ಸುದ್ದಿಮೂಲ ವಾರ್ತೆ ರಾಯಚೂರು, ಜ.19:
ಜಿಲ್ಲೆೆಯ ಸಿರವಾರ ತಾಲೂಕಿನ ಅತ್ತನೂರು ಗ್ರಾಾಮದ ಜನತಾ ಕಾಲೋನಿಯ ಸರ್ಕಾರಿ ಶಾಲೆಗೆ ದಾನಿಗಳು ನೀಡಿದ ಭೂಮಿಯಲ್ಲಿ ತಡೆಗೋಡೆ ನಿರ್ಮಾಣಕ್ಕೆೆ ಮಕ್ಕಳ ರಕ್ಷಣಾಧಿಕಾರಿ ಹನುಮೇಶ ಅಡ್ಡಿಿಪಡಿಸುತ್ತಿಿದ್ದಾಾರೆ ಎಂದು ಗ್ರಾಾಮದ ಮುಖಂಡ ಮಹಾಂತೇಶ ಅತ್ತನೂರು ಆರೋಪಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ಗ್ರಾಾಮದ ಸರ್ಕಾರಿ ಶಾಲೆಗಾಗಿ ತಿಪ್ಪಯ್ಯಘಿ, ಬಸಮ್ಮ ಹಾಗೂ ಬಸವರಾಜ ಎನ್ನುವವರು ಭೂಮಿ ದಾನ ಮಾಡಿದ್ದಾಾರೆ. ಅದು ಗ್ರಾಾಮ ಪಂಚಾಯಿತಿಯಲ್ಲಿಯೂ ಶಾಲೆ ಸರ್ಕಾರದ ಹೆಸರಿಗೆ ಇ-ಆಸ್ತಿಿ ಮಾಡಲಾಗಿದೆ ಎಂದರು.
ಆ ಶಾಲೆಯಲ್ಲಿ ಬಡ ಮಕ್ಕಳು ವಿದ್ಯಾಾಭ್ಯಾಾಸ ಮಾಡುತ್ತಿಿದ್ದಾಾರೆ ರಕ್ಷಣೆ ಇಲ್ಲದ ಕಾರಣ ಪಂಚಾಯಿತಿಯಿಂದ ಉದ್ಯೋೋಗ ಖಾತ್ರಿಿಯಡಿ ತಡೆಗೋಡೆ ನಿರ್ಮಿಸಲು ಮುಂದಾಗಿದ್ದಾಾರೆ. ಆ ಜಾಗ ಮಾನ್ವಿಿ ಕ್ಷೇತ್ರ ಶಿಕ್ಷಣಾಧಿಕಾರಿ ಸಂಬಂಧಿಕರದ್ದು ಆದರೆ, ಸಂಬಂಧವೇ ಇಲ್ಲದ ರಾಯಚೂರು ಜಿಲ್ಲೆೆಯ ಮಕ್ಕಳ ರಕ್ಷಣಾಧಿಕಾರಿಯಾಗಿರುವ ಹನುಮೇಶ ಮತ್ತವರ ಕುಟುಂಬದವರು ಜಾಗ ತಮಗೆ ಸೇರಿದ್ದು ಎಂದು ಆಕ್ಷೇಪಿಸಿ ಕೆಲಸ ನಿಲ್ಲಿಸಿದ್ದಾಾರೆ ಎಂದು ದೂರಿದರು.
ಈ ಬಗ್ಗೆೆ ಶಿಕ್ಷಣ ಸಚಿವ, ಜಿಲ್ಲೆೆಯ ಶಾಸಕರಿಗೆ, ಅಧಿಕಾರಿಗಳಿಗೂ ದೂರು ಸಲ್ಲಿಸಿದ್ದರೂ ಯಾವುದೆ ಕ್ರಮವಾಗುತ್ತಿಿಲ್ಲಘಿ. ಪಂಚಾಯಿತಿಯವರಾಗಲಿ, ಎಸ್ಡಿಎಂಸಿಯವರಾಗಲಿ ಕಾಳಜಿ ವಹಿಸದ ಕಾರಣ ಪ್ರಭಾವ ಬಳಸಿ ಹನುಮೇಶ ಆತನ ಕುಟುಂಬದವರು ದೌರ್ಜನ್ಯ ಮಾಡಿ ತಡೆಗೋಡೆ ನಿರ್ಮಾಣ ತಡೆದಿದ್ದು ತಕ್ಷಣ ಅವರ ವಿರುದ್ಧ ಕ್ರಮ ಜರುಗಿಸಿ ಮಕ್ಕಳ ಭದ್ರತೆಗಾಗಿ ಕಾಮಗಾರಿ ಪೂರ್ಣಗೊಳಿಸಲು ಮುಂದಾಗದೆ ಹೋದರೆ ಕಾನೂನು ಹೋರಾಟದ ಜೊತೆಗೆ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಿಯಲ್ಲಿ ಸುದರ್ಶನ, ಶಿವರಾಜ, ಬಸವರಾಜ, ಮಲ್ಲಿಕಾರ್ಜುನ ಇತರರಿದ್ದರು.

