಶ್, ಮಂಡಕ್ಕಿಿ ಸುರೇಶ್, ಟಿಬಿ ರಾಜಪ್ಪ. ತಳವಾರ್ ಚಂದ್ರಪ್ಪ ಚಿಕ್ಕೇರಿ ಯಂಕಪ್ಪ, ಆಲೂರು ಶ್ರೀನಿವಾಸ, ರಾಯದುರ್ಗ ವಾಗೀಶ, ಪೂಜಾರ್ ಮಾರುತಿ, ಕವಸರ ಬಸವರಾಜ.ಗಿರಿ ಸೇರಿದಂತೆ ಅನೇಕ ಸಮಾಜ ಬಾಂಧವರು ಹಾಜರಿದ್ದರು.
‘ಪರಿಶಿಷ್ಟ ಪಂಗಡದ ಶೇ 7 ಮೀಸಲಾತಿ 9ನೇ ಶೆಡ್ಯೂಲ್ಗೆ ಸೇರಿಸಿ’

