ಸುದ್ದಿಮೂಲ ವಾರ್ತೆ ಜಾಲಹಳ್ಳಿ, ಡಿ.20:
ಸಮೀಪದ ಹೆಚ್.ಸಿದ್ದಾಪುರ ಗ್ರಾಾಮ ಪಂಚಾಯಿತಿ ವ್ಯಾಾಪ್ತಿಿಯ 6 ಗ್ರಾಾಮಗಳನ್ನು ಹೊಸ ತಾಲ್ಲೂಕು ಕೇಂದ್ರವಾಗಿರುವ ಅರಕೇರಕ್ಕೆೆ ಸೇರಿಸಲಾಗಿತ್ತು, ಅದನ್ನು ಮರಳಿ ದೇವದುರ್ಗಕ್ಕೆೆ ಸೇರ್ಪಡೆ ಮಾಡಲು ಆಕ್ಷೇಪಣೆಗಳು ಇದ್ದಲ್ಲಿ ಸಲ್ಲಿಸಲು ಡಿಸೆಂಬರ್ 30 ರ ವರೆಗೆ ಕಾಲಾವಾಕಾಶ ಕಲ್ಪಿಿಸಲಾಗಿದೆ ಎಂದು ತಹಶೀಲ್ದಾಾರ್ ನಾಗಮ್ಮ ಕಟ್ಟಿಿಮನಿ ತಿಳಿಸಿದ್ದಾರೆ.
ಈಗಾಗಲೇ ರಾಯಚೂರು ಜಿಲ್ಲಾಧಿಕಾರಿ, ರಾಜ್ಯ ಸರ್ಕಾರದ ಕಂದಾಯ ಇಲಾಖೆ ಪ್ರದಾನ ಕಾರ್ಯದರ್ಶಿ ಬೆಂಗಳೂರು ಅವರು ಪತ್ರ ಬರೆದು ತಿಳಿಸಿದ್ದಾರೆ. ಅರಕೇರ ತಾಲ್ಲೂಕಿನ ಹೆಚ್. ಸಿದ್ಧಾಾಪುರ ಗ್ರಾಾಮ ಪಂಚಾಯಿತಿ ವ್ಯಾಾಪ್ತಿಿಯ 06 ಗ್ರಾಾಮಗಳನ್ನು ದೇವದುರ್ಗ ತಾಲ್ಲೂಕಿಗೆ ಸೇರ್ಪಡೆಗೊಳಿಸಿ ದಿನಾಂಕ: 01-12-2025 ರಂದು ಪ್ರಾಾಥಮಿಕ ಅಧಿಸೂಚನೆ ಹೊರಡಿಸಿದ್ದು, ಸದರಿ ಅಧಿಸೂಚನೆಯನ್ನು ದಿನಾಂಕ: 02-12-2025ರ ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗಿದೆ.
ಅಧಿಸೂಚನೆಯಲ್ಲಿ ತಿಳಿಸಿರುವಂತೆ ರಾಜ್ಯಪತ್ರದಲ್ಲಿ ಪ್ರಕಟಗೊಂಡ 30 ದಿನಗಳ ಒಳಗಾಗಿ ಸ್ವೀಕೃತವಾಗುವ ಆಕ್ಷೇಪಣೆ, ಸಲಹೆಗಳನ್ನು ಪರಿಶೀಲಿಸಿ, ಅಂತಿಮ ಅಧಿಸೂಚನೆ ಹೊರಡಿಸಲು ಕ್ರಮ ಕೈಗೊಳ್ಳಬೇಕಾಗಿರುತ್ತದೆ.
ಅದ್ದರಿಂದ, ಸದರಿ ಅಧಿಸೂಚನೆಯನ್ನು ಪ್ರಚಾರ ಪಡಿಸಿ ನಿಗದಿತ ಅವಧಿಯಲ್ಲಿ ಸ್ವೀಕೃತವಾಗುವ ಎಲ್ಲಾ ಆಕ್ಷೇಪಣೆ , ಸಲಹೆಗಳನ್ನು ಸೂಕ್ತ ರೀತಿಯಲ್ಲಿ ಪರಿಶೀಲಿಸಿ ತಮ್ಮ ಸ್ಪಷ್ಟ ಅಭಿಪ್ರಾಾಯದೊಂದಿಗೆ ಸರ್ಕಾರಕ್ಕೆೆ ವರದಿ ಸಲ್ಲಿಸುವಂತೆ ತಿಳಿಸಿರುತ್ತಾಾರೆ.
ಸಿದ್ದಾಪುರ ಗ್ರಾ.ಪಂ ಅರಕೇರಾದಿಂದ ದೇವದುರ್ಗಕ್ಕೆ ಸೇರ್ಪಡೆ : ಆಕ್ಷೇಪಣೆ ಅವಕಾಶ

